More

    ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ಟೋಕಿಯೋ : ಮಹಿಳೆಯರ ಗಾಲ್ಫ್​​ ಸ್ಪರ್ಧೆಯಲ್ಲಿ ಐತಿಹಾಸಿಕ ಆಟಗಾರಿಕೆ ಪ್ರದರ್ಶಿಸುತ್ತಿದ್ದ ಬೆಂಗಳೂರಿನ ಅದಿತಿ ಅಶೋಕ್​ಗೆ ಇಂದು ಒಲಿಂಪಿಕ್ಸ್​​ ಪದಕ ಕೊಂಚದರಲ್ಲೇ ಮಿಸ್ ಆಯಿತು. ಮೊದಲ ಮೂರು ಸುತ್ತುಗಳಲ್ಲಿ ಟಾಪ್​ ತ್ರೀನಲ್ಲಿದ್ದ ಅದಿತಿ, ಇಂದು ಕೊನೆಯ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದರು. ಇದರೊಂದಿಗೆ ಭಾರತಕ್ಕೆ ಗಾಲ್ಫ್​ನಲ್ಲಿ ಮೊದಲ ಪದಕ ಗೆಲ್ಲುವ ಮಹದಾಸೆ ಭಗ್ನವಾಯಿತು.

    ಮಹಿಳೆಯರ ಇಂಡಿವಿಷುಯಲ್​ ಸ್ಟ್ರೋಕ್​ ಪ್ಲೇ ಗಾಲ್ಫ್​ನಲ್ಲಿ ರಿಯೋ ಒಲಿಂಪಿಕ್ಸ್​ನಲ್ಲೂ ಭಾಗವಹಿಸಿದ್ದ ಅದಿತಿ 41ನೇ ಸ್ಥಾನ ಗಳಿಸಿದ್ದರು. ಅದೇ ಈ ಬಾರಿ ಭರವಸೆಯ ಆಟದೊಂದಿಗೆ, ಕಳೆದ ದಿನಗಳಲ್ಲಿ ನಡೆದ ಮೂರು ರೌಂಡ್​ಗಳಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಇಂದು ನಡೆದ ನಾಲ್ಕನೆಯ ಮತ್ತು ಅಂತಿಮ ಸುತ್ತಿನಲ್ಲಿ 4ನೇ ಸ್ಥಾನ ಗಳಿಸಿದ್ದರಿಂದ ಪದಕ ಕೈತಪ್ಪಿದೆ.

    ಇದನ್ನೂ ಓದಿ: ಇನ್ನೊಂದು ಗಂಟೆಯಲ್ಲಿ ಖಾತೆ ಹಂಚಿಕೆ ಪ್ರಕಟ: ಸಿಎಂ ಬೊಮ್ಮಾಯಿ

    ಆದಾಗ್ಯೂ, ಟೋಕಿಯೋ ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿರುವ ಅಥ್ಲೀಟ್​​ಗಳಾದ ಅಭಿನವ ಬಿಂದ್ರ, ದೀಪ ಕರ್ಮಕರ್ ಮತ್ತು ಜಾಯ್​ದೀಪ್​ ಕರ್ಮಕರ್​ರಂತಹ ಚ್ಯಾಂಪಿಯನ್​ಗಳ ಸಾಲಿಗೆ ಅದಿತಿ ಕೂಡ ಸೇರಿದ್ದಾರೆ. ವಿಶಿಷ್ಟ ಕೌಶಲ್ಯ ಮತ್ತು ತಾಳ್ಮೆಯಿಂದ ಆಡಬೇಕಾದ ಗಾಲ್ಫ್​ನಲ್ಲಿ ವಿಶ್ವ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

    ವರ್ಲ್ಡ್​ ನಂ.1 ಮತ್ತು ಎಲ್​ಪಿಜಿಎ ಚ್ಯಾಂಪಿಯನ್​ಶಿಪ್ ವಿಜೇತೆ ಅಮೆರಿಕದ ನೆಲ್ಲಿ ಕಾರ್ಡಗೆ ಚಿನ್ನದ ಸ್ಥಾನ ದೊರಕಿತು. ನ್ಯೂಜಿಲೆಂಡ್​ನ ಲಿಡಿಯ ಕೋ ಮತ್ತು ಜಪಾನ್​ನ ಮೋನೆ ಇನಾಮಿ ಇಬ್ಬರೂ ಎರಡನೇ ಸ್ಥಾನ ಗಳಿಸಿದ್ದರಿಂದ, ಬೆಳ್ಳಿ ಪದಕಕ್ಕಾಗಿ ಮತ್ತೊಂದು ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. (ಏಜೆನ್ಸೀಸ್)

    ನದಿಗಳು ತುಂಬಿದ್ದರೂ ಜಮೀನಿಗೆ ನೀರಿಲ್ಲ! ಕರೆಂಟ್​ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು

    ನರೇಂದ್ರ ಮೋದಿ ಸ್ಟೇಡಿಯಂ ಹೆಸರೂ ಬದಲಾಯಿಸಿ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts