More

    ಕೊಡಗಲ್ಲಿ 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ-ಜಲಸ್ಫೋಟ; 18 ಮನೆಯವರ ತೆರವು…

    ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶದಲ್ಲೇ ಮತ್ತೆ ಭಾರಿ ಭೂಕುಸಿತು ಹಾಗೂ ಜಲಸ್ಫೋಟ ಸಂಭವಿಸಿದೆ. ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪಡ್ಕ ಸಮೀಪದ ಸೀಮೆಹುಲ್ಲುಕಜೆ ಬೆಟ್ಟದಲ್ಲಿ ಭಾರಿ ಶಬ್ಧದೊಂದಿಗೆ ಈ ಭೂಕುಸಿತ ಉಂಟಾಗಿದೆ.

    ಭೂಮಿಯೊಳಗಿನಿಂದ ಭಾರಿ ಶಬ್ದದೊಂದಿಗೆ ಭೂಕುಸಿತ ಉಂಟಾಗಿದೆ. ಬೆಟ್ಟದ ಕೆಳಭಾಗದಲ್ಲಿ 18 ಮನೆಗಳಿದ್ದು, ಅದೃಷ್ಟವಶಾತ್​ ಯಾವ ಅಪಾಯ ಸಂಭವಿಸಿಲ್ಲ. ಜೀವ ಹಾನಿ ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ 18 ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

    ಮಳೆ ತೀವ್ರತೆ ಹಚ್ಚಾದಲ್ಲಿ ಬೆಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ದಟ್ಟ ಮಂಜು ಕವಿದ ವಾತಾವರಣ ಇರುವುದರಿಂದ ಬೆಟ್ಟ ಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಎಲ್ಲಿಂದ, ಎಲ್ಲಿಯವರೆಗೆ ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮದೆನಾಡು ಗ್ರಾಮಲೆಕ್ಕಿಗ ರಮೇಶ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಮಂಗಳೂರು ಮಾರ್ಗ ಬಳಿಯ ಪ್ರದೇಶಗಳಾದ ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಮತ್ತೊಂದು ಭೂಕುಸಿತದ ಆತಂಕ ಸೃಷ್ಟಿಯಾಗಿದೆ. ಶಬ್ದ ಕೇಳಿಸಿದ ಬಳಿಕ ಜೋಡುಪಾಲದವರೆಗೂ ಕೆಸರು ಮಿಶ್ರಿತ ನೀರು ಕೊಚ್ಚಿ ಬಂದಿದೆ.

    ಭೀಕರ ಅಪಘಾತ: ಒಂದೇ ಕುಟುಂಬದ 5 ಜನರ ಸಾವು, 4 ಮಂದಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts