More

    ‘ಕ್ರಿಮಿನಲ್‌ಗಳ ಕಪಿಮುಷ್ಠಿಯಲ್ಲಿದೆ ಬಿಹಾರ’: ಹೀಗೆಂದಿದ್ದೇಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್?

    ಪಾಟನಾ: ಗೋಪಾಲ್‌ಗಂಜ್‌ನಲ್ಲಿ ಇತ್ತೀಚೆಗೆ ನಡೆದ ಶಿವದೇಗುಲದ ಅರ್ಚಕನ ಹತ್ಯೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಿಹಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಅಧ್ಯಕ್ಷ ನಿತ್ಯಾನಂದ ರಾಯ್ ತೀವ್ರವಾಗಿ ಖಂಡಿಸಿದ್ದು, ‘ರಾಜ್ಯವು ಕ್ರಿಮಿನಲ್‌ಗಳ ಕಪಿಮುಷ್ಟಿಯಲ್ಲಿದೆ’ ಎಂದು ಆರೋಪಿಸಿದ್ದಾರೆ.
    ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಅವರು, ‘ಇದು ಜಂಗಲ್ ರಾಜ್‌ನ ಪ್ರತೀಕ; ಅಷ್ಟೇ ಅಲ್ಲ, “ಸರ್ಕಾರವು ಅಪರಾಧಿಗಳ ರಕ್ಷಕನಾಗಿ ಉಳಿದಿದೆ’ ಎಂದು ಟೀಕಿಸಿದರು.

    ಇದನ್ನೂ ಓದಿ: ‘ದೆಹಲಿಗೆ ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗ್ತೀನಿ’: ಸಿದ್ದರಾಮಯ್ಯ ಹೀಗೆನ್ನಲು ಕಾರಣ ಏನು?
    ಗೋಪಾಲಗಂಜ್ ಜಿಲ್ಲೆಯ ದಾನಪುರ ಪೊಲೀಸ್ ಠಾಣೆಯ ಮಂಜಾ ಗ್ರಾಮದದಲ್ಲಿ ಶಿವ ದೇವಾಲಯದ ಅರ್ಚಕ ಮನೋಜ್ ಕುಮಾರ್​ರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಯಾವರೀತಿ ಖಂಡಿಸಿದರೂ ಸಾಲದು ಎಂದು ಹೇಳಿದ್ದಾರೆ.

    ಮೃತ ಅರ್ಚಕರ ಕುಟುಂಬಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರೆ ಸಾಲದು. ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ಬಿಜೆಪಿ ಅರ್ಚಕರ ಕುಟುಂಬದೊಂದಿಗೆ ನಿಂತಿದೆ. ಅವರಿಗೆ ನ್ಯಾಯ ಒದಗಿಸಲಿದೆ. ಅಪರಾಧಿಗಳನ್ನು ತಕ್ಷಣವೇ ಬಂಧಿಸದಿದ್ದರೆ ಪಕ್ಷವು ಮೌನವಾಗಿರುವುದಿಲ್ಲ. ಬಿಹಾರದ ನಿತೀಶ್ ಕುಮಾರ್​ ಸರ್ಕಾರ ಉದ್ದೇಶಪೂರ್ವಕವಾಗಿ ಕಾನೂನು ಮತ್ತು ಸುವ್ಯವಸ್ಥೆ ಹಾಳುಮಾಡುತ್ತಿದೆ. ಸರ್ಕಾರ ಅಪರಾಧಿಗಳ ರಕ್ಷಕನಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜಂಗಲ್ ರಾಜ್ ಸ್ಥಾಪನೆ: ಬಿಹಾರದಲ್ಲಿ ಅಪರಾಧ ಮತ್ತು ಅಪರಾಧಿಗಳ ಜಾಲ ಎಷ್ಟು ಪ್ರಬಲವಾಗಿದೆ ಎಂದರೆ ಅವರನ್ನು ಮುಟ್ಟಲು ಪೊಲೀಸರು ಮತ್ತು ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಇರುವುದರಿಂದ ಇದು ಸಾಧ್ಯವಾಗಿದೆ. ತೇಜಸ್ವಿ ನೇರವಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಿಹಾರದಲ್ಲಿ ಜಂಗಲ್ ರಾಜ್ ಸಂಪೂರ್ಣವಾಗಿ ಸ್ಥಾಪನೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಕೊಲೆ, ದರೋಡೆ, ಅತ್ಯಾಚಾರ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮಾಯವಾಗಿದ್ದು, ಅಪರಾಧಿಗಳ ಕೈ ಮೇಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಆರೋಪಿಸಿದರು.

    ‘ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ?’: ನಟ ಜಗ್ಗೇಶ್​ ಟ್ವೀಟ್​ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts