More

    ಬೆಂಗಳೂರಿನಲ್ಲಿ ಏರ್​​ಮನ್ ನೇಮಕಾತಿ ರ್ಯಾಲಿ ಸೆಪ್ಟೆಂಬರ್ 23 ರಿಂದ

    ಬೆಂಗಳೂರು: ಭಾರತೀಯ ವಾಯುಪಡೆ (ಐಎಎಫ್) ಗ್ರೂಪ್ ಎಕ್ಸ್ (ಟೆಕ್ನಿಕಲ್ ಟ್ರೇಡ್) (ಎಜುಕೇಷನ್ ಇನ್​​ಸ್ಟ್ರಕ್ಟರ್ ಟ್ರೇಡ್ ಹೊರತುಪಡಿಸಿ) ನಲ್ಲಿ ಏರ್​​ಮನ್ ಹುದ್ದೆಗೆ ನೇಮಕಾತಿ ರ್ಯಾಲಿ ನಡೆಸಲಿದ್ದು, ಕರ್ನಾಟಕದ ಅವಿವಾಹಿತ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಲು ಕರೆ ನೀಡಿದೆ.
    ಇಂಟರ್​ಮೀಡಿಯೇಟ್ / 10+2 / ತತ್ಸಮಾನ ಪರೀಕ್ಷೆಯನ್ನು ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಶೇ. 50 ಅಂಕಗಳೊಂದಿಗೆ ಹಾಗೂ ಇಂಗ್ಲಿಷ್ ನಲ್ಲಿ ಶೇ. 50 ಅಂಕಗಳಿಸಿ ಪಾಸಾಗಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮಾ ಇಂಜಿನಿಯರಿಂಗ್ ಆಗಿರಬೇಕು.

    ಇದನ್ನೂ ಓದಿ:  ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್​​) ನ ಉದ್ಯೋಗಿಯಾಗುವುದು ನಿಮ್ಮ ಕನಸೇ?

    2000 ರ ಜನವರಿ 17 ಮತ್ತು 2003ರ ಡಿಸೆಂಬರ್ 30 ರ ಮಧ್ಯೆ ಜನಿಸಿರಬೇಕು.  ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇತ್ಯಾದಿ ನಡೆಸಲಾಗುತ್ತದೆ.  ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ವರೆಗೆ ಬೆಂಗಳೂರಿನ ಮಣೆಕ್​​ಷಾ ಪರೇಡ್ ಗ್ರೌಂಡ್ ಹಾಗೂ 7 ಏರ್​​ಮನ್ ನೇಮಕಾತಿ ಕೇಂದ್ರದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ. ನಡೆಯಲಿದೆ.

    ಇದನ್ನೂ ಓದಿ:  ಜೆಇಇ ಮುಖ್ಯ ಪರೀಕ್ಷಾ ಫಲಿತಾಂಶ ಸೆಪ್ಟೆಂಬರ್ 11 ಕ್ಕೆ?

    ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10ರ ವರೆಗೆ www.airmenselection.cdac.in ನಲ್ಲಿ ರ್ಯಾಲಿಗೆ ನೋಂದಣಿ ಮಾಡಲು ಅವಕಾಶವಿದೆ.  ಹೆಚ್ಚಿನ ಮಾಹಿತಿಗೆ ಅದೇ ವೆಬ್​ಸೈಟ್ ನೊಡಬಹುದು.

    ಸರ್ಕಾರಿ ಹುದ್ದೆಗಳ ನೇಮಕಾತಿಗೆ ಯಾವುದೇ ನಿರ್ಬಂಧವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts