More

    27ಕ್ಕೆ ಆಗಮ ಕೀರ್ತಿ ಸ್ವಾಮೀಜಿ ಪಟ್ಟಾಭಿಷೇಕ: ಧರ್ಮ ಸಿಂಹಾಸನ ಆರೋಹಣದ ಬಳಿಕ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ನಾಮಾಂಕಿತ

    | ರಮೇಶ್ ಹಂಡ್ರಂಗಿ ಹಾಸನ

    ಜೈನಕಾಶಿ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಜಿನೈಕ್ಯರಾದ ಹಿನ್ನೆಲೆಯಲ್ಲಿ ಜೈನ ಮಠದ ಮುಂದಿನ ಪೀಠಾಧಿಪತಿಯಾಗಿ 22 ವರ್ಷದ ಆಗಮ ಕೀರ್ತಿ ಶ್ರೀಗಳು ಸೋಮವಾರ ಪಟ್ಟಾಭಿಷಕ್ತರಾಗಲಿದ್ದಾರೆ. ಆನಂತರ ಅವರಿಗೆ ಮರು ನಾಮಕರಣ ಮಾಡಲಾಗುತ್ತದೆ.

    ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆಯೇ ಸಮಾಜದ ಮುಖಂಡರು ಹಾಗೂ ಎಲ್ಲ ಪೀಠದ ಸ್ವಾಮೀಜಿಗಳ ಒಪ್ಪಿಗೆ ಮೇರೆಗೆ ಉತ್ತರಾಧಿಕಾರಿಯಾಗಿ ಆಗಮ ಕೀರ್ತಿ ಸ್ವಾಮೀಜಿ ಅವರನ್ನು ನೇಮಿಸಿದ್ದರು. ಉತ್ತರಾಧಿಕಾರಿಯ ಹೆಸರನ್ನು ಪತ್ರದಲ್ಲಿಯೂ ಉಲ್ಲೇಖಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ಸಲ್ಲೇಖನದತ್ತ ಚಿತ್ತ ಹರಿಸಿದ್ದ ಶ್ರೀಗಳಿಗೆ, ತಾವು ಹೆಚ್ಚು ದಿನ ಲೌಕಿಕ ಲೋಕದಲ್ಲಿ ಇರುವುದಿಲ್ಲ ಎಂಬ ಮುನ್ಸೂಚನೆ ಸಿಕ್ಕಿರಬಹುದು. ಹೀಗಾಗಿಯೇ ಮಠದ ಉತ್ತರಾಧಿಕಾರಿಯನ್ನು ನೇಮಿಸಿದ್ದರು. ಪ್ರತಿದಿನ ಆಗಮ ಕೀರ್ತಿ ಸ್ವಾಮೀಜಿ ಅವರಿಗೆ ಮಠದ ಆಡಳಿತ, ಭಕ್ತರೊಂದಿಗೆ ಹೇಗೆ ನಡೆದುಕೊಳ್ಳಬೇಕು, ನಿತ್ಯ ಪೂಜೆ-ಪುನಸ್ಕಾರಗಳು ಹಾಗೂ ಇತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಧರ್ಮ ಸಿಂಹಾಸನ ಆರೋಹಣ: ಸೋಮವಾರ ಬೆಳಗ್ಗೆ 9.15ಕ್ಕೆ ಜೈನ ಪರಂಪರೆಯ ವಿಧಿವಿಧಾನಗಳನ್ನು ಪೂರೈಸಿದ ನಂತರ ಆಗಮ ಕೀರ್ತಿ ಸ್ವಾಮೀಜಿ ಅವರಿಗೆ ಧರ್ಮ ಸಿಂಹಾಸನ ಪೀಠಾರೋಹಣ ಪಟ್ಟಾಭಿಷೇಕ ಮಾಡಲಾಗುತ್ತದೆ. ಧರ್ಮ ಸಿಂಹಾಸನ ಆರೋಹಣದ ನಂತರ ಶ್ರೀಗಳಿಗೆ ಪಟ್ಟಣ ಶೆಟ್ಟಿ ಮನೆತನದವರು ಪಟ್ಟದ ಉಂಗುರ, ಚಿನ್ನದ ಪಾದುಕೆ ಹಾಗೂ ಚಿನ್ನದ ಪಿಂಛಿ (ನವಿಲುಗರಿ ಗುಚ್ಛ) ನೀಡುತ್ತಾರೆ. ಆ ಕ್ಷಣದಿಂದ ವಿಚಾರ ಕ್ಷುಲ್ಲಕ ಆಗಮ ಕೀರ್ತಿ ಶ್ರೀಗಳು ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಎಂದು ನಾಮಾಂಕಿತರಾಗಲಿದ್ದಾರೆ. ಆನಂತರ ಅವರು ಸಮಾಜಕ್ಕೆ ಧರ್ಮ ಸಂದೇಶ ನೀಡಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ನಡೆದ ಬಳಿಕ ಸ್ವಾಮೀಜಿ ಅವರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಶ್ರವಣಬೆಳಗೊಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಅಂದು ಇತರ ಯಾವುದೇ ಸಭೆ- ಸಮಾರಂಭಗಳು ಇರುವುದಿಲ್ಲ.

    ಬಾಲ್ಯದಿಂದಲೇ ಧಾರ್ವಿುಕ ಆಸಕ್ತಿ

    ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ 2001ರ ಫೆ. 26ರಂದು ಅಶೋಕ್​ಕುಮಾರ್ ಇಂದ್ರ ಹಾಗೂ ಅನಿತಾ ಅಶೋಕ್​ಕುಮಾರ್ ಇಂದ್ರ ದಂಪತಿ ಎರಡನೇ ಮಗನಾಗಿ ಜನಿಸಿದ ಆಗಮ ಇಂದ್ರ (ಪೂರ್ವಾಶ್ರಮದ ಹೆಸರು) ಅವರು 2022 ಡಿ. 4ರಂದು ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಜೈನ ದೀಕ್ಷೆ ಪಡೆದರು. ಅವರಿಗೆ ‘ವಿಚಾರ ಕ್ಷುಲ್ಲಕ ಆಗಮ ಕೀರ್ತಿ’ ಎಂದು ಮರುನಾಮಕರಣ ಮಾಡಲಾಗಿತ್ತು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೀಕ್ಷೆ ನೀಡಿದ್ದರು. ಬಾಲ್ಯದಿಂದಲೇ ಧಾರ್ವಿುಕ ವಿಚಾರದಲ್ಲಿ ಆಸಕ್ತರಾಗಿದ್ದ ಇವರು ಆರಂಭದ ಶಿಕ್ಷಣವನ್ನು ಸಾಗರದ ರೋಟರಿ ಶಾಲೆಯಲ್ಲಿ ಪೂರೈಸಿದರು. ಪ್ರೌಢಶಿಕ್ಷಣವನ್ನು ಎಂಜಿಎನ್ ಪೈ ಪ್ರೌಢಶಾಲೆಯಲ್ಲಿ ನಡೆಸಿ, ನಂತರ ಉಜಿರೆಯಲ್ಲಿ ಪದವಿಪೂರ್ವ ಶಿಕ್ಷಣ, ಸಾಗರದ ಎಲ್​ಬಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಲ್ಲ ಆಗಮ ಕೀರ್ತಿ ಶ್ರೀಗಳು ಕಂಪ್ಯೂಟರ್ ಶಿಕ್ಷಣ, ಚಿತ್ರಕಲೆಯಲ್ಲಿ ಸೃಜಶೀಲರಾಗಿದ್ದಾರೆ. ಇವರ ತಂದೆ ಹಾಗೂ ತಾಯಿ ಟೈಲರಿಂಗ್ ಬದುಕಿನೊಂದಿಗೆ ಜೈನ ಬಸದಿಯ ಪೂಜೆ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ. 4 ಹೆಚ್ಚಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts