More

    ತುನಿವು ಸಿನಿಮಾ ಬಿಡುಗಡೆ ಸಂಭ್ರಮ: ಟ್ರಕ್​ನಿಂದ ಕೆಳಗೆ ಬಿದ್ದು ಅಜಿತ್​ ಅಭಿಮಾನಿ ದುರಂತ ಸಾವು!

    ಚೆನ್ನೈ: ಇಂದು ತಮಿಳುನಾಡು ಜನತೆಗೆ ಮನರಂಜನೆಯ ಹಬ್ಬವಾಗಿದೆ. ಸ್ಟಾರ್​ ನಟರಾದ ತಲ ಅಜಿತ್​ ಅಭಿನಯದ ತುನಿವು ಮತ್ತು ಇಳಯದಳಪತಿ ವಿಜಯ್​ ನಟನೆಯ ವಾರಿಸು ಸಿನಿಮಾ ಇಂದು ಬಿಡುಗಡೆಯಾಗಿದೆ. ಹೀಗಾಗಿ ಸಹಜವಾಗಿಯೇ ಇಬ್ಬರು ಫ್ಯಾನ್ಸ್​ಗಳ ನಡುವೆ ವಾರ್​ ಶುರುವಾಗಿದೆ. ಒಂದು ಕಡೆ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂಭ್ರಮವಾದರೆ, ಇನ್ನೊಂದು ಕಡೆ ಫ್ಯಾನ್ಸ್​ ವಾರ್​ನಿಂದ ಅನಾಹುತಗಳು ಸಂಭವಿಸುವ ಆತಂಕವು ಎದುರಾಗಿದೆ. ಇದರ ನಡುವೆ ದುರಂತವೊಂದು ನಡೆದೇ ಬಿಟ್ಟಿದೆ.

    ತುನಿವು ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸುವ ವೇಳೆ ಅಜಿತ್​ ಅಭಿಮಾನಿಯೊಬ್ಬ ಟ್ರಕ್​ ಮೇಲಿಂದ ಬಿದ್ದ ಸಾವಿಗೀಡಾಗಿದ್ದಾನೆ. ಮೃತ ಅಭಿಮಾನಿಯನ್ನು ಭರತ್​ ಕುಮಾರ್​ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ 1 ಗಂಟೆಗೆ ಬಿಡುಗಡೆಯಾದ ಸಿನಿಮಾವನ್ನು ನೋಡಲು ಅಭಿಮಾನಿ ಟ್ರಕ್​ನಲ್ಲಿ ಬರುತ್ತಿದ್ದ. ಈ ವೇಳೆ ಸಂಭ್ರಮಾಚರಣೆ ಮಾಡುವಾಗ ಟ್ರಕ್​ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚೆನ್ನೈನ ರೋಹಿಣಿ ಚಿತ್ರಮಂದಿರ ಬಳಿ ಇರುವ ಪೂನಮಲ್ಲೆ ಹೆದ್ದಾರಿಯಲ್ಲಿ ಟ್ರಕ್​ನಿಂದ ಕೆಳಗೆ ಬಿದ್ದು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

    ತುನಿವು ಥ್ರಿಲ್ಲರ್ ಸಿನಿಮಾ ಆಗಿದ್ದು ಎಚ್.ವಿನೋದ್​ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರವನ್ನು ಬೋನಿ ಕಪೂರ್ ನಿರ್ಮಿಸಿದ್ದಾರೆ. ಅಜಿತ್ ಕುಮಾರ್, ಮಂಜು ವಾರಿಯರ್, ಜಾನ್ ಕೊಕ್ಕೆನ್, ಸಮುದ್ರಕನಿ ಮತ್ತು ಜಿಎಂ ಸುಂದರ್ ಮುಂತಾದವರ ತಾರಾಗಣ ಇದೆ.

    ವಾರಿಸು ಸಿನಿಮಾವನ್ನು ವಂಶಿ ಪೈದಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಇದು ಕೌಟುಂಬಿಕ ಮನರಂಜನಾ ಚಿತ್ರವಾಗಿದೆ. ವಿಜಯ್​, ರಶ್ಮಿಕಾ ಮಂದಣ್ಣ, ಪ್ರಕಾಶ್​ ರಾಜ್​, ಖುಷ್ಬು, ಪ್ರಭು, ಯೋಗಿ ಬಾಬು ಮತ್ತು ಸಂಗೀತಾ ಮುಂತಾದವರು ತಾರಾಗಣ ಇದೆ. (ಏಜೆನ್ಸೀಸ್​)

    ಬೈಕ್​ ಹಿಂಬದಿ ಸೀಟ್​ನಲ್ಲಿ ಪತ್ನಿ ಕೂರಿಸಿಕೊಂಡು ಅಪಾಯಕಾರಿ ಸಾಹಸ ಮಾಡಿದ ಗಂಡ: ವಿಡಿಯೋ ವೈರಲ್​

    ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿ ಮನಬಂದಂತೆ ಥಳಿಸಿದ ಪೊಲೀಸರು: ಸವಿನಿದ್ದೆಯಲ್ಲಿದ್ದವರ ಮೇಲೆ ದೌರ್ಜನ್ಯ

    ಪ್ಯಾಂಟ್​ ಧರಿಸದೇ ಲಂಡನ್​ ನಗರದಲ್ಲಿ ಓಡಾಡಿದ ಜನರ ಫೋಟೊ ವೈರಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts