More

    ವಯಸ್ಕ ಯುವತಿಯರಿಗೆ ಅವರಿಷ್ಟದಂತೆ ಬದುಕುವ ಹಕ್ಕಿದೆ; ಲವ್​ ಸ್ಟೋರಿಗೆ ಹೈ ಕೋರ್ಟ್​ ಸಪೋರ್ಟ್​

    ನವದೆಹಲಿ: ಪ್ರೀತಿ ಮಾಡುವ ಮಕ್ಕಳಿಗೆ ಪ್ರೋತ್ಸಾಹಿಸುವ ತಂದೆ ತಾಯಿಗಿಂತ ವಿರೋಧಿಸುವ ಪೋಷಕರೇ ಹೆಚ್ಚು. ಅದೇ ಕಾರಣಕ್ಕೆ ಅದೆಷ್ಟೋ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗುವುದೋ ಅಥವಾ ಆತ್ಮಹತ್ಯೆಯಂತಹ ಕೆಟ್ಟ ಕೆಲಸಗಳಿಗೆ ಕೈ ಹಾಕಿಬಿಡುತ್ತಾರೆ. ಆದರೆ ವಯಸ್ಕ ಹೆಣ್ಣು ಮಗಳಿಗೆ ಆಕೆಯ ತಂದೆ ತಾಯಿಯ ವಿರೋಧವಿದ್ದರೂ ತನ್ನಿಷ್ಟದ ವ್ಯಕ್ತಿಯೊಂದಿಗೆ ಬದುಕುವ ಹಕ್ಕಿದೆ ಎಂದು ದೆಹಲಿ ಹೈ ಕೋರ್ಟ್​ ಮಹತ್ತರ ತೀರ್ಪನ್ನು ನೀಡಿದೆ.

    ಇದನ್ನೂ ಓದಿ: ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಿಗಂದೂರು ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

    ಸುಲೇಖ ಹೆಸರಿನ 20 ವರ್ಷದ ಯುವತಿ ಇತ್ತೀಚೆಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ವಿಚಾರವಾಗಿ ಆಕೆಯ ಅಣ್ಣ ಸುಲೇಖರನ್ನು ಯಾರೋ ಅಪಹರಿಸಿದ್ದಾರೆ ಎಂದು ದೂರು ನೀಡಿದ್ದ. ಬಬ್ಲೂ ಹೆಸರಿನ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದ.

    ಸುಲೇಖರನ್ನು ಹುಡುಕಿ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪ್ರಸ್ತುತ ಪಡಿಸಲಾಗಿದೆ. ಆ ಸಮಯದಲ್ಲಿ ಸುಲೇಖ ತಾನು ಬೇಕೆಂದೇ ಮನೆ ಬಿಟ್ಟು ಬಂದಿದ್ದು, ಬಬ್ಲೂನೊಂದಿಗೆ ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದಾಳೆ. ಸುಲೇಖ 2000 ಇಸವಿಯಲ್ಲಿ ಹುಟ್ಟಿದ್ದು, ಆಕೆ ವಯಸ್ಕ ಯುವತಿ. ಅವಳು ಆಕೆಯ ಇಷ್ಟದ ಪ್ರಕಾರ ಎಲ್ಲಾದರೂ, ಯಾರೊಂದಿಗಾದರೂ ಬದುಕುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.

    ಇದನ್ನೂ ಓದಿ: VIDEO: ಉಗ್ರ ಸ್ವರೂಪ ಪಡೀತಿದೆ ದೆಹಲಿ ಚಲೋ: ಪೊಲೀಸರಿಂದ ಅಶ್ರುವಾಯು ಪ್ರಯೋಗ

    ಸುಲೇಖ ಮತ್ತು ಬಬ್ಲೂ ಇಬ್ಬರ ಕುಟುಂಬಸ್ಥರು ಅವರ ಸಂಸಾರದಲ್ಲಿ ತಲೆ ಹಾಕುವಂತಿಲ್ಲ. ಒಂದು ವೇಳೆ ಅವರು ನವ ದಂಪತಿಗೆ ಹಲ್ಲೆ ಮಾಡುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ಶಿಕ್ಷೆ ತೆಗೆದುಕೊಳ್ಳಲಾಗುತ್ತದೆ. ಬೀಟ್​ ಪೊಲೀಸರು ದಂಪತಿಗೆ ರಕ್ಷಣೆ ನೀಡಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. (ಏಜೆನ್ಸೀಸ್​)

    ಆರು ತಿಂಗಳ ಕಾಲ ಮುಷ್ಕರಕ್ಕಿಲ್ಲ ಅನುಮತಿ​! ಪ್ರತಿಭಟಿಸಿದರೆ ಸಾವಿರ ರೂ ದಂಡ, ಒಂದು ವರ್ಷ ಜೈಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts