More

    ಬಾಲರಾಮನ ಪಾದಕ್ಕೆ ಅಡಕೆ ಹಿಂಗಾರ

    ಬಾಳೆಹೊನ್ನೂರು: ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪಟ್ಟಣದಿಂದ ಕೊಂಡೊಯ್ದಿದ್ದ ಅಡಕೆ ಹಿಂಗಾರ ಅಯೋಧ್ಯೆ ತಲುಪಿದ್ದು, ಬಾಲರಾಮನ ಪಾದ ಹಾಗೂ ಉತ್ಸವ ಮೂರ್ತಿಯ ಅಲಂಕಾರಕ್ಕೆ ಬಳಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.

    ಹೇಳಿಕೆ ನೀಡಿರುವ ಅವರು, 17ರಂದು ಪಟ್ಟಣದಿಂದ ಅಯೋಧ್ಯೆ ಯಾತ್ರೆ ಕೈಗೊಂಡಿದ್ದ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಇಲ್ಲಿಂದ ಅಡಕೆ ಐದು ಹಿಂಗಾರಗಳನ್ನು ರಾಮ ಮಂದಿರಕ್ಕೆ ಕೊಂಡೊಯ್ಯಲು ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಂಡೊಯ್ದಿದ್ದರು. ಸೋಮವಾರ ಅಯೋಧ್ಯೆ ತಲುಪಿದ ವಿಹಿಂಪ ಕಾರ್ಯಕರ್ತರು ರಾಮ ಜನ್ಮಭೂಮಿ ಟ್ರಸ್ಟ್ ಪದಾಧಿಕಾರಿಗಳಿಗೆ ಅಡಕೆ ಹಿಂಗಾರವನ್ನು ಹಸ್ತಾಂತರಿಸಿ ಬಾಲರಾಮನ ಪೂಜೆಗೆ ಬಳಸಿ ಮಲೆನಾಡಿನಲ್ಲಿ ಆವರಿಸಿರುವ ಕೃಷಿ ಸಂಬಂಧಿತ ಎಲ್ಲ ರೋಗ ರುಜಿನಗಳು ದೂರವಾಗಲಿ ಎಂದು ನಿವೇದಿಸಿಕೊಂಡಿದ್ದೆವು ಎಂದು ಹೇಳಿದ್ದಾರೆ.
    ನಮ್ಮ ಕೋರಿಕೆಯಂತೆ ರಾಮ ಜನ್ಮಭೂಮಿ ಟ್ರಸ್ಟ್ ಪದಾಕಾರಿಗಳು ಹಿಂಗಾರವನ್ನು ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಭತ್ತ, ಅಡಕೆ, ಕಾಫಿಯನ್ನು ಸಹ ಪೂಜೆಗೆ ಬಳಸಿಕೊಂಡಿದ್ದು, ಬಾಲರಾಮನ ಪಾದಗಳಿಗೆ ಅಡಕೆ ಹಿಂಗಾರವನ್ನು ಅರ್ಪಿಸಿದ್ದಾರೆ. ರಾಮಲಲ್ಲಾ ಉತ್ಸವದ ಪಲ್ಲಕ್ಕಿಗೂ ಸಹ ಅಡಕೆ ಹಿಂಗಾರವನ್ನು ಅಲಂಕಾರಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts