More

    ಮೆಟ್ರೋ ರೈಲಿಗೆ ಸೀರೆ ಸಿಲುಕಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 15ಲಕ್ಷ ರೂ.ಪರಿಹಾರ

    ನವದೆಹಲಿ: ದೆಹಲಿ ಮೆಟ್ರೋ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಅಪಘಾತಕ್ಕೀಡಾದ ಮಹಿಳೆಯ ಕುಟುಂಬಕ್ಕೆ ಮೆಟ್ರೋ ರೈಲು ನಿಗಮ(ಡಿಎಂಆರ್‌ಸಿ) 15 ಲಕ್ಷ ರೂ.ರೂಪಾಯಿ ಪರಿಹಾರ ಘೋಷಿಸಿದೆ. ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ ಈ ಅಪಘಾತದ ಬಗ್ಗೆ ತನಿಖೆ ನಡೆಸಿದ ಬಳಿಕ ನಿಗಮ ಈ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿ: ವಿಶ್ವದ ಟಾಪ್ 50ರಲ್ಲಿ ಭಾರತದ ಒಂದು ಶಿಕ್ಷಣ ಸಂಸ್ಥೆಯೂ ಇಲ್ಲ: ರಾಷ್ಟ್ರಪತಿ ಮುರ್ಮು 
    ಇದುವರೆಗೆ ಮೆಟ್ರೋ ರೈಲು ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತಿದ್ದ ಡಿಎಂಆರ್‌ಸಿ ಈ ಘಟನೆಯ ನಂತರ 10 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಈ ಹೆಚ್ಚುವರಿ ಸಹಾಯವನ್ನು ಮಹಿಳೆಯ ಸಾವಿನಿಂದ ತೊಂದರೆಗೀಡಾದ ಇಬ್ಬರು ಚಿಕ್ಕ ಮಕ್ಕಳಿಗೆ ನೀಡಲಾಗುತ್ತದೆ.

    ಡಿಸೆಂಬರ್ 14, ಗುರುವಾರ ನಂಗ್ಲೋಯ್ ನಿವಾಸಿ ರೀನಾ(35) ಅವರು ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಗೆ ತನ್ನ ಪುತ್ರನೊಂದಿಗೆ ಏರಲು ಯತ್ನಿಸಿದ್ದರು. ಆಗ ಬಾಗಿಲಿಗೆ ಆಕೆಯ ಸೀರೆ ಸಿಕ್ಕಿಹಾಕಿಕೊಂಡಿದ್ದು, ಮೆಟ್ರೋ ರೈಲು ಮುಂದಕ್ಕೆ ಚಲಿಸಿದೆ. ಇದರಿಂದ ಆಕೆಯನ್ನು ರೈಲು ಬಹಳ ದೂರ ಎಳೆದುಕೊಂಡು ಹೋಗಿದೆ. ಆಗ ಆಕೆ ರೈಲಿನ ಚಕ್ರಗಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ರಿನಾರನ್ನು ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್ 16 ರಂದು ಕೊನೆಯುಸಿರೆಳೆದಿದ್ದರು.

    ಈ ಘಟನೆ ಬೆಳಕಿಗೆ ಬಂದ ನಂತರ ದೆಹಲಿ ಮೆಟ್ರೋ ರೈಲು ನಿಗಮವು ತನಿಖೆಗೆ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಗೆ ಜವಾಬ್ದಾರಿಯನ್ನು ನೀಡಿತ್ತು. ಮೆಟ್ರೊ ರೈಲು ಡೋರ್ ಅಪಘಾತಕ್ಕೆ ಬಲಿಯಾದ ಮಹಿಳೆಯ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ನೀಡಬೇಕಿತ್ತು. ಮೆಟ್ರೋ ರೈಲ್ವೇ ನಿಯಮ 2017ರ ಪ್ರಕಾರ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು, ಇದಲ್ಲದೆ ಹೆಚ್ಚುವರಿಯಾಗಿ 10 ಲಕ್ಷ ಮಾನವೀಯ ನೆರವು ನೀಡಲಾಗುವುದು. ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ, ಈ ಮೊತ್ತವನ್ನು ಯಾರಿಗೆ ನೀಡಲಾಗುತ್ತದೆ ಎಂಬುದನ್ನು ನಿರ್ಧರಿಸಲು ಕಾನೂನುಬದ್ಧ ವಾರಸುದಾರರನ್ನು ಹುಡುಕಲಾಗುತ್ತಿದೆ ಎಂದು ನಿಗಮ ತಿಳಿಸಿದೆ.

    ಇದಲ್ಲದೇ ಮೃತ ಮಹಿಳೆಯ ಎರಡೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಡಿಎಂಆರ್‌ಸಿ ವಹಿಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸೂಚನೆಯಂತೆ ದೆಹಲಿ ಮೆಟ್ರೋ ಮ್ಯಾನೇಜ್ಮೆಂಟ್ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಲಿದೆ.

    “ನನ್ನ ಜಾತಿ ಮೇಲೂ ಹಲ್ಲೆ ನಡೆದಿದೆ,ಆದರೆ..”: ಜಗದೀಪ್ ಧನ್ಖರ್ ‘ಅವಮಾನ’ಕ್ಕೆ ಖರ್ಗೆ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts