More

    ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ

    ಅಳವಂಡಿ: ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ ಮಟ್ಟ ಸುಧಾರಿಸಲು ಎಸ್ಡಿಎಂಸಿ ಸದಸ್ಯರು ಶ್ರಮಿಸಲಿ ಎಂದು ಮಾಜಿ ಎಸ್ಡಿಎಂಸಿ ಅಧ್ಯಕ್ಷ ತೋಟಯ್ಯ ಅರಳೆಲೆಮಠ ಹೇಳಿದರು.

    ಶಿಕ್ಷಣ ಮಟ್ಟ ಸುಧಾರಿಸಲು ಎಸ್ಡಿಎಂಸಿ ಸದಸ್ಯರು ಶ್ರಮಿಸಲಿ

    ಗ್ರಾಮದ ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಸೋಮವಾರ ಮಾತನಾಡಿದರು.

    ಇದನ್ನೂ ಓದಿ: ‘ಕ್ರಿಮಿನಲ್‌ಗಳ ಕಪಿಮುಷ್ಠಿಯಲ್ಲಿದೆ ಬಿಹಾರ’: ಹೀಗೆಂದಿದ್ದೇಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್?

    ಸರ್ಕಾರದ ಹಲವಾರು ಶೈಕ್ಷಣಿಕ ಯೋಜನೆಗಳನ್ನು ಮಕ್ಕಳಿಗೆ ತಲುಪಿಸಬೇಕಾಗಿದೆ. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸದಸ್ಯರು ಪ್ರತಿಯೊಬ್ಬರ ಸಹಕಾರ ಪಡೆಯುವುದು ಅವಶ್ಯವಾಗಿದೆ. ಪಾಲಕರು, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒತ್ತು ನೀಡಬೇಕು ಎಂದರು.
    ಮುಖ್ಯ ಶಿಕ್ಷಕ ಸುರೇಂದ್ರಗೌಡ ಪಾಟೀಲ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಓದಿಗೆ ಬೇಕಾದ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ. ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಎಸ್ಡಿಎಂಸಿ ಸದಸ್ಯರು ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಶಾಲೆ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

    ಎಸ್ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ಕರಡಿ, ಉಪಾಧ್ಯಕ್ಷೆ ನಿವೇದಿತಾ ತುಪ್ಪದಮಠ, ಸದಸ್ಯರಾದ ಭಾರತಿ ಶಿಳ್ಳಿನ, ರಾಘವೇಂದ್ರ ಮಹಾಂಕಾಳಿ, ಕಾಶಂಬಿ, ರೇಣುಕಾ ತಿರ್ಲಾಪುರ, ಹನುಮಂತಪ್ಪ ಮಾಗಳದ, ಮಂಜಮ್ಮ ಓಜನಹಳ್ಳಿ, ಗೋಣೇಶ ಬೆಸ್ತರ, ಪ್ರಮುಖರಾದ ಮಲ್ಲಪ್ಪ ಬೆಣಕಲ್, ಹನುಮಂತಪ್ಪ ಜೋಗಿನ ಹಾಗೂ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts