More

    ತುಳು ಲಿಪಿ ಯುನಿಕೋಡ್‌ಗೆ ಸೇರಿಸಲು, ಸಚಿವ ಲಿಂಬಾವಳಿ ಅನುಮೋದನೆ

    ಮಂಗಳೂರು: ರಾಜ್ಯ ತುಳು ಸಾಹಿತ್ಯ ಅಕಾಡೆಮಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅನುಮೋದಿಸಿದ್ದಾರೆ.

    ಈ ಕುರಿತು ಸೋಮವಾರ ಇಲಾಖೆಯು ತುಳು ಅಕಾಡೆಮಿಗೆ ಪತ್ರ ಬರೆದಿದೆ. ಈ ಬಗ್ಗೆ ಭಾರತೀಯ ಭಾಷಾ ಸಂಸ್ಥಾನವೂ ತಜ್ಞ ಸಮಿತಿಯನ್ನು ರಚಿಸಿ ಯುನಿಕೋಡ್‌ಗೆ ಸೇರಿಸುವ ಬಗ್ಗೆ ಶಿಫಾರಸು ಮಾಡಿದ್ದು, ತುಳು ಲಿಪಿಯು ಯುನಿಕೋಡ್‌ನಲ್ಲಿ ಮೂಡುವ ಪ್ರಕ್ರಿಯೆ ಸುಗಮವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿ ಬೇಳೂರು ಸುದರ್ಶನ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬೆಂಬಲವಾಗಿ ನಿಂತ ಸಚಿವರು, ಸಚಿವಾಲಯದ ಅಧಿಕಾರಿಗಳು ಮತ್ತು ಅಕಾಡೆಮಿಗೆ ವಂದನೆಗಳು. ತುಳು ಲಿಪಿಯನ್ನು ಯುನಿಕೋಡ್ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಅಭಿನಂದನೆಗಳು ಎಂದು ಬೇಳೂರು ಸುದರ್ಶನ ಉಲ್ಲೇಖಿಸಿದ್ದಾರೆ.

    ಭವ್ಯ ಪರಂಪರೆ, ಇತಿಹಾಸ ಹೊಂದಿದ, ಕನ್ನಡ ನಾಡಿನಲ್ಲಿ ಸುದೀರ್ಘ ಮತ್ತು ಸುಶಾಸನದ ಆಡಳಿತ ನೀಡಿದ ತುಳು ಸಂಸ್ಕೃತಿಯು ಯುನಿಕೋಡ್ ಲಿಪಿಯ ಮೂಲಕ ಇನ್ನಷ್ಟು ಜನಪ್ರಿಯವಾಗಲಿ, ಡಿಜಿಟಲ್ ವೇದಿಕೆಗಳಲ್ಲಿ ತುಳು ಲಿಪಿ ಹೆಚ್ಚು ಕಾಣಲಿ ಎಂದು ಹಾರೈಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts