More

    ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ

    ಬೆಂಗಳೂರು: ಇತ್ತೀಚಿಗೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಸಾವಿರಾರು ಮಂದಿ ಗಲಭೆ ನಡೆಸಿ, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೂ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದರು. ಈ ಸಂಬಂಧ ಇಂದು(ಸೋಮವಾರ) ಸಿಎಂ ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಜೊತೆ ಭೇಟಿ ಮಾಡಿ ಹಲವು ಬೇಡಿಕೆಯುಳ್ಳ ಮನವಿಪತ್ರ ಸಲ್ಲಿಸಿದರು. ಕೆಲ ಸಮಯ ಸಿಎಂ ಜೊತೆ ಚರ್ಚಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ​ ಮೂರ್ತಿ, ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರಷ್ಟೇ. ಭದ್ರತೆ ಹೆಚ್ಚಿಸಲು ಸಿಎಂಗೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿರಿ ಕಚೇರಿಯಲ್ಲಿ ಏಜೆಂಟರ್ಸ್ ಕಾಣಿಸಿಕೊಂಡ್ರೆ ಅಟ್ಟಾಡಿಸಿಕೊಂಡು ಹೊಡೆಸುವೆ; ಎಚ್​.ಡಿ. ರೇವಣ್ಣ

    ಮೊನ್ನೆ ಸಿಎಂ ಜತೆ ಫೋನಿನಲ್ಲಿ ಮಾತಾಡಿದ್ದೆ. ನಮ್ಮನೆಯ ಅಕ್ಕಪಕ್ಕದ ಮನೆ, ವಾಹನಗಳನ್ನೂ ಗಲಭೆಕೋರರು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದ ಅಖಂಡ ಶ್ರೀನಿವಾಸ್​, ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಆಗಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಬಿಜೆಪಿ ಶಾಸಕರೊಂದಿಗೆ ಸಿಎಂ ಭೇಟಿಗೆ ಬಂದ ಬಗ್ಗೆ ಪ್ರತಿಕ್ರಿಯಿಸಿದ ಅಖಂಡ ಶ್ರೀನಿವಾಸ್​, ನಮ್ಮ ಭೋವಿ ಸಮಾಜದ ಮುಖಂಡರೊಂದಿಗೆ ಸಿಎಂ ಭೇಟಿಯಾಗಲು ಆಗಮಿಸಿದೆ. ನಮ್ಮ ಸಮಾಜದ‌ ಮುಖಂಡರೂ ಇದ್ರು. ನಾನು ಕಾಂಗ್ರೆಸ್ ಬಿಡಲ್ಲ, ನಮ್ಮ ತಂದೆಯೂ ಕಾಂಗ್ರೆಸ್ ನಲ್ಲೇ ಇದ್ದದ್ದು, ನಾನೂ ಕಾಂಗ್ರೆಸ್ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ‌ ಇರೋದು ಕಾಂಗ್ರೆಸ್ ಎಂದರು.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts