More

    ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..

    ಬೆಂಗಳೂರು: ರಸ್ತೆಬದಿಯ ಗಾಡಿಗಳಲ್ಲಿ, ಮಾರಾಟ ಕೇಂದ್ರಗಳಲ್ಲಿ ಇಟ್ಟಿರುತ್ತಿದ್ದ ಎಳನೀರನ್ನು ಕಳವು ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದವನನ್ನು ಎಳನೀರು ಮಾರಾಟಗಾರರೇ ರಾತ್ರಿ ಇಡೀ ಕಾದು ಕುಳಿತು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಡಿವಾಳ ನಿವಾಸಿ ಮೋಹನ್ ಬಂಧಿತ ಕಳ್ಳ. ಇನ್ನೊಬ್ಬ ಹಿಡಿಯಲು ಹೋದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

    ಈತ ಹಗಲಿನಲ್ಲಿ ರಸ್ತೆಗಳಲ್ಲಿ ಓಡಾಡಿ ಗುರುತಿಸಿಕೊಂಡು ರಾತ್ರಿ ವಾಹನದಲ್ಲಿ ಎಳನೀರು ಕಳವು ಮಾಡಿಕೊಂಡು ಹೋಗುತ್ತಿದ್ದ. ಬೆಂಗಳೂರಿನ ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರದಲ್ಲಿ ಸುಮಾರು 2 ಸಾವಿರ ಎಳನೀರನ್ನು ಕಳವು ಮಾಡಿದ್ದ ಈತನ ಬಗ್ಗೆ ಮಾರಾಟಗಾರರು ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

    ಇದನ್ನೂ ಓದಿ: ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಪೊಲೀಸರಿಗೆ ದೂರು ನೀಡಿ ಅಷ್ಟಕ್ಕೇ ಸುಮ್ಮನಾಗದ ಮಾರಾಟಗಾರರು, ಯಾರು ಎಳನೀರು ಕಳವು ಮಾಡುತ್ತಿದ್ದಾರೆ ಎಂಬುದನ್ನು ರೆಡ್​ ಹ್ಯಾಂಡೆಡ್​ ಆಗಿ ಪತ್ತೆ ಹಚ್ಚಲು ರಾತ್ರಿ ಇಡೀ ಕಾದು ಕುಳಿತಿದ್ದರು. ಬೆಳಗಿನ ಜಾವದ ಸುಮಾರಿಗೆ ಇಬ್ಬರು ವಾಹನದಲ್ಲಿ ಬಂದು ಕಳವು ಮಾಡಲು ಮುಂದಾದಾಗ ಇವರು ಮೋಹನ್​ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈತನ ಜೊತೆ ಇದ್ದ ಮತ್ತೊಬ್ಬ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮೋಹನ್​ನನ್ನು ಹಿಡಿದು ಕಟ್ಟಿ ಹಾಕಿದ ಎಳನೀರು ಮಾರಾಟಗಾರರು ನಂತರ ಆತನನ್ನು ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..
    ಕಳ್ಳತನಕ್ಕೆ ಬಳಸುತ್ತಿದ್ದ ವಾಹನ

    ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕರೊನಾ ಲಸಿಕೆ: ಪ್ರಧಾನಿ ನರೇಂದ್ರ ಮೋದಿ

    ಸಿಎಂ ಬದಲಾವಣೆಯೇ ಇಲ್ಲ, ಮುಂದಿನ ಚುನಾವಣೆಯೂ ಬಿಎಸ್​ವೈ ನೇತೃತ್ವದಲ್ಲೇ ನಡೆಯಲಿದೆ: ಸಚಿವ ಬಿ.ಸಿ. ಪಾಟೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts