More

    ಸಿಎಂ ಬದಲಾವಣೆಯೇ ಇಲ್ಲ, ಮುಂದಿನ ಚುನಾವಣೆಯೂ ಬಿಎಸ್​ವೈ ನೇತೃತ್ವದಲ್ಲೇ ನಡೆಯಲಿದೆ: ಸಚಿವ ಬಿ.ಸಿ. ಪಾಟೀಲ್

    ಧಾರವಾಡ: ನಾಯಕತ್ವ ಬದಲಾವಣೆ ವಿಷಯ ಆಗಾಗ ಮುನ್ನೆಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್​ ಕೂಡ ದನಿಯೆತ್ತಿದ್ದು, ಸಿಎಂ ಬದಲಾವಣೆಯೇ ಇಲ್ಲ, ಮುಂದಿನ ಚುನಾವಣೆಯೂ ಬಿಎಸ್​ವೈ ನೇತೃತ್ವದಲ್ಲೇ ನಡೆಯಲಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ‌. ಪಾಟೀಲ್, ರೇಣುಕಾಚಾರ್ಯ ಹೇಳಿದ್ದಕ್ಕೆಲ್ಲ ನಾನು ಉತ್ತರ ಕೊಡಲಿಕ್ಕೆ ಆಗುವುದಿಲ್ಲ. ನಮಗೆ ಸಹಿ ಸಂಗ್ರಹ ಅದು ಇದು ಸಂಬಂಧ ಇಲ್ಲ. ಯಾವ ಸಹಿ ಸಂಗ್ರಹ ವಿಷಯವೂ ನಮಗೆ ಗೊತ್ತಿಲ್ಲ. ಆದರೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆ ಕೂಡ ಬಿಎಸ್​ವೈ ನೇತೃತ್ವದಲ್ಲೇ ನಡೆಯಲಿದೆ ಎಂದಿದ್ದಾರೆ.

    ಇದನ್ನೂ ಓದಿ: ಯಾರೂ ಸಹಿ ಸಂಗ್ರಹಿಸಬೇಡಿ, ರಾಜಕೀಯ ಹೇಳಿಕೆ ನೀಡಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ 

    ಅಲ್ಲದೆ ಈ ವಿಷಯನ್ನು ತಾವು ಮಾತ್ರ ಹೇಳುತ್ತಿಲ್ಲ ಎಂದಿರುವ ಅವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಇದನ್ನೇ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್​ನಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾಯಕತ್ವ ಬದಲಾವಣೆ ವಿಚಾರ ಊಹಾಪೋಹ, ಯಾರ್ಯಾರೋ ಏನೇನೋ ಮಾತನಾಡುತ್ತಿದ್ದರೆ ಅದಕ್ಕೆಲ್ಲ ಉತ್ತರ ಕೊಡಲಿಕ್ಕೆ ಆಗುವುದಿಲ್ಲ. ಈಗಾಗಲೇ ಕಟೀಲ್​ ಅವರು ಹೇಳಿಕೆ ಕೊಡದಂತೆ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿ ಆಗುವುದು ಸುಲಭದ ವಿಷಯವಲ್ಲ. ಪಕ್ಷ, ಪಕ್ಷದ ಹೈಕಮಾಂಡ್​, ಶಾಸಕಾಂಗ ಸೇರಿ ಸಿಎಂ ಮಾಡಿರುತ್ತಾರೆ. ಯಾರೋ ದೆಹಲಿಗೆ ಹೋದ ತಕ್ಷಣ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

    ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕರೊನಾ ಲಸಿಕೆ: ಪ್ರಧಾನಿ ನರೇಂದ್ರ ಮೋದಿ

    ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts