More

    VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!

    ಬೆಂಗಳೂರು: ಕೆಎಸ್​ಆರ್​ಪಿ ಹೆಡ್​ ಕಾನ್ಸ್​ಟೇಬಲ್ ಆತ್ಮಹತ್ಯೆಯಿಂದ ಪೊಲೀಸ್​ ಇಲಾಖೆಯಲ್ಲಿ ಭಯದ ವಾತಾವರಣ ಉಂಟಾಗಿದ್ದು, ಕರೊನಾ ವಿರುದ್ಧ ಹೋರಾಟದಲ್ಲಿ ಎದೆಗುಂದದೆ ಹೋರಾಟ ನಡೆಸುತ್ತಿರುವ ವಾರಿಯರ್ಸ್​ಗೆ ಎಡಿಜಿಪಿ ಅಲೋಕ್​ ಕುಮಾರ್​ ಧೈರ್ಯ ತುಂಬಿದ್ದಾರೆ.

    ಸದ್ಯ ಕರೊನಾದಿಂದ ಕೆಎಸ್​ಆರ್​ಪಿ ಪೊಲೀಸರು ಚಿಂತಾಕ್ರಾಂತರಾಗಿದ್ದಾರೆ. ಹೀಗಾಗಿ ಕ್ವಾರೆಂಟೈನ್​ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ ಖಡಕ್ ಅಧಿಕಾರಿ ಅಲೋಕ್​ ಕುಮಾರ್​, ಕರೊನಾ ಬಂದರೆ ಧೈರ್ಯವಾಗಿ ಎದುರಿಸುವಂತೆ ಆತ್ಮಬಲ ತುಂಬಿದರು. ಇದನ್ನೂ ಓದಿ: ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಚಾಟ್​ ಸಾಕ್ಷಿ

    ಮಾನಸಿಕವಾಗಿ ಕುಗ್ಗಬೇಡಿ, ರೋಗ ಲಕ್ಷಣಗಳು ಕಾಣಿಸಿದರೆ ಕಡೆಗಣನೆ ಕೂಡ ಮಾಡಬೇಡಿ. ಬಿಡುವಿನ ಸಮಯದಲ್ಲಿ ವಾಕಿಂಗ್, ಯೋಗ ಹಾಗೂ ಪ್ರಾಣಾಯಾಮ ಮಾಡಿ ಎಂದು ಹೇಳಿದರು. ವಿಶೇಷವಾಗಿ ಸ್ವತಃ ಅವರೇ ಪ್ರಾಣಾಯಾಮ ಹೇಗೆ ಮಾಡಬೇಕು ಎಂದು ತೋರಿಸಿದರು.

    ನೂರಾರು ಕ್ವಾರಂಟೈನ್​ ಸಿಬ್ಬಂದಿಗೆ ಯೂನಿಫಾರ್ಮ್​ನಲ್ಲೇ ಯೋಗಾಭ್ಯಾಸ ಕಲಿಸಿದ ಅಲೋಕ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್​ಟೇಬಲ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸರ್ಕಾರದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!

    ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!

    ಬೆಂಗಳೂರು: ಕೆಎಸ್​ಆರ್​ಪಿ ಹೆಡ್​ ಕಾನ್ಸ್​ಟೇಬಲ್ ಆತ್ಮಹತ್ಯೆಯಿಂದ ಪೊಲೀಸ್​ ಇಲಾಖೆಯಲ್ಲಿ ಭಯದ ವಾತಾವರಣ ಉಂಟಾಗಿದ್ದು, ಕರೊನಾ ವಿರುದ್ಧ ಹೋರಾಟದಲ್ಲಿ ಎದೆಗುಂದದೆ ಹೋರಾಟ ನಡೆಸುತ್ತಿರುವ ವಾರಿಯರ್ಸ್​ಗೆ ಎಡಿಜಿಪಿ ಅಲೋಕ್​ ಕುಮಾರ್​ ಧೈರ್ಯ ತುಂಬಿದ್ದಾರೆ. #ADGPAlokKumar #IPSAlokKumar #Coronavirus #Covid19 #Pandemic

    Posted by Vijayavani on Tuesday, June 23, 2020

    4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts