More

    ಹುಬ್ಬಳ್ಳಿಯಲ್ಲಿ ಅಕ್ಬರುದ್ದೀನ್ ಓವೈಸಿ ಓಡಾಟ; ಬೆಂಬಲಿಗರ ಜಮಾವಣೆ, ಅಡ್ಡಾದಿಡ್ಡಿ ವಾಹನ ಸಂಚಾರ

    ಹುಬ್ಬಳ್ಳಿ: ಪಾಲಿಕೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿರುವ ಎಐಎಂಐಎಂ ಪಕ್ಷದ ಮುಖಂಡ, ಸಂಸದ ಅಕ್ಬರುದ್ದೀನ್​ ಓವೈಸಿ, ನಗರದಲ್ಲಿ ಓಡಾಟ ನಡೆಸಿದ್ದು, ಸಂಚಾರ ದಟ್ಟಣೆ ಜತೆಗೆ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡ ಪ್ರಕರಣವೂ ವರದಿಯಾಗಿದೆ.

    ಓವೈಸಿ ಬಂದಿರುವುದರಿಂದ ಬೆಂಬಲಿಗರೂ ಜತೆಗೂಡಿದ್ದು, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಓಡಿಸಿದ್ದಾರೆ. ಹೀಗೆ ನಗರದ ಕೆಲವೆಡೆ ಓಡಾಟ ನಡೆಸಿರುವುದರಿಂದ ಚನ್ನಮ್ಮ ವೃತ್ತ ಸೇರಿ ಹಲವೆಡೆ ಟ್ರಾಫಿಕ್ ಜಾಮ್​ ಕಂಡುಬಂದಿದೆ.

    ಹುಬ್ಬಳ್ಳಿಯಲ್ಲಿ ಅಕ್ಬರುದ್ದೀನ್ ಓವೈಸಿ ಓಡಾಟ; ಬೆಂಬಲಿಗರ ಜಮಾವಣೆ, ಅಡ್ಡಾದಿಡ್ಡಿ ವಾಹನ ಸಂಚಾರ

    ಇನ್ನು ಕೆಲವರು ಸೆಲ್ಫಿಗೆ ಹಾಗೂ ಫೋಟೋ/ವಿಡಿಯೋಗೆ ಮುಗಿಬಿದ್ದಿದ್ದರಿಂದ ಜನಜಂಗುಳಿ ಸೃಷ್ಟಿಯಾಗಿತ್ತು. ಇಸ್ಲಾಂಪುರ, ಪಡದಯ್ಯನ ಹಕ್ಕಲ ಮತ್ತಿರೆಡೆಗೆ‌ ಭರ್ಜರಿ ಪ್ರಚಾರ ಕೈಗೊಳ್ಳುವ ವೇಳೆ ಸಾವಿರಾರು ಜನರು ಜಮಾಯಿಸಿ ಕರೊನಾ‌ ನಿಯಮ ಉಲ್ಲಂಘಿಸಿ ಪಕ್ಷದ ಅಭ್ಯರ್ಥಿ ಪರ‌ ಪ್ರಚಾರ ನಡೆಸಿದರು. ಅದಾಗ್ಯೂ ಪೊಲೀಸರೂ ಅಸಹಾಯಕರಾಗಿ ನೋಡುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು.

    ಶಿಕ್ಷಕರ ದಿನಾಚರಣೆಯ ಮರುದಿನವೇ ಶಾಲೆ ಶುರು; 6, 7, 8ರ ಭೌತಿಕ ತರಗತಿ ಆರಂಭಕ್ಕೆ ಅಸ್ತು

    ಒಂದೂವರೆ ವರ್ಷದ ಮಗುವಿಗೆ ಹೊಡೆದು ವಿಕೃತವಾಗಿ ವರ್ತಿಸಿದ್ದ ತಾಯಿಯ ಬಂಧನ; ಗಂಡನ ಮೇಲೆ ಸಿಟ್ಟಿಗೆ ಮಗುವಿಗೆ ಹಿಂಸೆ…

    ಹಣ ಅಕ್ರಮ ವರ್ಗಾವಣೆ ಸುಳಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌; ಐದು ಗಂಟೆಗಳಿಂದ ನಡೆಯುತ್ತಿದೆ ತೀವ್ರ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts