More

    ಅದಿತಿ ಅಶೋಕ್​ ಇತಿಹಾಸ ರಚಿಸಿದ್ದಾರೆ: ಜೀವ್​ ಮಿಲ್ಕಾ ಸಿಂಗ್​

    ನವದೆಹಲಿ : ಟೋಕಿಯೋದಲ್ಲಿ ಪದಕ ಗೆಲ್ಲದಿದ್ದರೂ 200ಕ್ಕೂ ಹೆಚ್ಚು ದೇಶಗಳ ಆಟಗಾರರ ವಿರುದ್ಧ ಸೆಣೆಸಿ, ನಾಲ್ಕನೇ ಸ್ಥಾನ ಗಳಿಸಿರುವ ಭಾರತದ ಗಾಲ್ಫರ್​ ಅದಿತಿ ಅಶೋಕ್ ಎಲ್ಲರ ಗಮನ ಸೆಳೆದಿದ್ದಾರೆ. ಒಲಿಂಪಿಕ್ಸ್​ನಲ್ಲಿ ಭಾರತದ ಪರವಾಗಿ ಗಾಲ್ಫ್​ನಲ್ಲಿ ಇದುವರೆಗಿನ ಅತ್ಯುತ್ತಮ ಆಟಗಾರಿಕೆ ಪ್ರದರ್ಶಿಸಿರುವ ಅದಿತಿಗೆ, ದಿವಂಗತ ಮಿಲ್ಕಾ ಸಿಂಗ್​ರ ಪುತ್ರ ಹಾಗೂ ದೇಶದ ಹಿರಿಯ ಗಾಲ್ಫರ್ ಆಗಿರುವ ಜೀವ್​ ಮಿಲ್ಕಾ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

    “ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಅದಿತಿ ಅಶೋಕ್​ ಇತಿಹಾಸ ರಚಿಸಿದ್ದಾರೆ. ಗಾಲ್ಫ್​ಅನ್ನು ಒಲಿಂಪಿಕ್ಸ್​ನಲ್ಲಿ 2016 ರಲ್ಲಿ ಸೇರಿಸಲಾಯಿತು. ಅದಿತಿ ಇದೀಗ ಯುವಜನರಿಗೆ ಹೊಸ ಭರವಸೆ ಹುಟ್ಟಿಸಿದ್ದಾರೆ. ಇದು ಭಾರತದಲ್ಲಿ ಗಾಲ್ಫ್​ ಕ್ರೀಡೆಯಾಗಿ ಬೆಳೆಯಲು ಒಳ್ಳೆಯ ಉತ್ತೇಜನ ನೀಡಲಿದೆ” ಎಂದಿದ್ದಾರೆ. “ಅದಿತಿಯ ತಂದೆತಾಯಿ ಅವಳಿಗೆ ಸಹಾಯ ಮಾಡಿದ್ದಾರೆ. ಈಗ ಆಕೆ ಏನೆಲ್ಲ ಮತ್ತು ಎಲ್ಲವೂ ಸಾಧ್ಯ ಎಂದು ತೋರಿಸಿದ್ದಾಳೆ. ಅದಿತಿ ಸಾಧಿಸಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ, ಬೇಸರಪಡುವ ಅಗತ್ಯವಿಲ್ಲ” ಎಂದಿದ್ದಾರೆ.

    ಇದನ್ನೂ ಓದಿ: ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ಗಾಲ್ಫ್​ ಆಟವು ಶ್ರೀಮಂತರು ಸಮಯ ಕಳೆಯಲು ಆಡುವ ಆಟದಂತೆಯೇ ಬಿಂಬಿತವಾಗಿದ್ದು, ಬೇರೆ ಕ್ರೀಡೆಗಳಂತೆ ಈ ಆಟವನ್ನು ಆಯ್ದುಕೊಳ್ಳುವ ಜನರು ಕಡಿಮೆ. ಇದೀಗ ಒಲಿಂಪಿಕ್ಸ್​ನಲ್ಲಿ ಭಾರತದ ಯುವತಿಯು ರೋಮಾಂಚಕ ಪ್ರದರ್ಶನ ನೀಡಿರುವುದು ಕ್ರೀಡಾರ್ಥಿಗಳ ಆಸಕ್ತಿಯನ್ನು ಅದರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    “ನಮ್ಮ ದೇಶದಲ್ಲಿ ಗಾಲ್ಫ್​​ಗಾಗಿ ಹೆಚ್ಚು ಸಾರ್ವಜನಿಕ​ ಡ್ರೈವಿಂಗ್​ ರೇಂಜ್​ಗಳಿರಬೇಕೆಂದು ನಾನು ಸರ್ಕಾರವನ್ನು ಕೇಳುತ್ತಾ ಬಂದಿದ್ದೇನೆ. ಎಲ್ಲರಿಗೂ ಗಾಲ್ಫ್​ ಆಟವನ್ನು ಪ್ರಯತ್ನಿಸುವುದಕ್ಕೆ ಅವಕಾಶ ಸಿಗಬೇಕು. ಸಾರ್ವಜನಿಕರಿಗೆ ತೆರೆಯಲಾಗುವ ರೇಂಜ್​ಗಳಲ್ಲಿ ಮಕ್ಕಳು ಅವರ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಗಾಲ್ಫ್​ ಕೋರ್ಸ್​ಗಳಲ್ಲಿ ಭಾಗವಹಿಸಿ ಅವರ ಆಸಕ್ತಿಯಲ್ಲಿ ತೊಡಗಿಕೊಳ್ಳಬಹುದು” ಎಂದು ಜೀವ್​ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ಒಲಿಂಪಿಕ್ಸ್​: ಕುಸ್ತಿಯಲ್ಲಿ ಕಂಚಿಗಾಗಿ ಕಾದಾಟ, ಜಾವಲಿನ್​ ಥ್ರೋನಲ್ಲಿ ಚಿನ್ನದಾಸೆ

    ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts