More

    ಕಲಿಕೆ ಅವಧಿಯಲ್ಲೇ ಕೌಶಲ ಅಳವಡಿಸಿಕೊಳ್ಳಿ

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಸಾಧಕರಾಗಬೇಕಾದರೆ ಕೆಲವನ್ನು ತ್ಯಾಗ ಮಾಡಬೇಕಾಗುತ್ತದೆ. ಟಿವಿ, ಮೊಬೈಲ್‌ಗಳ ಬಳಕೆ ಕಡಿಮೆ ಮಾಡಬೇಕು ಎಂದು ಆದಿಚುಂಚನಗಿರಿ ಯೂನಿವರ್ಸಿಟಿ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.

    ನಗರದ ಎಐಟಿ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದೃಷಿಕೋನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬೇಡವಾದ ವಿಷಯಗಳ ಬಗ್ಗೆ ಆಸಕ್ತಿ ತೋರಬಾರದು ಎಂದು ತಿಳಿಸಿದರು.
    ಭಗವಂತ ನಮಗೆ ಎಲ್ಲ ರೀತಿಯ ಶಕ್ತಿ ಕೊಟ್ಟಿದ್ದಾನೆ. ಆದರೆ ನಾವು ಸಣ್ಣ ಮಟ್ಟದ ಸಾಧನೆಗೆ ಮಾತ್ರ ಸೀಮಿತವಾಗುತ್ತಿದ್ದೇವೆ. ಈಗಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಂಬಿಎ ಕೋರ್ಸ್‌ಗೆ ಎಲ್ಲ ಕಡೆ ಅವಕಾಶಗಳಿವೆ. ಕಲಿಕೆ ಸಂದರ್ಭ ಕೌಶಲ ವರ್ಧಿಸಿಕೊಂಡರೆ ವೃತ್ತಿಯಲ್ಲಿ ಹೆಸರು, ಖ್ಯಾತಿ ಗಳಿಸಲು ಸಾಧ್ಯ ಎಂದು ತಿಳಿಸಿದರು.
    ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಸಹ ಸಂಸ್ಥಾಪಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಮಾತನಾಡಿ, ಇಂದು ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾವಿರ ಅಡಿವರೆಗೆ ಕೊರೆದರೂ ನೀರು ಬರುತ್ತಿಲ್ಲ. ಬೋರ್‌ವೆಲ್ ಕೊರೆಸಲು ರೈತರು ಹಣ ಕೊಟ್ಟು ನೀರು ಇಲ್ಲ, ಹಣವು ಇಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಕೇವಲ 400 ರೂ. ವೇತನದಿಂದ ನನ್ನ ವೃತ್ತಿ ಜೀವನ ಆರಂಭವಾಯಿತು. ಸೇಲ್ಸ್ ಸೂಪರ್‌ವೈಸರ್ ಆಗಿ ಕೆಲಸ ಮಾಡುವಾಗ ಹಿರಿಯ ಸಹೋದ್ಯೋಗಿಯೊಬ್ಬರ ಸಹಕಾರದಿಂದ ಕಾಫಿ ತೋಟಗಳಲ್ಲಿ ಹನಿ ನೀರಾವರಿ ಕಲ್ಪಿಸುವ ಅವಕಾಶ ಸಿಕ್ಕಿತು. ಅಲ್ಲಿ ನನಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ಬರಲಾರಂಭಿಸಿತು. ಅದರಿಂದ ಮನೆಗಳು, ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿಯಲ್ಲೂ ಮಳೆ ನೀರು ಕೊಯ್ಲು ಘಟಕಗಳನ್ನು ಸ್ಥಾಪಿಸುವ ಉದ್ದಿಮೆ ಆರಂಭಿಸಲು ಕಾರಣವಾಯಿತು ಎಂದರು.
    ಎಐಟಿ ಪ್ರಾಚಾರ್ಯ ಸಿ.ಟಿ.ಜಯದೇವ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಎಂಬಿಎ ಮುಖ್ಯಸ್ಥ ಡಾ. ಪ್ರಕಾಶ್ ರಾವ್, ಮನೋಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts