More

    ನಿಷ್ಠೆಯ ಕೃಷಿಯಿಂದ ಲಾಭ, ಆಹಾರ ಭದ್ರತಾ ಅಭಿಯಾನದಲ್ಲಿ ಜಯರಾಮ್ ಶೆಟ್ಟಿ ಅಭಿಪ್ರಾಯ

    ಕೋಟ: ಉಡುಪಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೋಟ ರೈತ ಸಂಪರ್ಕ ಕೇಂದ್ರ ಆಶ್ರಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಭತ್ತದ ಬೆಳೆ ಕ್ಷೇತ್ರೋತ್ಸವ, ಅಂತರ ಗಂಗೆ ಕಳೆ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಕಾಸನಗುಂದು ಪರಿಸರದಲ್ಲಿ ಸೋಮವಾರ ನಡೆಯಿತು.

    ರೈತಧ್ವನಿ ಸಂಘ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ಮಾತನಾಡಿ, ಕೃಷಿ ಕ್ಷೇತ್ರ ನಷ್ಟದ ಕ್ಷೇತ್ರ ಎಂಬ ಆರೋಪಗಳಿವೆ. ಕೃಷಿಯಲ್ಲಿ ನಿಷ್ಠೆ ಇದ್ದರೆ ಅದನ್ನು ಲಾಭದಾಯಕವಾಗಿಸಲು ಸಾಧ್ಯ. ಇಲಾಖೆ ನೀಡಿದ ಸಲಹೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮತ್ತಷ್ಟು ಲಾಭದಾಯಕವಾಗುತ್ತದೆ. ನೇರ ಬಿತ್ತನೆ ಕೃಷಿ ಪದ್ಧತಿ ರೈತರ ಪಾಲಿಗೆ ವರದಾನವಾಗಲಿದೆ. ಅದರ ಅನುಷ್ಠಾನ ಉತ್ತಮ ರೀತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಅನುಸರಿಸಬೇಕು ಎಂದರು.

    ಬ್ರಹ್ಮಾವರದ ಕೆ.ವಿ.ಕೆ ವಿಜ್ಞಾನಿ ಡಾ.ನವೀನ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಕೆಯಿಂದ ರೈತರು ಹಿಂದಿನ ಕೃಷಿ ಪದ್ಧತಿಯಲ್ಲಿ ಆಗುವ ಸೋರಿಕೆ ತಡೆದು ಲಾಭದಾಯಕವನ್ನಾಗಿಸಬಹುದಾಗಿದೆ ಎಂದರು. ಸರಳ ರೀತಿಯ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
    ತಾಪಂ ಸದಸ್ಯೆ ಲಲಿತಾ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.

    ಹಿರಿಯ ಕೃಷಿಕ ವಾಸುದೇವ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ, ರೈತಸಂಪರ್ಕ ಕೇಂದ್ರ ಅಧಿಕಾರಿ ಸುಪ್ರಭಾ ಉಪಸ್ಥಿತರಿದ್ದರು. ರೈತಸಂಪರ್ಕ ಕೇಂದ್ರ ಅಧಿಕಾರಿ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts