More

    ಸೋತಿದ್ದೇನೆ, ಹೇಳೋಕೇನೂ ಇಲ್ಲ ಎಂದು ಕಣ್ಣೀರಿಟ್ಟ ಮೇಯರ್ ಸ್ಥಾನಾಕಾಂಕ್ಷಿ; ರಾಜೀನಾಮೆ ಕೊಡಲು ಮುಂದಾದ ಬಿಜೆಪಿ ಸದಸ್ಯೆ

    ಮೈಸೂರು: ಮೈಸೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನಾಕಾಂಕ್ಷಿಯಾಗಿದ್ದ ಬಿಜೆಪಿ ಸದಸ್ಯೆ ಕಾಂಗ್ರೆಸ್​-ದಳ ಮೈತ್ರಿಯಿಂದಾಗಿ ಗಳಗಳನೆ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದ ಸುನಂದಾ ಫಾಲನೇತ್ರ ರಾಜೀನಾಮೆ ನೀಡಲೂ ಮುಂದಾಗಿದ್ದಾರೆ.

    ನಿನ್ನೆಯಷ್ಟೇ ನಡೆದ ಚುನಾವಣೆಯಲ್ಲಿ ದಳ-ಕಾಂಗ್ರೆಸ್​ ಮೈತ್ರಿಯಾಗಿ ಮೇಯರ್​ ಸ್ಥಾನ ತೆನೆ ಹೊತ್ತ ಮಹಿಳೆಯ ಪಾಲಾಗಿತ್ತು. ಹೀಗಾಗಿ ಮೇಯರ್ ಆಗುತ್ತೇನೆಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಸುನಂದಾ ಫಾಲನೇತ್ರ ಅವರಿಗೆ ತೀವ್ರ ನಿರಾಶೆ ಉಂಟಾಗಿದ್ದು, ಇಂದು ಅವರು ಕಣ್ಣೀರ್ಗರೆದಿದ್ದಾರೆ.

    ನನ್ನ ಸೋಲಿನಿಂದ ಲಿಂಗಾಯತ ಸುಮುದಾಯಕ್ಕೆ ಹಿನ್ನೆಡೆಯಾಗಿದೆ. ನಾನು ಮೇಯರ್ ಆಗುತ್ತೇನೆ ಎಂದು ತುಂಬಾ‌ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದ ನನಗೆ ಸೋಲಾಗಿದೆ. ಹೀಗಾಗಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ‌ ನೀಡಲು ಮುಂದಾಗಿದ್ದೇನೆ ಎಂದಿರುವ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಲಹೆಯಂತೆ ನಡೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

    ರಾಜೀನಾಮೆ ನೀಡುವ ಕುರಿತು ಮುಖ್ಯಮಂತ್ರಿ ಅವರಿಗೆ ಸುನಂದಾ ಅವರು ಪತ್ರವನ್ನೂ ಬರೆದಿದ್ದಾರೆ. ಕುವೆಂಪುನಗರದ ವಾರ್ಡ್ ನಂ.59ರ ಪಾಲಿಕೆ ಸದಸ್ಯೆ ಆಗಿರುವ ಸುನಂದಾ ಫಾಲನೇತ್ರ, ಮೇಯರ್ ಸ್ಥಾನಕ್ಕೆ ಸ್ಫರ್ಧಿಸಿ ಪರಾಭವ ಹೊಂದಿದ್ದೇನೆ. ಇದರಿಂದ ಬೇಸರವಾಗಿದೆ. ಪಾಲಿಕೆ ಸದಸ್ಯೆಯಾಗಿ ಮುಂದುವರಿಯಲು ಮಾನಸಿಕ ಹಿಂಸೆ ಆಗುತ್ತಿದೆ. ಹಾಗಾಗಿ ರಾಜೀನಾಮೆ ನೀಡುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ- ಮೂವರ ಸಾವು- ಕೆಲಸಗಾರರ ಸ್ಥಿತಿ ಚಿಂತಾಜನಕ

    ಸೋಷಿಯಲ್ ಮೀಡಿಯಾಕ್ಕೆ ಅಂಕುಶ: ಫಾರ್ವರ್ಡ್ ಸಂದೇಶಗಳ ಮೂಲಕ್ಕೆ ಗಾಳ; ಹೊಸ ಕರಡು ನಿಯಮ ಸಿದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts