More

    ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ

    ನಿಪ್ಪಾಣಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಕೇಂದ್ರ ಸರ್ಕಾರ ಪುರಸ್ಕೃತ ಅಮತ 2.0 ಯೋಜನೆಯಡಿ 30.83 ಕೋಟಿ ರೂ. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ 50 ವರ್ಷ ದೃಷ್ಟಿಯಲ್ಲಿಟ್ಟುಕೊಂಡು ರೂಪುರೇಷೆ ಸಿದ್ಧಪಡಿಸಿ ಕಾಮಗಾರಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು ಎಂದರು.

    ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ. 50, ರಾಜ್ಯ ಸರ್ಕಾರದಿಂದ ಶೇ. 40 ಹಾಗೂ ಸ್ಥಳೀಯ ನಗರಸಭೆಯಿಂದ ಶೇ. 10 ಅನುದಾನ ದೊರೆಯಲಿದೆ. ವೇದಗಂಗಾ ನದಿ ದಡದಲ್ಲಿ 12 ಮೀ. ಸುತ್ತಳತೆಯ ಆರ್‌ಸಿಸಿ ಜಾಕ್ವೆಲ್ ಕಂ ಪಂಪ್‌ಹೌಸ್ ನಿರ್ಮಾಣ, 8/8 ಮೀಟರ್ ಟಿಸಿ ಪ್ಲಾಟ್‌ಾರ್ಮ್, 5 ಮೀ. ಅಗಲ 30 ಮೀ. ಉದ್ದ ಕಾಲುಸೇತುವೆ ನಿರ್ಮಿಸಲಾಗುವುದು.

    ಈ ಜಾಕ್ವೆಲ್‌ನಿಂದ ಜವಾಹರ ಜಲಾಶಯದವರೆಗೆ 7.7 ಕಿ.ಮೀ. ಉದ್ದ ಪೈಪ್‌ಲೈನ್ ನಿರ್ಮಾಣ ಮತ್ತು ಅಗೆದ ರಸ್ತೆ ಮರುನಿರ್ಮಾಣ ಕಾಮಗಾರಿ ಒಳಗೊಂಡಿದೆ. ಜತೆಗೆ ವಲಯ-1ರಲ್ಲಿ 10 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಒಎಚ್‌ಟಿ) ಮತ್ತು ವಲಯ-2ರಲ್ಲಿ 5 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಒಎಚ್‌ಟಿ)ಗಳನ್ನು ನಿರ್ಮಿಸಲಾಗುವುದು. ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕೊರತೆಯಾಗದಂತೆ ಅನುಷ್ಠಾನಗೊಳಿಸಲಾಗುವುದು ಎಂದರು.

    ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಗುಂಡೇಶಾ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನೀತಾ ಬಾಗಡೆ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts