More

    ಬಾಂಗ್ಲಾದೇಶದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು

    ಛಟ್ಟೋಗ್ರಾಮ್​: ಆರಂಭಿಕರಾದ ರಹಮಾನುಲ್ಲಾ ಗುರ್ಬಜ್​ (145) ಮತ್ತು ಇಬ್ರಾಹಿಂ ಜದ್ರಾನ್​ (100) ಭರ್ಜರಿ ಶತಕಗಳ ನೆರವಿನಿಂದ ಅಫ್ಘಾನಿಸ್ತಾನ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 142 ರನ್​ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡ ಅಫ್ಘಾನಿಸ್ತಾನ ತಂಡ, ಕಳೆದ 8 ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಏಕದಿನ ಸರಣಿ ಗೆದ್ದ ಕೇವಲ 2ನೇ ತಂಡ ಎಂಬ ಐತಿಹಾಸಿಕ ಸಾಧನೆ ಮಾಡಿದೆ. ಈ ಮುನ್ನ ಕಳೆದ 8 ವರ್ಷಗಳಲ್ಲಿ ಇಂಗ್ಲೆಂಡ್​ ಮಾತ್ರ ಬಾಂಗ್ಲಾದಲ್ಲಿ ಏಕದಿನ ಸರಣಿ ಜಯಿಸಿದೆ. ಭಾರತ ಸೇರಿದಂತೆ ಇನ್ನೂ ಕೆಲ ಪ್ರಮುಖ ತಂಡಗಳು ಇತ್ತೀಚೆಗೆ ಬಾಂಗ್ಲಾದಲ್ಲಿ ಏಕದಿನ ಸರಣಿ ಸೋತಿವೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಫ್ಘನ್​ ತಂಡ ಗುರ್ಬಜ್​-ಜದ್ರಾನ್​ ಜೋಡಿ ಮೊದಲ ವಿಕೆಟ್​ಗೆ ಸೇರಿಸಿದ 256 ರನ್​ ಜತೆಯಾಟದ ಬಲದಿಂದ 9 ವಿಕೆಟ್​ಗೆ 331 ರನ್​ ಪೇರಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 43.2 ಓವರ್​ಗಳಲ್ಲಿ 189 ರನ್​ಗಳಿಗೆ ಸರ್ವಪತನ ಕಂಡಿತು.

    ಅಫ್ಘಾನಿಸ್ತಾನ: 9 ವಿಕೆಟ್​ಗೆ 331 (ರಹಮಾನುಲ್ಲಾ 145, ಇಬ್ರಾಹಿಂ ಜದ್ರಾನ್​ 100, ರಹಮತ್​ ಷಾ 2, ಮೊಹಮದ್​ ನಬಿ 25*, ಮುಸ್ತಾಫಿಜುರ್​ 60ಕ್ಕೆ 2, ಹಸನ್​ ಮಹ್ಮುದ್​ 70ಕ್ಕೆ 2, ಶಕೀಬ್​ 50ಕ್ಕೆ 2, ಮೆಹದಿ ಹಸನ್​ 60ಕ್ಕೆ 2), ಬಾಂಗ್ಲಾದೇಶ: 43.2 ಓವರ್​ಗಳಲ್ಲಿ 189 (ಲಿಟನ್​ ದಾಸ್​ 13, ನಜ್ಮುಲ್​ 1, ಶಕೀಬ್​ 25, ಮುಶ್ಫಿಕರ್​ ರಹೀಂ 69, ಮೆಹದಿ ಹಸನ್​ 25, ಫಾರೂಖಿ 22ಕ್ಕೆ 3, ಮುಜೀಬ್​ 40ಕ್ಕೆ 3, ರಶೀದ್​ ಖಾನ್​ 28ಕ್ಕೆ 2).

    ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ವಿಂಡೀಸ್​ ತಂಡದಲ್ಲಿ ಚಂದ್ರಪಾಲ್​ ಪುತ್ರ, ದೈತ್ಯದೇಹಿ ಸ್ಪಿನ್ನರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts