More

    ಎರಡು ದಿನ ಐಸಿಯುನಲ್ಲಿದ್ದು ಬಂದು ಸೆಮೀಸ್‌ನಲ್ಲಿ ಮಿಂಚಿದರು ಮೊಹಮದ್ ರಿಜ್ವಾನ್!

    ದುಬೈ: ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಆಸೀಸ್ ವಿರುದ್ಧ 67 ರನ್ ಸಿಡಿಸಿ ಪಾಕ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದ ವಿಕೆಟ್ ಕೀಪರ್-ಆರಂಭಿಕ ಮೊಹಮದ್ ರಿಜ್ವಾನ್, ಪಂದ್ಯಕ್ಕೆ ಮುನ್ನ 2 ದಿನಗಳನ್ನು ಐಸಿಯುನಲ್ಲಿ ಕಳೆದಿದ್ದರು ಎಂಬುದು ಬೆಳಕಿಗೆ ಬಂದಿದೆ.

    ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದಾಗಿ ಅವರು ನ. 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. 2 ರಾತ್ರಿ ಐಸಿಯುನಲ್ಲಿದ್ದರು. ಬಳಿಕ ಕೂಡಲೆ ಚೇತರಿಕೆ ಕಂಡು, ಪಂದ್ಯಕ್ಕೆ ಫಿಟ್ ಆಗಿದ್ದರು ಎಂದು ಪಾಕ್ ತಂಡದ ವೈದ್ಯ ನಜೀಬ್ ಸಮ್ರೂ ತಿಳಿಸಿದ್ದಾರೆ. ಸೆಮೀಸ್‌ನಲ್ಲಿ ಆಡಲು 29 ವರ್ಷದ ರಿಜ್ವಾನ್ ಉತ್ಸುಕರಾಗಿದ್ದ ಕಾರಣ ಕಣಕ್ಕಿಳಿಸಲಾಯಿತು ಎಂದು ಬಾಬರ್ ಅಜಮ್ ತಿಳಿಸಿದ್ದಾರೆ.

    ರಿಜ್ವಾನ್‌ಗೆ ದುಬೈ ಆಸ್ಪತ್ರೆಯಲ್ಲಿ ಭಾರತ ಮೂಲದ ವೈದ್ಯ ಶಹೀರ್ ಸೈನಾಲಬ್ದಿನ್ ಚಿಕಿತ್ಸೆ ನೀಡಿದ್ದು, ಅವರು ಅಷ್ಟು ಬೇಗನೆ ಚೇತರಿಸಿಕೊಂಡ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ಆಡಬೇಕು. ನಾನು ತಂಡದ ಜತೆಗಿರಬೇಕು ಎಂದು ರಿಜ್ವಾನ್, ಆಸ್ಪತ್ರೆಯಲ್ಲಿರುವ ಸಮಯದಲ್ಲಿ ವೈದ್ಯರ ಬಳಿ ಹೇಳುತ್ತಿದ್ದರು ಎಂದು ಶಹೀರ್ ತಿಳಿಸಿದ್ದಾರೆ.

    ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಕೂಡ ರಿಜ್ವಾನ್ ಬದ್ಧತೆಯನ್ನು ಪ್ರಶಂಸಿಸಿದ್ದು, ಅವರೊಬ್ಬ ವಾರಿಯರ್ ಎಂದು ಬಣ್ಣಿಸಿದ್ದಾರೆ. ರಿಜ್ವಾನ್ ಈ ಮುನ್ನ ಭಾರತ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ ಮೊದಲಿಗರೆನಿಸಿದ್ದಾರೆ.

    ಪತ್ನಿಯನ್ನು ಮೆಚ್ಚಿಸಲು ಕ್ಯಾಚ್ ಕೈಚೆಲ್ಲಿದರಂತೆ ಪಾಕ್​ ಕ್ರಿಕೆಟಿಗ ಹಸನ್ ಅಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts