More

    ಲಾಕ್​ಡೌನ್​ನಿಂದಾಗಿ ದಕ್ಷಿಣ ಭಾರತದಲ್ಲೇಕೆ ಶುಭ್ರವಾಗಿಲ್ಲ ವಾಯಮಂಡಲ? ನಾಸಾ ಅಧ್ಯಯನ ಹೇಳೋದೇನು?

    ವಾಷಿಂಗ್ಟನ್​: ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ಪರಿಸರದಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಪ್ರಕೃತಿ ತನ್ನ ಸೊಬಗನ್ನು ಮರಳಿ ಪಡೆಯುತ್ತಿದೆ. ಪ್ರಾಣಿಗಳು ತಮ್ಮ ಆವಾಸಸ್ಥಾನದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಜಲಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಸ್ವಚ್ಛವಾಗುತ್ತಿವೆ. ಗಂಗೆ-ಯಮುನೆಯರು ಮಾತ್ರವಲ್ಲ, ಕಾವೇರಿ, ಕಪಿಲೆಯರು ಹೆಚ್ಚು ಶುಭ್ರಗೊಂಡಿದ್ದಾರೆ.

    ಇದೀಗ ವಾತಾವರಣವೂ ಹೆಚ್ಚು ತಿಳಿಯಾಗಿರುವುದನ್ನು ನಾಸಾ ಸಂಶೋಧಕರು ಪತ್ತೆಹಚ್ಚಿದ್ದಾರೆ.

    ಹೌದು… ಉತ್ತರಭಾರತದಲ್ಲಂತೂ ವಾಯ ಗುಣಮಟ್ಟ ಭಾರಿ ಪ್ರಮಾಣದಲ್ಲಿ ಸುಧಾರಿಸಿದ್ದು, ಗಾಳಿಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣವೂ 20 ವರ್ಷ ಹಿಂದಿನಷ್ಟು ಕಡಿಮೆಯಾಗಿದೆ ಎಂದು ಹೇಳಿದೆ.

    ಲಾಕ್​ಡೌನ್​ ಕಾರಣದಿಂದಾಗಿ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಲಾಗಿತ್ತು. ಆದರೆ ಗಾಳಿಯಲ್ಲಿರುವ ಕಣಗಳ ಪ್ರಮಾಣ ಈ ಮಟ್ಟಕ್ಕೆ ಕುಸಿಯಬಹುದು ಎಂಬುದನ್ನು ಊಹಿಸಲು ಸಾಧ್ಯವಿರಲಿಲ್ಲ ಎಂದು ನಾಸಾ ತಜ್ಞ ಪವನ್​ ಗುಪ್ತಾ ಹೇಳಿದ್ದಾರೆ. ಅದರಲ್ಲೂ ಗಂಗಾನದಿ ಮುಖಜ ಭೂಮಿಯಲ್ಲಿ ವಾತಾವರಣ ಈ ಮಟ್ಟಿಗೆ ತಿಳಿಯಾಗಿರುವುದನ್ನು ಹಿಂದೆಲ್ಲೂ ನೋಡಿರಲಿಲ್ಲ ಎಂದಿದ್ದಾರೆ. ಉತ್ತರಭಾರತದ ಹಲವು ಪ್ರದೇಶಗಳ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದೆ.

    ಲಾಕ್​ಡೌನ್​ ಮೊದಲ ವಾರದಲ್ಲಿ ಅಂಥ ಬದಲಾವಣೆಗಳು ಕಂಡು ಬಂದಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಮಾಲಿನ್ಯದ ಪ್ರಮಾಣ ಭಾರಿ ಮಟ್ಟಿಗೆ ಕುಸಿದಿತ್ತು. ಇದಕ್ಕೆ ಮಳೆ ಕೂಡ ಕಾರಣವಾಗಿದೆ.

    ಆದರೆ, ದಕ್ಷಿಣ ಭಾರತದಲ್ಲಿ ಇಂಥ ಬದಲಾವಣೆಗಳು ಕಂಡುಬಾರದಿರುವುದು ಅಚ್ಚರಿ ಮೂಡಿಸಿದೆ. ಉತ್ತರ ಭಾರತದಲ್ಲಿ ಕಡಿಮೆಯಾದ ಮಟ್ಟಿಗೆ ಇಲ್ಲಿ ಕೆಳಕ್ಕಿಳಿದಿಲ್ಲ. ಗಾಳಿಕಣಗಳ ಪ್ರಮಾಣ ಕಳೆದ ನಾಲ್ಕು ವರ್ಷಗಳ ಅವಧಿಗೆ ಹೋಲಿಸಿದಲ್ಲಿ ಹೆಚ್ಚಾಗಿದೆ ಎಂಬುದು ಉಪಗ್ರಹಗಳಿಂದ ದೊರೆತ ಮಾಹಿತಿಯಿಂದ ತಿಳಿದುಬಂದಿದೆ. ಇದಕ್ಕೇನು ಕಾರಣ ಎಂಬುದು ಕೂಡ ಅಸ್ಪಷ್ಟವಾಗಿದೆ ಎನ್ನುತ್ತಾರೆ ತಜ್ಞರು. ಆದರೆ ಹವಾಮಾನದಲ್ಲಿನ ವೈಪರೀತ್ಯಗಳು, ಕೃಷಿ ಉತ್ಪನ್ನಗಳಿಗೆ ಬೆಂಕಿ ಹಚ್ಚಿರುವುದು, ಗಾಳಿ ಅಥವಾ ಇತರ ಕಾರಣಗಳಿಂದಾಗಿ ಮಾಲಿನ್ಯ ಪ್ರಮಾಣದಲ್ಲಿ ಭಾರಿ ಬದಲಾವಣೆ ಕಂಡುಬಾರದೆ ಇರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಕರೊನಾ ಪತ್ತೆಗೆ ಬರಲಿವೆ ವೈದ್ಯಕೀಯ ಪತ್ತೇದಾರಿ ಶ್ವಾನಗಳು, ಅಪರಾಧಿಗಳಂತೆ ಸೋಂಕಿತರನ್ನು ಗುರುತಿಸಲಿವೆಯೇ ನಾಯಿಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts