More

    ರಾಜ್ಯದಲ್ಲಿ ಇಳಿಯುತ್ತಿದ್ದ ಸೋಂಕು ಮತ್ತೆ ಏರಿತು!; ಆತಂಕ ಹುಟ್ಟಿಸಿದ ಪಾಸಿಟಿವಿಟಿ ರೇಟ್…

    ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಸೋಂಕು ಪ್ರಮಾಣ ದರ ಏರಿಕೆಯಾಗಿದ್ದು, 11,958 ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 27,299 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು ಗುಣಮುಖರ ಸಂಖ್ಯೆ 24.36 ಲಕ್ಷ ದಾಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2.38 ಲಕ್ಷಕ್ಕೆ ಕುಸಿದಿದೆ. ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 27.07 ಲಕ್ಷ ಮೀರಿದೆ. ಭಾನುವಾರ ಶೇ. 7.71ಕ್ಕೆ ಇಳಿಕೆಯಾಗಿದ್ದ ಸೋಂಕು ಪ್ರಮಾಣ ದರ ಮತ್ತೆ ಶೇ. 9.08ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರವೂ ಶೇ. 2ಕ್ಕಿಂತ ಕಡಿಮೆಯಾಗಿಲ್ಲ. ಒಂದೇ ದಿನ 340 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 31,920ಕ್ಕೆ ಏರಿಕೆಯಾಗಿದೆ.

    ಬೆಂಗಳೂರು ನಗರ 1,992, ಶಿವಮೊಗ್ಗ 1,224, ಮೈಸೂರು 1,213, ಹಾಸನ 1,108 ಇವು ಹೆಚ್ಚು ಪ್ರಕರಣಗಳು ವರದಿಯಾದ ನಗರಗಳು. ವಿವಿಧ ನಗರಗಳಲ್ಲಿ ಇವತ್ತಿನ ಕರೊನಾ ಸಂಬಂಧಿತ ಸಾವುಗಳ ಸಂಖ್ಯೆ ಇಂತಿದೆ. ಬೆಂಗಳೂರು ನಗರ 199, ಮೈಸೂರು 17, ಬೆಳಗಾವಿ 15, ಹಾಸನ ಮತ್ತು ಹಾವೇರಿ ತಲಾ 10, ಬಳ್ಳಾರಿ ಮತ್ತು ಶಿವಮೊಗ್ಗ ತಲಾ 9, ಧಾರವಾಡ 8, ಕೋಲಾರ ಮತ್ತು ಕೊಪ್ಪಳ ತಲಾ 6, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ದಾವಣಗೆರೆ ತಲಾ 5, ತುಮಕೂರು ಮತ್ತು ವಿಜಯಪುರ ತಲಾ 4, ಬಾಗಲಕೋಟೆ, ದಕ್ಷಿಣ ಕನ್ನಡ, ರಾಮನಗರ, ರಾಯಚೂರು ಮತ್ತು ಮಂಡ್ಯ ತಲಾ 3, ಚಿಕ್ಕಬಳ್ಳಾಪುರ, ಗದಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ಬೀದರ್, ಚಾಮರಾಜನಗರ, ಚಿತ್ರದುರ್ಗ, ಕಲಬುರಗಿ ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ ಒಬ್ಬರು. ಯಾದಗಿರಿಯಲ್ಲಿ ಮಾತ್ರ ಯಾವುದೇ ಸಾವು ವರದಿಯಾಗಿಲ್ಲ.

    ಸಿ.ಟಿ. ರವಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್; ದೂರು ದಾಖಲು ಪ್ರಕ್ರಿಯೆಯಲ್ಲೇ ಕಾನೂನು ಉಲ್ಲಂಘನೆ

    ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts