More

    ಐದು ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳಿಸಿ ಆರ್‌ಸಿಬಿ ತಂಡದ ನಾಯಕ ದಾಖಲೆ ಮುರಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್

    ಕೋಲ್ಕತ: ಐಸಿಸಿ ಟೂರ್ನಿಯ ನಾಕೌಟ್‌ನಲ್ಲಿ ಕ್ಯಾಚ್ ಬಿಟ್ಟು ಮ್ಯಾಚ್ ಕೈ ಚೆಲ್ಲಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಚೋಕರ್ಸ್‌ ಎನಿಸಿಕೊಂಡಿದೆ. ಅನುಭವಿ ಬ್ಯಾಟರ್ ಡೇವಿಡ್ ಮಿಲ್ಲರ್ (101 ರನ್, 116 ಎಸೆತ, 8 ಬೌಂಡರಿ, 5 ಸಿಕ್ಸರ್) ಶತಕದ ಹೋರಾಟದ ನಡುವೆಯೂ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್‌ನ 2ನೇ ಸೆಮಿೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು 3 ವಿಕೆಟ್‌ಗಳಿಂದ ವೀರೋಚಿತ ಸೋಲುಂಡಿದೆ. ಸರ್ವಾಂಗೀಣ ನಿರ್ವಹಣೆ ತೋರಿದ ಪ್ಯಾಟ್ ಕಮ್ಮಿನ್ಸ್ ಪಡೆ ಪ್ರಯಾಸದ ಗೆಲುವಿನೊಂದಿಗೆ ೈನಲ್‌ಗೇರಿದೆ. ಭಾನುವಾರ ಆತಿಥೇಯ ಭಾರತದ ಎದುರು ಪ್ರಶಸ್ತಿಗಾಗಿ ಹೋರಾಡಲಿದೆ.
    ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಉಪಾಂತ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ದಕ್ಷಿಣ ಆಫ್ರಿಕಾ 14 ಓವರ್‌ಗಳಲ್ಲಿ 4 ವಿಕೆಟ್‌ಗೆ 44 ರನ್‌ಗಳಿಸಿದಾಗ ಮಳೆಯಿಂದಾಗಿ 40 ನಿಮಿಷ ಆಟ ಸ್ಥಗಿತಗೊಂಡಿತು. ಬಳಿಕ ಮಿಲ್ಲರ್ ಸಾಹಸದ ನಡುವೆ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಚೇಸಿಂಗ್‌ನಲ್ಲಿ ಪರದಾಡಿದ ಆಸೀಸ್ ಟ್ರಾವಿಸ್ ಹೆಡ್ (62 ರನ್, 48 ಎಸೆತ, 9 ಬೌಂಡರಿ, 2 ಸಿಕ್ಸರ್) ಒದಗಿಸಿದ ಆರಂಭದಿಂದ 47.2 ಓವರ್‌ಗಳಲ್ಲಿ 7 ವಿಕೆಟ್‌ಗೆ 215 ರನ್ ಗಳಿಸಿ ಟೂರ್ನಿಯಲ್ಲಿ ಸತತ 8ನೇ ಜಯ ದಾಖಲಿಸಿ 8ನೇ ಬಾರಿ ವಿಶ್ವಕಪ್ ೈನಲ್‌ಗೇರಿದೆ. ಹಾಲಿ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯ ಮೂಲಕವೇ ಅಭಿಯಾನ ಆರಂಭಿಸಿದ್ದ ಭಾರತ-ಆಸೀಸ್ ತಂಡಗಳು ಇದೀಗ ೈನಲ್‌ನಲ್ಲೂ ಮುಖಾಮುಖಿ ಆಗುತ್ತಿರುವುದು ವಿಶೇಷವೆನಿಸಿದೆ.

    ಮಿಲ್ಲರ್ ಶತಕದ ಹೋರಾಟ ವ್ಯರ್ಥ: ಲೀಗ್ ಹಂತದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದಾಗ ರನ್‌ಮಳೆ ಹರಿಸಿದ್ದ ಆಫ್ರಿಕಾ, ಸೆಮೀಸ್‌ನಲ್ಲಿ ಆರಂಭಿಕ ಆಘಾತದಿಂದ ಪರದಾಡಿತು. ಾರ್ಮ್‌ನಲ್ಲಿದ್ದ ಕ್ವಿಂಟನ್ ಡಿಕಾಕ್ (3), ವಾನ್ ಡೆರ್ ಡುಸೆನ್ (6), ಏಡೆನ್ ಮಾರ್ಕ್ರಮ್ (10) ನಿರಾಸೆ ಮೂಡಿಸಿದರು. 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಹರಿಣಗಳಿಗೆ ಮಿಲ್ಲರ್- ಹೆನ್ರಿಕ್ ಕ್ಲಾಸೆನ್ ಜೋಡಿ 5ನೇ ವಿಕೆಟ್‌ಗೆ 113 ಎಸೆತಗಳಲ್ಲಿ 95 ರನ್ ಸೇರಿಸಿ ತುಸು ಚೇತರಿಕೆ ನೀಡಿತು. ಅರೆಕಾಲಿಕ ಬೌಲರ್ ಟ್ರಾವಿಸ್ ಹೆಡ್ (21ಕ್ಕೆ 2) ಈ ಜೋಡಿಯನ್ನು ಬೇರ್ಪಡಿಸಿ ಮತ್ತೆ ಆಸೀಸ್‌ಗೆ ಮೇಲುಗೈ ತಂದರು. 115 ಎಸೆತಗಳಲ್ಲಿ ಶತಕ ಸಿಡಿದ ಬೆನ್ನಲ್ಲೇ ಮಿಲ್ಲರ್ ವಿಕೆಟ್ ಒಪ್ಪಿಸಿದರು. 2018ರ ಬಳಿಕ ಮಿಲ್ಲರ್‌ಗಳಿಸಿದ ಮೊದಲ ಶತಕ ಇದಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ (51ಕ್ಕೆ3), ಮಿಚೆಲ್ ಸ್ಟಾರ್ಕ್ (34ಕ್ಕೆ3) ಹರಿಣಗಳಿಗೆ ಕಡಿವಾಣ ಹೇರಿದರು.

    ದ.ಆಫ್ರಿಕಾ: 49.4 ಓವರ್‌ಗಳಲ್ಲಿ 212 ( ಡಿಕಾಕ್ 3, ಡುಸೆನ್ 6, ಮಾರ್ಕ್ರಮ್ 10, ಕ್ಲಾಸೆನ್ 47, ಮಿಲ್ಲರ್ 101, ಕೊಟ್ ಜೀ 19, ರಬಾಡ 10, ಸ್ಟಾರ್ಕ್ 34ಕ್ಕೆ3, ಕಮ್ಮಿನ್ಸ್ 51ಕ್ಕೆ3, ಹೆಡ್ 21ಕ್ಕೆ2).
    ಆಸ್ಟ್ರೇಲಿಯಾ: 47.2 ಓವರ್‌ಗಳಲ್ಲಿ 7 ವಿಕೆಟ್‌ಗೆ 215 (ಹೆಡ್ 62, ವಾರ್ನರ್ 29, ಸ್ಮಿತ್ 30, ಲಬುಶೇನ್ 18, ಇಂಗ್ಲಿಸ್ 28, ಶಮ್ಸಿ 42ಕ್ಕೆ2, ಕೊಟ್ ಜೀ 47ಕ್ಕೆ2).

    1: ಡೇವಿಡ್ ಮಿಲ್ಲರ್ ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಶತಕ ಸಿಡಿಸಿದ ದ.ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿದರು. 2015ರ ಸೆಮಿೈನಲ್‌ನಲ್ಲಿ  ಡು ಪ್ಲೆಸಿಸ್ 82 ರನ್ ಹಿಂದಿನ ಗರಿಷ್ಠ.

    5. ಡೇವಿಡ್ ಮಿಲ್ಲರ್ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಎದುರು ಹೆಚ್ಚು ಶತಕಗಳಿಸಿದ ್ಾ ಡು ಪ್ಲೆಸಿಸ್ (5) ದಾಖಲೆ ಸರಿಗಟ್ಟಿದರು.

    ೈನಲ್ ಪಂದ್ಯ
    ಭಾರತ-ಆಸ್ಟ್ರೇಲಿಯಾ
    ಯಾವಾಗ: ನವೆಂಬರ್ 19, ಭಾನುವಾರ.
    ಎಲ್ಲಿ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts