More

    ಗಿಡ ನೆಟ್ಟು ಪೋಷಿಸಿ, ಪರಿಸರ ಬೆಳೆಸಿ

    ಐಮಂಗಲ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಬೇಕು. ಇದರಿಂದ ಭೂಮಿಗೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ಕೃಷಿ ಮೇಲ್ವಿಚಾರಕ ಮಲ್ಲಿಕಾರ್ಜುನ್ ಹೇಳಿದರು.

    ಹೋಬಳಿಯ ಮರಡಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿವಿಪುರ ಯೋಜನಾ ಕಚೇರಿ,

    ಐಮಂಗಲ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ 50 ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.

    ಶಾಲೆಯ ಮುಖ್ಯಶಿಕ್ಷಕ ರುದ್ರಪ್ಪ, ಪಿ.ಎನ್.ಕೃಷ್ಣ, ಒಕ್ಕೂಟದ ಅಧ್ಯಕ್ಷ ನಾಗೇಶ್‌ಬಾಬು, ಲೋಕೇಶ್, ಸುಮಂಗಲ, ತನುಜಾ, ಕೆ.ಆರ್.ಸುಮಾ, ಲೋಕಮ್ಮ,

    ಭಾಗ್ಯಮ್ಮ, ದಯಾನಂದ್, ಅಂಬುಜಾ, ಜರೀನಾ, ಕೆ.ಟಿ.ಶ್ರೀಧರ್, ಶ್ರೀನಿವಾಸಲು ಇತರರಿದ್ದರು. ವಿಜಯವಾಣಿ ಚಿತ್ರ ಎಎಂಎಲ್ ಪರಿಸರ ಜು.15

    ಐಮಂಗಲದ ಮರಡಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಕೃಷಿ ಮೇಲ್ವಿಚಾರಕ ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕ ರುದ್ರಪ್ಪ, ಪಿ.ಎನ್.ಕೃಷ್ಣ, ನಾಗೇಶ್ ಬಾಬು, ಲೋಕೇಶ್, ಸುಮಂಗಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts