More

    ಜ್ಞಾನವೃದ್ಧಿಗೆ ಪೂರಕವಾದ ಕಲಿಕೆ ರೂಢಿಸಿಕೊಳ್ಳಿ

    ಬೀರೂರು: ಮಕ್ಕಳು ಪಠ್ಯಗಳಿಗೆ ಮಾತ್ರ ಆಸಕ್ತರಾಗದೆ ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡುವ ಮೂಲಕ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ಕೆಎಲ್‌ಕೆ ಸರ್ಕಾರಿ ಪ್ರೌಢಶಾಲೆ ಉಪಪ್ರಾಚಾರ್ಯೆ ಪುಷ್ಪಾಂಜಲಿ ತಿಳಿಸಿದರು.

    ಪಟ್ಟಣದ ಕೆಎಲ್‌ಕೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಶಾಲಾ ಕಟ್ಟಡ ದಾನಿಗಳ ಕುಟುಂಬದವರು ನೀಡಿದ ಶೈಕ್ಷಣಿಕ ಪರಿಕರಗಳನ್ನು ಸ್ವೀಕರಿಸಿ ಮಾತನಾಡಿದರು.
    ಸರ್ಕಾರಿ ಶಾಲೆಗೆ ಕಟ್ಟಡದ ಕೊಡುಗೆ ನೀಡುವ ಜತೆ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಲಕಾಲಕ್ಕೆ ಸಹಕಾರ ನೀಡುವ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಕುಟುಂಬದ ಹಿರಿಯರು ನಿರ್ವಹಿಸಿಕೊಂಡು ಬಂದಿದ್ದಾರೆ. ಮಕ್ಕಳ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕ್ರೀಡಾಂಗಣ ಹಾಗೂ ಸಭಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಪ್ರೋತ್ಸಾಹಧನ ನೀಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘ ಸಹ ಶಾಲೆಗೆ ಅತ್ಯಮೂಲ್ಯ ಕೊಡುಗೆ ನೀಡುತ್ತಿದೆ. ಮಕ್ಕಳು ಆಸಕ್ತಿದಾಯಕ ಕಲಿಕೆ ಮತ್ತು ಸೇವಾಗುಣ ಬೆಳೆಸಿಕೊಂಡು ಸಾಧನೆಗೆ ಮುಂದಾಗಿ ಎಂದು ಸಲಹೆ ನೀಡಿದರು.
    ಶಿಕ್ಷಕ ಹೊಸೂರು ಪುಟ್ಟರಾಜು ಮಾತನಾಡಿ, ಮಕ್ಕಳು ದಾನಿಗಳ ಸಹಕಾರವನ್ನು ತಮ್ಮ ಸಾಧನೆಗೆ ಸಮರ್ಥವಾಗಿ ಬಳಸಿಕೊಳ್ಳಬೇಕು. ಶಿಕ್ಷಣ ಕೇವಲ ಸಾಕ್ಷರತೆ ಆಗಬಾರದು. ಮಗುವಿನ ವ್ಯಕ್ತಿತ್ವ ನಿರ್ಮಾಣಕ್ಕೆ ಶಕ್ತಿಯಾಗಬೇಕು ಎಂಬ ಶಿಕ್ಷಣ ಪ್ರೇಮಿಗಳ ಅಭಿಲಾಷೆ ಸಾಕಾರಗೊಳ್ಳಬೇಕು ಎಂದರು.
    ದಾನಿ ಕುಟುಂಬದ ನಿರ್ಮಲಾ ಲಿಂಗರಾಜು, ಪದ್ಮಾ ಸುರೇಂದ್ರಬಾಬು, ರತ್ನಾ ಕಾಶಿನಾಥ್ ಅವರನ್ನು ಗೌರವಿಸಲಾಯಿತು. ಶಿಕ್ಷಕ ವಿಶ್ವನಾಥ್, ಸಹ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts