More

    ವಿಪಕ್ಷಗಳ ಟೀಕೆಯ ನಡುವೆ ಕೇಂದ್ರ ಬಜೆಟ್​ಅನ್ನು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದು ಹೀಗೆ…

    ಬೆಂಗಳೂರು: ಕೇಂದ್ರ ಬಜೆಟ್​ ಮಂಡನೆ ಆದ ಬಳಿಕ ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷದವರು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಕೇಂದ್ರದ ಬಜೆಟ್​ಅನ್ನು ವಿಪಕ್ಷದವರು ತೀವ್ರವಾಗಿ ಟೀಕಿಸಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನ ಸಮರ್ಥನೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಬಜೆಟ್​ಅನ್ನು ಸಮರ್ಥಿಸಿಕೊಂಡಿದ್ದಾರೆ.

    ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಭಾರತದ ಆರ್ಥಿಕ ಸ್ಥಿತಿ ವಿಶ್ವದ ಇತರ ಪ್ರಗತಿ ಹೊಂದಿದ ದೇಶಕ್ಕೆ ಹೋಲಿಸಿದರೆ ಉತ್ತಮವಾಗಿದೆ. ಬಹಳ ದೇಶಗಳಲ್ಲಿ ಆರ್ಥಿಕ‌ ಸಂಕಷ್ಟವಿದೆ ನಮ್ಮ ದೇಶದ ಆರ್ಥಿಕತೆ ಗಟ್ಡಿ ಫೌಂಡೇಶನ್‌ ಮೇಲಿದೆ. ಪ್ರಧಾನಿಯವರು‌ ಮೂಲಭೂತ ಸುಧಾರಣೆ ತಂದಿದ್ದಾರೆ. ಹಾಗಾಗಿ ನಮ್ಮ‌ ಜಿಡಿಪಿ ಆರೋಗ್ಯಪೂರ್ಣವಾಗಿದೆ. ಬಜೆಟ್​ನಲ್ಲಿ ಪ್ರಮುಖ ಅಂಶ 6.6% ವೃದ್ಧಿಗೆ ಇನ್ನಷ್ಟು ಬಲ ನೀಡುತ್ತದೆ. ಬಂಡವಾಳ ಔಟ್​ಲೇ 10 ಲಕ್ಷ ಕೋಟಿ ರೂ. ಹೆಚ್ಚಾಗಿದೆ. ಸಾಮಾಜಿಕ ಮೂಲಭೂತಕ್ಕೆ ಅನುದಾನ ಹೆಚ್ಚಿಗೆ ಮಾಡಲಾಗಿದೆ. ಇದರ ಸಕಾರಾತ್ಮಕ ಪರಿಣಾಮ ನೋಡಲಿದ್ದೇವೆ.

    ಈ ಬಾರಿ ಬಜೆಟ್​ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಲು ಹೆಚ್ಚಿನ ಅನುದಾನ ನೀಡಲಾಗಿದೆ. 2024-25 ಕುಡಿಯುವ ನೀರು ಕೊಡುವ ಗುರಿಗೆ ಪೂರಕವಾಗಿ ಅನುದಾನ ಹೆಚ್ಚಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು 3 ಕೋಟಿ ರೂ.ವರೆಗೆ ತರಿಗೆ ವಿನಾಯಿತಿ ನೀಡಲಾಗಿದೆ.

    ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು ಮಹಿಳೆಯರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪೂರಕವಾಗಿರಲಿದ್ದು ಉದ್ಯೋಗ ಸೃಷ್ಟಿಗೂ ಕ್ರಮ ವಹಸಿದ್ದಾರೆ. ಅದರ ಜೊತಗೆ ಯುವಕರ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.

    ಈ ಬಜೆಟ್​ ಕೃಷಿಗೂ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಿದ್ದು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗಿದೆ. ನಿಜಲಿಂಗಪ್ಪ ಕಾಲದಲ್ಲಿ ಭದ್ರಾ ಮೇಲ್ದಂಡೆ ಆಗಬೇಕು ಎಂಬುದು ಇತ್ತು. ಆವಾಗಿನಿಂದ 40 ವರ್ಷ ಕಳೆದರೂ ಯಾವ ಸರ್ಕಾರವೂ ಏನೂ ಮಾಡಿಲ್ಲ. ನಾವು ಬಂದ‌ ಮೇಲೆ ಯೋಜನೆ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ. ರಾಷ್ಟ್ರೀಯ ಯೋಜನೆ ಸಂಬಂಧಿಸಿದಂತೆ ಈಗ ಎಲ್ಲವೂ ಅನುಮೋದನೆ ಆಗಿದೆ. ಯುಪಿಎ ಸರ್ಕಾರ ಇದ್ದಾಗ ಎಕ್ಸಿಲರೇಟರ್ ಇರಿಗೇಷನ್ ಪ್ರೋಗ್ರಾಂ ಮಾಡಲಾಗಿತ್ತು. 2012ರಲ್ಲಿ 500 ಕೋಟಿ ರೂ. ಖರ್ಚು ಮಾಡಿದರೆ ಮಾತ್ರ ಅನುದಾನ ಕೊಡಲಾಗುತ್ತದೆ ಎಂದಿದ್ದರು. ಹಾಗಾಗಿ ಅನುದಾನವೇ ಬರುತ್ತಿರಲಿಲ್ಲ. ಎನ್​ಡಿಎ ಸರ್ಕಾರ ಬಂದ ಬಳಿಕ ಆ ಷರತ್ತು ತೆಗೆದು ಹಾಕಲಾಗಿದ್ದು ಈಗ ಯಾವುದೇ ಕಾರಾರು ಇಲ್ಲದೆ 5,300 ಕೋಟಿ ಬಂದರೆ ಮೋದಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು. ಕಾಡಾ ಕಾಮಗಾರಿ, ಎಫ್ಐಸಿ ಬಗ್ಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಿದ್ದು ಅದೂ ಸಿಗಲಿದೆ.

    ಈ ಘೋಷಣೆಯನ್ನು ನಾವು ಸ್ವಾಗತ ಮಾಡಬೇಕು. ಆದರೆ ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. 5300 ಕೋಟಿ ರೂ. ಬಂದಿದೆ ಎಂದು ಪ್ರತಿಪಕ್ಷಗಳಿಗೆ ನಿರಾಸೆಯಾಗಿದೆ. ಅದಕ್ಕಾಗಿ ಪ್ರತಿಪಕ್ಷ ವಿರೋಧ ಮಾಡುತ್ತಿದೆ. ನಗರಾಭಿವೃದ್ಧಿ ಇಲಾಖೆಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಎಲ್ಲಾ ಸರ್ಕಾರಗಳಲ್ಲೂ ಕರ್ನಾಟಕಕ್ಕೆ ಪಾಲು ಬರಲಿದೆ. ಭದ್ರ ಬುನಾದಿ ಹಾಕುವ ಎಲ್ಲಾ ಅಂಶ ಬಜೆಟ್​ನಲ್ಲಿ ಇದೆ. ಆರ್ಥಿಕ‌ ಸುಧಾರಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಎಲ್ಲಾ ರಂಗದಲ್ಲಿ ಯೋಚನೆ ಮಾಡಿ ಸಮಗ್ರ ಅಭಿವೃದ್ದಿಗಾಗಿ, ಮೈಕ್ರೋ ಲೆವೆಲ್, ಮ್ಯಾಕ್ರೋ ಲೆವೆಲ್​ಗೆ, ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಎಲ್ಲರಿಗೂ ಸಹಾಯ ಮಾಡುವ ಬಜೆಟ್ ಇದಾಗಿದೆ.

    ನರೇಗಾಗೆ ಬರಬೇಕಾದ ಹಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸ ಆಗಿಲ್ಲ. ಗ್ರಾಮೀಣ ಪ್ರದೇಶದ ಆಸ್ತಿ ಸೃಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ವಸತಿ, ಕೃಷಿಗೆ, ನಗರಾಭಿವೃದ್ಧಿ ಗೆ ಗ್ರಾಮೀಣಾಭಿವೃದ್ಧಿ ಗೆ ಅನುದಾನ ಬಂದಿದೆ. ಎಲ್ಲೆಲ್ಲಿ ನಿರೀಕ್ಷೆ ಇತ್ತು ಅಲ್ಲೆಲ್ಲ ಅನುದಾನ ಬಂದಿದೆ’ ಎಂದು ಸಿಎಂ ಬೊಮ್ಮಾಯಿ‌ ಸಮರ್ಥಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts