More

    ಬಾಂಗಿಯವರ ಆದರ್ಶ ಅಳವಡಿಸಿಕೊಳ್ಳಿ

    ರಬಕವಿ/ಬನಹಟ್ಟಿ: ದಿ. ಪಿ. ಎಂ. ಬಾಂಗಿಯವರು ಕೈಮಗ್ಗ ನೇಕಾರ ಜೀವಾಳವಾಗಿದ್ದರು. ಅವರು ನೇಕಾರರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ನಿವೃತ್ತ ಮುಖ್ಯಶಿಕ್ಷಕ ಬಿ. ಎಂ. ಪಾಟೀಲ ಹೇಳಿದರು.

    ನೇಕಾರರ ಧೀಮಂತ ನಾಯಕ ದಿ. ಪಿ.ಎಂ. ಬಾಂಗಿ ಅವರ 40ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಬನಹಟ್ಟಿಯ ಕೆಎಚ್‌ಡಿಸಿ ಕಾಲನಿಯಲ್ಲಿರುವ ಪುತ್ಥಳಿಗೆ ಭಾನುವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ನೇಕಾರರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಬಾಂಗಿ ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು. ನೇಕಾರ ಮುಖಂಡ ಸದಾಶಿವ ಗೋಂದಕರ ಮಾತನಾಡಿ, ಪಿ. ಎಂ. ಬಾಂಗಿಯವರು ನೇಕಾರ ಹಾಗೂ ರೈತರ ಕಾಳಜಿಯುಳ್ಳವರಾಗಿದ್ದರು.

    ತಾವು ರಾಜಕಾರಣಿಯಾದರೂ ಅವರ ತುಡಿತ ಮಾತ್ರ ನೇಕಾರರು ಮತ್ತು ರೈತರ ಪರವಾಗಿತ್ತು. ಅವರ ಪ್ರಯತ್ನದಿಂದ ಬನಹಟ್ಟಿ ಕೆರೆ ನಿರ್ಮಾಣವಾಗಿದ್ದು, ಇಂದು ಸಾವಿರಾರು ರೈತರಿಗೆ ವರದಾನವಾಗಿದೆ ಎಂದರು.

    ಡಾ. ಟಿ. ಪಿ. ಬಾಂಗಿ, ನಂದಿನಿ ಬಾಂಗಿ ಮಾತನಾಡಿದರು.

    ನೇಕಾರ ಮುಖಂಡರಾದ ಮಹಾದೇವ ಹುನ್ನೂರ, ಸದಾಶಿವ ಗೋಂದಕರ, ಸದಾಶಿವ ಭಸ್ಮೆ, ಮಹಾದೇವ ಗೋಂದಕರ, ಅಕ್ಬರ ಜಮಾದಾರ, ಶಂಕರ ಕೊಣ್ಣೂರ, ಮಹೇಂದ್ರ ಕವಿಶೆಟ್ಟಿ, ಹಜರತ್ ಮುಲ್ಲಾ, ಸಂತೋಷ ಪೂಜಾರಿ, ರಮಜಾನ್ ಖಲೀಫ್, ಸುರೇಶ ಬಾಗಲಕೋಟೆ, ಇಮಾಮಸಾಬ ಮುಲ್ಲಾ, ಶಿವಾನಂದ ಬುದ್ನಿ, ಬನಹಟ್ಟಿ ಕೆಎಚ್‌ಡಿಸಿ ಅಧಿಕಾರಿ ಎಸ್.ವಿ. ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts