More

    ಮರ್ಯಾದೆಗೇಡು ಹತ್ಯೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ; ಪೊಲೀಸರಿಗೆ ಸಿಕ್ಕಿದ್ದಾದರೂ ಏನು?

    ಔರಂಗಾಬಾದ್​: ನೆರೆಮನೆಯಲ್ಲಿದ್ದ ಪ್ರೇಮಿಯ ಮನೆಗೆ ಹೋಗಿದ್ದು, ಎಷ್ಟು ಗೋಗರೆದರೂ ಮನೆಗೆ ಮರಳಲು ಯುವತಿ ನಿರಾಕರಿಸಿದ್ದಳು. ಇದರಿಂದ ಕುಪಿತನಾದ ಆಕೆಯ ಸಹೋದರನೇ ಚೂರಿಯಿಂದ ಹಲವು ಬಾರಿ ಇರಿದು ಆಕೆಯನ್ನು ಹತ್ಯೆ ಮಾಡಿದ್ದ. ಜತೆಗೆ, ಕೋಣೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆಕೆಯ ಪ್ರೇಮಿಯನ್ನು ಇರಿದು ಹತ್ಯೆ ಮಾಡಿದ್ದ.

    ಇಬ್ಬರೂ ಸತ್ತಿರುವುದನ್ನು ಖಚಿತಪಡಿಸಿಕೊಂಡು ನದಿಯ ತಟದ ಮೇಲೆ ಒಂದೇ ಚಿತೆಯಲ್ಲಿ ಪ್ರೇಮಿಗಳ ಶವಗಳನ್ನು ಸುಡುತ್ತಿರುವಾಗ ರಂಗಪ್ರವೇಶಿಸಿದ ಪೊಲೀಸರು ಚಿತೆಯನ್ನು ನಂದಿಸಿ ನೋಡಿದಾಗ ಯುವತಿಯ ದೇಹದ ಸಣ್ಣ ಭಾಗ ಹಾಗೂ ಮೂರನೇ ಎರಡು ಭಾಗದಷ್ಟು ದಹನವಾಗಿ ಉಳಿದಿದ್ದ ಯುವಕನ ದೇಹದ ಭಾಗವನ್ನು ಪಡೆದುಕೊಂಡು ಮರಳಿದ್ದಾರೆ.

    ಔರಂಗಾಬಾದ್​ನ ನಿವಾಸಿಗಳಾದ ಅಮೃತಾ ಕೌರ್​ (18) ಮತ್ತು ನೀರಜ್​ ಕುಮಾರ್​ (19) ಹತರಾದವರು. ಅಕ್ಕಪಕ್ಕದ ಮನೆಯಲ್ಲೇ ವಾಸವಾಗಿದ್ದ ಅಮೃತಾ ಮತ್ತು ನೀರಜ್​ ನಡುವೆ ಪ್ರೇಮ ಚಿಗುರೊಡೆದಿತ್ತು. ನೀರಜ್ ಸೂರತ್​ನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಯೇ ಇರುತ್ತಿದ್ದ. ಕೋವಿಡ್​-19 ಹಿನ್ನೆಲೆಯಲ್ಲಿ ಔರಂಗಾಬಾದ್​ಗೆ ಮರಳಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ವೈರಾಣು ಸೋಂಕಿನಿಂದ ಚೇತರಿಸಿಕೊಂಡ ಅಮಿತ್​ ಷಾ

    ನೀರಜ್​ ಮನೆಗೆ ಶನಿವಾರ ಬೆಳಗ್ಗೆ ತೆರಳಿದ್ದ ಅಮೃತಾ ಸಂಜೆಯಾದರೂ ತನ್ನ ಮನೆಗೆ ಮರಳಿರಲಿಲ್ಲ. ಹಾಗಾಗಿ, ಆಕೆಯ ಪಾಲಕರು ಮತ್ತು ಸಹೋದರ ಆಕೆಯನ್ನು ಕರೆಯಲು ನೆರೆಮನೆಗೆ ಹೋಗಿದ್ದರು. ಮನೆಗೆ ಬರುವಂತೆ ಅದೆಷ್ಟೇ ಗೋಗರೆದರೂ ಆಕೆ ಒಪ್ಪಿರಲಿಲ್ಲ. ಸಹೋದರನಂತೂ ಕಣ್ಣಲ್ಲಿ ನೀರು ಹಾಕಿ ಕರೆದರೂ ಆಕೆಯ ಮನ ಕರಗಿರಲಿಲ್ಲ. ಇದರಿಂದ ಸಿಟ್ಟಾದ ಆತ ತನ್ನೊಂದಿಗೆ ತಂದಿದ್ದ ಚೂರಿಯಿಂದ ಆಕೆಯನ್ನು ಮನಬಂದಂತೆ ಇರಿದ ಎನ್ನಲಾಗಿದೆ.

    ಅಮೃತಾಳನ್ನು ಆಕೆಯ ಸಹೋದರ ಇರಿಯುವಾಗ ನೀರಜ್​ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ. ಅದು ಸಾಧ್ಯವಾಗದ್ದರಿಂದ ಆತ ಕೋಣೆಯೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದ. ಕೋಣೆಯ ಬಾಗಿಲು ಮುರಿದು ಒಳನುಗ್ಗಿದ್ದ ಅಮೃತಾಳ ಸಹೋದರ ಮನಬಂದಂತೆ ಚುಚ್ಚಿ ಆತನನ್ನೂ ಸಾಯಿಸಿದ.
    ಬಳಿಕ ಎರಡೂ ಶವಗಳನ್ನು ತೆಗೆದುಕೊಂಡು ರಾತ್ರೋರಾತ್ರಿ ಕಪಾಸಿಯಾ ಗ್ರಾಮದ ಬಳಿ ಹರಿಯುವ ನದಿ ತಟ್ಟಕ್ಕೆ ಹೋಗಿ, ಚಿತೆಯನ್ನು ಸಿದ್ಧಪಡಿಸಿದ. ಎರಡೂ ಶವಗಳನ್ನು ಅದರ ಮೇಲಿಟ್ಟು ಅಗ್ನಿಸ್ಪರ್ಶ ಮಾಡಿದ ಎನ್ನಲಾಗಿದೆ.

    ಆ ವೇಳೆಗೆ ಸುದ್ದಿತಿಳಿದಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದರು. ಅಷ್ಟರಲ್ಲೇ ಚಿತೆಯನ್ನು ಬೆಂಕಿ ಆವರಿಸಿಕೊಂಡಾಗಿತ್ತು. ಆದರೂ ಬೆಂಕಿ ನಂದಿಸಿ, ಶವಗಳನ್ನು ಹೊರತೆಗೆಯಲು ಪ್ರಯತ್ನಿಸಿದರು. ಅಮೃತಾಳ ಶವ ಬಹುತೇಕ ಭಾಗ ಬೆಂದು ಹೋದಿ, ಸಣ್ಣದೊಂದು ಭಾಗ ಮಾತ್ರ ಸಿಕ್ಕಿತು. ಅಲ್ಲದೆ ನೀರಜ್​ ದೇಹ ಕೂಡ ಮೂರನೇ ಎರಡು ಭಾಗದಷ್ಟು ದಹನವಾಗಿದ್ದು, ಉಳಿದ ಭಾಗ ಮಾತ್ರ ಸಿಕ್ಕಿತು ಎನ್ನಲಾಗಿದೆ.

    ಇದನ್ನೂ ಓದಿ: ಪಂಜಾಬ್​ನಲ್ಲೂ ಕಾಂಗ್ರೆಸ್​ಗೆ ಆರಂಭವಾಗಿದೆ ತಳಮಳ, ಸಿಎಂ, ರಾಜ್ಯಸಭೆ ಸದಸ್ಯರ ನಡುವೆ ಜಟಾಪಟಿ

    ಅಮೃತಾಳ ಸಹೋದರ ಆಕೆಯನ್ನು ಇರಿಯುತ್ತಿದ್ದರೆ ಅಕ್ಕಪಕ್ಕದ ಮನೆಯವರು ಹಾಗೂ ನೀರಜ್​ ಮನೆಯವರು ಕೂಡ ಮೌನವಾಗಿ ನಿಂತು ನೋಡುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ನೀರಜ್​ನನ್ನು ರಕ್ಷಿಸಿಕೊಳ್ಳಲು ಸ್ವತಃ ಆತನ ಮನೆಯವರೇ ಮುಂದಾಗದಿದ್ದದ್ದು ನಿಜಕ್ಕೂ ಆಶ್ಚರ್ಯವೇ ಸರಿ ಎಂದು ಔರಾಂಗಾಬಾದ್​ ಪೊಲೀಸ್​ ಠಾಣೆಯೊಂದರ ಎಸ್​ಎಚ್​ಒ ಸುಜೀತ್​ ಕುಮಾರ್​ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀರಜ್​ನ ಮನೆಯವರನ್ನು ಬಂಧಿಸಿದ್ದಾರೆ. ಆದರೆ, ಸಹೋದರಿಯ ಜತೆಗೆ ನೀರಜ್​ನನ್ನು ಹತ್ಯೆ ಮಾಡಿದ ಅಮೃತಾ ಅವರ ಮನೆಯವರು ಯಾರನ್ನೂ ಪೊಲೀಸರು ಬಂಧಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಕಿಚ್ಚನ ‘ಫ್ಯಾಂಟಮ್​’ ಫಸ್ಟ್​ಲುಕ್​ಗೆ ಶುರುವಾಗಿದೆ ಕ್ಷಣಗಣನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts