More

    ಅಫ್ಘಾನಿಸ್ಥಾನದ ಜಿಹಾದಿ ಶಾಲೆಯಲ್ಲೂ ಸಿಗುತ್ತೆ ಪದವಿ; ಇಲ್ಲಿಂದ ಹೊರ ಬಂದ್ರು 110 ಜನ ಪದವೀಧರರು!

    ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದ ತಾಲಿಬಾನ್‌ನ ಜಿಹಾದಿ ಶಾಲೆಯೊಂದರಿಂದ ಒಟ್ಟು 110 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಎಂದು ಅಫ್ಘಾನಿಸ್ತಾನ್ ಇಂಟರ್‌ನ್ಯಾಶನಲ್ ಮಂಗಳವಾರ (ಜನವರಿ 31) ವರದಿ ಮಾಡಿದೆ. ತಾಲಿಬಾನ್‌ನ ಶಿಕ್ಷಣ ಸಚಿವರ ಹೇಳಿಕೆ ಪ್ರಕಾರ, ಅಫ್ಘಾನಿಸ್ತಾನದ ಪ್ರತಿ ಜಿಲ್ಲೆಯಲ್ಲಿ ಅಂತಹ ಮೂರರಿಂದ 10 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ವರದಿ ಹೇಳಿದೆ.

    ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಜಾದಾ ಅವರಿಗೆ ನೀಡಿದ ಆದೇಶವು ಜಿಹಾದಿ ಶಾಲೆಗಳ ರಚನೆ ಮತ್ತು ವೆಚ್ಚಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ. ಪ್ರತಿ ಶಾಲೆಗೆ 10 ಶಿಕ್ಷಕರು ಮತ್ತು ಎಂಟು ಸಿಬ್ಬಂದಿ ಇರಲಿದ್ದು, ಪ್ರತಿ ಸೆಮಿಸ್ಟರ್‌ನಲ್ಲಿ 500-1,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಬ್ಬಂದಿ ಸದಸ್ಯರಿಗೆ 15,000 ರಿಂದ 25,000 ಅಫ್ಘಾನಿ ಡಾಲರ್​ ವೇತನ ಶ್ರೇಣಿಯನ್ನು ಅನುಮೋದಿಸಲಾಗಿದೆ.

    ಜಿಹಾದಿ ಶಾಲೆಗಳ ಸಂಬಳವನ್ನು ಸಾರ್ವಜನಿಕ ಶಾಲಾ ಶಿಕ್ಷಕರ ಸಂಬಳಕ್ಕೆ ಹೋಲಿಸಲಾಗುವುದಿಲ್ಲ ಎಂದು ಅಫ್ಘಾನಿಸ್ತಾನ್ ಇಂಟರ್ನ್ಯಾಷನಲ್ ವರದಿ ಹೇಳಿದೆ. ಪದವಿಪೂರ್ವ ಪ್ರಮಾಣಪತ್ರ ಹೊಂದಿರುವ ಸಾರ್ವಜನಿಕ ಶಾಲಾ ಶಿಕ್ಷಕರು ಕೇವಲ 9,000 ಅಫ್ಘಾನಿ ಡಾಲರ್​ಗಳನ್ನು ಸಂಬಳವಾಗಿ ಪಡೆಯುತ್ತಾರೆ.

    ಈ ವರ್ಷದ ಆಗಸ್ಟ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಎರಡು ವರ್ಷ ಸಂದಿದೆ. ಇತ್ತೀಚಿನ ದಿನಗಳಲ್ಲಿ, ಅಫ್ಘಾನಿಸ್ಥಾನ ಮಹಿಳೆಯರ ಮೇಲೆ ಹೇರಿದ ನಿರ್ಬಂಧಗಳ ಮೇಲೆ ಜಾಗತಿಕವಾಗಿ ಖಂಡನೆಯನ್ನು ಎದುರಿಸುತ್ತಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts