ಭಾರತದ ಅತಿ ಶ್ರೀಮಂತರಲ್ಲಿ ಅಗ್ರಗಣ್ಯರ ಪಟ್ಟಿಯಲ್ಲಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು 683 ದಶಲಕ್ಷ ಡಾಲರ್ ತಗ್ಗುವ ಮೂಲಕ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 3ರಿಂದ 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಮೂರನೇ ಸ್ಥಾನವನ್ನು ಅಮೆಜಾನ್ನ ಸಂಸ್ಥಾಪಕ ಜೆಫ್ ಬೆಜೋಸ್ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸಂಪತ್ತು 2.38 ಶತಕೋಟಿ ಡಾಲರ್ ಕುಗ್ಗುವ ಮೂಲಕ 12ನೇ ಸ್ಥಾನಕ್ಕೆ ಪಲ್ಲಟ ಆಗಿದೆ ಎಂದು ಬ್ಲೂಮ್ಗ್ ಬಿಲಿಯನೇರ್ ಸ್ಯೂಚಂಕ ತಿಳಿಸಿದೆ.
ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಲೂಯಿಸ್ ವಿಟಾನ್ ಕಂಪನಿಯ ಸ್ಥಾಪಕ ಬರ್ನಾಡ್ ಅರ್ನಾಲ್ಟ್ ಮತ್ತು ಟೆಸ್ಲಾ ಕಂಪನಿ ಒಡೆಯ ಎಲನ್ ಮಸ್ಕ್ ಇದ್ದಾರೆ. ಬ್ಲೂಮ್ಗ್ ವಿಶ್ವದ 500 ಅತಿ ಶ್ರೀಮಂತರ ಪಟ್ಟಿಯನ್ನು 2012ರಿಂದ ಪ್ರಕಟಿಸುತ್ತಿದೆ. ಇದರಲ್ಲಿ ಮೊದಲ 20 ಮಂದಿಯನ್ನು ಬ್ಲೂಮ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಪರಿಗಣಿಸಲಾಗುತ್ತದೆ.
ನಾಲ್ಕು ದಿನಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತ; ಯಾವ ಮಾರ್ಗದಲ್ಲಿ, ಯಾವ್ಯಾವ ದಿನ? ಇಲ್ಲಿದೆ ವಿವರ