More

    ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ

    ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ಅವರ ರಾಜೀನಾಮೆ ವಿಚಾರ ಬಂದಾಗ ಅವರ ಪರ ನಿಂತಿದ್ದ ಮಠಾಧೀಶರಲ್ಲಿ ಹಲವರು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಹಾರೈಸಿದ್ದಾರೆ. ಇಂದು ನಿಡುಮಾಮಿಡಿ ಮಠಾಧೀಶರಾದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರೆದು, ಬೊಮ್ಮಾಯಿ ಅವರಿಗೆ ಎರಡು ವರ್ಷ ಅಡೆ-ತಡೆ ಇಲ್ಲದೆ, ಉತ್ತಮ ಆಡಳಿತ ನೀಡುವಂತೆ ಆಶೀರ್ವಾದ ಮಾಡಿದ್ದಾರೆ. ಜೊತೆಗೇ, ಹೊಸ ಸರ್ಕಾರ ಮತ್ತು ಬಿಜೆಪಿ ವರಿಷ್ಠರ ಮುಂದೆ ಮೂರು ಮಹತ್ವದ ಬೇಡಿಕೆಗಳನ್ನು ಇಟ್ಟಿದ್ದಾರೆ.

    ಇಂದು ನಗರದ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 10 ಕ್ಕೂ ಹೆಚ್ಚು ಮಠಾಧೀಶರು, ಯಡಿಯೂರಪ್ಪ ಅವರ ಸ್ಥಾನಕ್ಕೆ ಅದೇ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿರುವುದಕ್ಕೆ ಬಿಜೆಪಿ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದರು. ಕಲಬುರ್ಗಿಯ ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಸೊನ್ನೆ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಉಗರಗೋಳ ಮಠದ ಮಹಾಂತ ಸ್ವಾಮೀಜಿ ಮತ್ತು ಇತರ ಮಠಾಧೀಶರು ಉಪಸ್ಥಿತರಿದ್ದರು.

    ಇದನ್ನೂ ಓದಿ: ಮಂಜು ಆಸೆ ಈಡೇರಿಸಿದ ಶಿವರಾಜಕುಮಾರ್

    ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಭಿನ್ನಮತಕ್ಕೆ ಅವಕಾಶ ನೀಡದೆ ಸಚಿವ ಸಂಪುಟದಲ್ಲಿ ಇನ್ನೂ ಖಾಲಿ ಇರುವ ಮೂರು ಸ್ಥಾನಗಳಿಗೆ ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯ ನೀಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ತೋರುತ್ತಿರುವ ತಾರತಮ್ಯ ಸರಿಪಡಿಸಬೇಕು. ರಾಜ್ಯದ ಇಲಾಖೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಬೇಡಿಕೆಯಿಟ್ಟರು.

    ಯಡಿಯೂರಪ್ಪ ಅವರ ಪರ ನಿಂತ ಮಠಾಧೀಶರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರ್ತಿವೆ. ನಾಡಿನ ಪ್ರಗತಿ ದೃಷ್ಟಿಯಿಂದ ಮಠಾಧೀಶರು ಅವರ ಬೆಂಬಲಕ್ಕೆ ನಿಂತಿದ್ದು. ನಾವು ರಾಜಕೀಯ ಮಾಡಿಲ್ಲ. ನಾವು ಕೇವಲ ನಮ್ಮ ಸಮುದಾಯದವರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದೆವು. ಇದನ್ನೇ ಮಾಧ್ಯಮಗಳು ಮಠದ ರಾಜಕೀಯ ಎಂದು ಬಿಂಬಿಸಿದವು ಎಂದು ನಿಡುಮಾಮಿಡಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

    ಒಲಿಂಪಿಕ್ಸ್​: ಕುಸ್ತಿಯಲ್ಲಿ ಕಂಚಿಗಾಗಿ ಕಾದಾಟ, ಜಾವಲಿನ್​ ಥ್ರೋನಲ್ಲಿ ಚಿನ್ನದಾಸೆ

    ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts