More

    ಸುರಕ್ಷಿತವಾಗಿರುವುದೇ ಅಕ್ಷಯ ತೃತೀಯ: ಆಚರಣೆಯ ಬಗ್ಗೆ ನಟಿಯರ ಉತ್ತರ

    ಅಕ್ಷಯ ತೃತೀಯ ಎಂದ ತಕ್ಷಣ ಮೊದಲಿಗೆ ನೆನಪಾಗುವುದು ಚಿನ್ನ ಖರೀದಿ. ಆದರೆ, ಕಳೆದ ವರ್ಷದಂತೆ ಈ ವರ್ಷವೂ ಈ ಶುಭ ಗಳಿಗೆಯೆಂದು ಬಂಗಾರ ಖರೀದಿಗೆ ಅನುಮತಿ ಇಲ್ಲ. ಹಾಗಂತ ಆಚರಣೆ ನಿಲ್ಲುತ್ತದೆಯೇ? ಇಲ್ಲ. ಸರಳವಾಗಿಯಾದರೂ ಎಲ್ಲರ ಮನೆಯಲ್ಲಿಯೇ ಲಕ್ಷ್ಮೀ ಪೂಜೆ ನಡೆಯುತ್ತದೆ. ಕರೊನಾ ಕಾಲದಲ್ಲಿ ಆ ಆಚರಣೆಯ ಬಗ್ಗೆ ನಟಿಯರ ಉತ್ತರ ಇಲ್ಲಿದೆ..

    ಚಿನ್ನದ ಬಳೆಗಳ ಜತೆ ಈ ವರ್ಷದ ಹಬ್ಬ

    ಅಕ್ಷಯ ತೃತೀಯ ಎಂದರೆ ಮೊದಲು ನೆನಪಾಗುವುದು ಚಿನ್ನ ಖರೀದಿ ಮತ್ತು ಲಕ್ಷ್ಮೀ ಪೂಜೆ. ನಮ್ಮ ಮನೆಯಲ್ಲಿ ಈ ಸಂಪ್ರದಾಯ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ನಾನಂತೂ ಚಿನ್ನದ ಪ್ರಿಯೆ. ಲಾಕ್​ಡೌನ್ ನಡುವೆಯೂ ಈ ಸಲ ಅಕ್ಷಯ ತೃತೀಯ ಆಚರಣೆ ಮಾಡುತ್ತಿದ್ದೇವೆ. ಕಾಕತಾಳೀಯ ಎಂಬಂತೆ ನಮ್ಮ ಮನೆಗೆ ಚಿನ್ನದ ಬಳೆ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆಯೇ ಖರೀದಿ ಮಾಡಲಾಗಿತ್ತು. ಇದೀಗ ಅದೇ ಬಳೆಯನ್ನಿಟ್ಟು ಪೂಜೆ ಮಾಡಲಿದ್ದೇವೆ. ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವುದು, ಅಂದೇ ಮನೆಗೆ ಚಿನ್ನ ತಂದರೆ ಅದು ಶ್ರೇಷ್ಠ ಎಂಬ ನಂಬಿಕೆ ಇದೆ. ಹಾಗೆ ತಂದ ಒಡವೆಯನ್ನು ಲಕ್ಷ್ಮೀ ದೇವಿಯ ಮುಂದಿಟ್ಟು ಪೂಜೆ ಮಾಡುವುದು ಮೊದಲಿಂದಲೂ ನಮ್ಮ ಮನೆಯಲ್ಲಿ ಆಚರಣೆಯಲ್ಲಿದೆ. ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಎಲ್ಲವೂ ಕೊಂಚ ಸರಳವಾಗಿರಲಿದೆ.

    | ಕಾವ್ಯಾ ಗೌಡ ನಟಿ

    ದವಸ ಧಾನ್ಯದ ಪೂಜೆಯೇ ಅಕ್ಷಯ

    ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿಗೆ ಪ್ರಶಸ್ತವಾದ ದಿನ ಎಂಬ ನಂಬಿಕೆ ಇದೆ. ನಮ್ಮ ಮನೆಯಲ್ಲಿಯೂ ಅದರ ಆಚರಣೆ ಇದೆ. ಆದರೆ, ಕಳೆದ 2 ವರ್ಷಗಳಿಂದ ಅದನ್ನು ಆಚರಿಸುತ್ತಿಲ್ಲ. ಅದಕ್ಕೆ ಕಾರಣ ಕರೊನಾ! ಕಳೆದ ವರ್ಷವೇ ಅಕ್ಷಯ ತೃತೀಯ ಸಮಯದಲ್ಲಿಯೇ ಕರೊನಾ ಹಾವಳಿ ಇಟ್ಟಿತ್ತು. ಅದು ಈ ವರ್ಷವೂ ಮುಂದುವರಿದಿದೆ. ಹಾಗಾಗಿ ಅದರ ಬದಲಿಗೆ ಅಕ್ಕಿ, ಬೇಳೆ, ಬೆಲ್ಲ ಖರೀದಿಸಿ ಅದನ್ನೇ ದೇವರಿಗೆ ಅರ್ಪಿಸಿ ಪೂಜೆ ಮಾಡುತ್ತೇವೆ. ಕಳೆದ ವರ್ಷವೂ ಹಾಗೇ ಆಚರಣೆ ಮಾಡಿದ್ದೇವೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿಗಳು ತೆರೆದಿಲ್ಲ. ದೇಶದ ಸ್ಥಿತಿಯೇ ಗಂಭೀರವಾಗಿದೆ. ಸರಳವಾಗಿ ಲಕ್ಷ್ಮೀ ಪೂಜೆ ಮಾಡುತ್ತೇವೆ. ಅದೇ ಈ ವರ್ಷದ ನಮ್ಮ ಪಾಲಿನ ಅಕ್ಷಯ ತೃತೀಯ. ಸುರಕ್ಷಿತವಾಗಿರುವುದೇ ಅಕ್ಷಯ.

    | ಖುಷಿ ರವಿ ನಟಿ

    ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕಾ?; ಪೊಲೀಸ್ ಕಮಿಷನರ್ ಕಮಲ್ ಪಂತ್ ಏನು ಹೇಳಿದ್ದಾರೆ ನೋಡಿ..

    ರಸ್ತೆಬದಿಯ ಕೆರೆಗೆ ಹಾರಿದ ಕಾರು; ಚಾಲಕ ಪವಾಡಸದೃಶವಾಗಿ ಅಪಾಯದಿಂದ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts