More

    ಇಂಧನ ಮೇಲೆ ಕೃಷಿ ಸೆಸ್​ ಹೆಚ್ಚಳ: ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್​-ಡೀಸೆಲ್​!

    ನವದೆಹಲಿ: ಇಂಧನ ಮೇಲಿನ ಕೃಷಿ ಸೆಸ್​​ ಏರಿಕೆಯಿಂದಾಗಿ ಪೆಟ್ರೋಲ್​ ಮತ್ತು ಡೀಸೆಲ್​​ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

    ಪೆಟ್ರೋಲ್​ ಮೇಲೆ ಪ್ರತಿ ಲೀಟರ್​ಗೆ 2.4 ರೂ. ಕೃಷಿ ಸೆಸ್​ ಮತ್ತು ಡೀಸೆಲ್​ ಮೇಲೆ ಪ್ರತಿ ಲೀಟರ್​ಗೆ 4 ರೂ. ಕೃಷಿ ಸೆಸ್​ ವಿಧಿಸಿರುವುದರಿಂದ ಇಂಧನ ಬೆಲೆ ದುಬಾರಿಯಾಗಲಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

    ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರುವ ಪರಿಣಾಮವಾಗಿ, ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ದರಗಳನ್ನು ಇಳಿಸಲಾಗಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

    ಆದರೆ, ಕೃಷಿ ಸೆಸ್ ಏರಿಕೆಯಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಇಂಧನ ದರ ಗಗನಮುಖಿಯಾಗಿದ್ದು, ದರ ಇಳಿಯುವ ನಿರೀಕ್ಷೆಯಲ್ಲಿ ಜನರಿಗೆ ಶಾಕ್​ ಆದಂತಾಗಿದೆ.

    ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

    ಕೇಂದ್ರ ಬಜೆಟ್​: ರೈತರಿಗೆ 16.5 ಲಕ್ಷ ಕೋಟಿ ರೂ. ಸಾಲ ಸೌಲಭ್ಯ

    ಕೇಂದ್ರ ಬಜೆಟ್​: 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts