More

    ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಯಲಿ:ಪ್ರೊ. ಪಿ.ಕಣ್ಣನ್

    ವಿಜಯಪುರ : ಪುಸ್ತಕವನ್ನು ಕೊಂಡು ಓದುವ ಹವ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಆಗ ನಾವು ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಪ್ರೊ. ಪಿ.ಕಣ್ಣನ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ರಮೇಶ ಸೋನಕಾಂಬಳೆ ಅವರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

    ವಿಶ್ರಾಂತ ಕುಲಸಚಿವ ಪ್ರೊ.ಎಸ್.ಎ.ಖಾಜಿ ಮಾತನಾಡಿ, ಸಮಾಜ ಅಧ್ಯಯನ ವಿಷಯ ಅಷ್ಟೊಂದು ಸರಳ ವಿಷಯವಲ್ಲ. ತುಂಬಾ ಸವಾಲಿನ ವಿಷಯ. ಏಕಕಾಲದಲ್ಲಿ ಐದು ಕೃತಿಗಳನ್ನು ರಚಿಸಿ, ಬಿಡುಗಡೆಗೊಳಿಸಿರುವ ಡಾ. ರಮೇಶ ಸೋನಕಾಂಬಳೆ ಅವರ ಕಾರ್ಯ ಶ್ಲಾಘನೀಯ. ಪ್ರಕಟಗೊಂಡಿರುವ ಪುಸ್ತಕಗಳು ಸಮಾಜಕಾರ್ಯ ಅಧ್ಯಯನವನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಕುಲಸಚಿವ ಪ್ರೊ.ರಮೇಶ ಕೆ. ಮಾತನಾಡಿ, ಲೇಖಕರಿಗೆ, ಉಪನ್ಯಾಸಕರಿಗೆ ವಿಶ್ವವಿದ್ಯಾನಿಲಯವು ಬೆನ್ನೆಲುಬಾಗಿ ನಿಂತು ಸಹಾಯ, ಬೆಂಬಲ ನೀಡುತ್ತದೆ ಎಂದು ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಡಿ.ಎಂ.ಮದರಿ ಮಾತನಾಡಿ, ಪ್ರಕಟಿತ ಕೃತಿಗಳಲ್ಲಿರುವ ಮಾಹಿತಿಯನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಲೇಖಕ ಡಾ.ರಮೇಶ ಎಂ. ಸೋನಕಾಂಬಳೆ ಹಾಗೂ ಉರ್ಮಿಳಾ ಸೋನಕಾಂಬಳೆ ಅವರನ್ನು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸನ್ಮಾಸಿದರು.  ಪ್ರೊ.ಜಿ.ಬಿ.ಸೋನಾರ, ಪ್ರೊ.ಲಕ್ಷ್ಮೀದೇವಿ ವೈ., ಪ್ರೊ. ಶಾಂತಾದೇವಿ ಟಿ., ಡಾ.ಅಶೋಕಕುಮಾರ ಸುರಪುರ, ಡಾ.ಎಂ. ಪಿ ಬಳಿಗಾರ, ಪ್ರೊ.ಆರ್.ವಿ.ಗಂಗಶೆಟ್ಟಿ ಹಾಗೂ ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts