More

    ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿದ ‘ಉಮಾಶ್ರೀ’! ಕಿರುತೆರೆಗೆ ಮರಳಿದ ನಟಿ, ಮಾಜಿ ಸಚಿವೆ?

    ಬೆಂಗಳೂರು: ರಾಜಕೀಯದಿಂದ ಕೊಂಚ ವಿರಾಮ ಪಡೆದ ನಟಿ, ಮಾಜಿ ಸಚಿವೆ ಉಮಾಶ್ರೀ ಇತ್ತೀಚೆಗೆಯೇ ರತ್ನನ್ ಪ್ರಪಂಚಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರ ತಾಯಿ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಈ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುತ್ತಿರುವಾಗಲೇ, ನಟಿ ಮತ್ತೆ ಕಿರುತೆರೆಗೆ ಸಹ ಮರಳಲು ರೆಡಿಯಾಗಿದ್ದಾರೆ. ಹೌದು, ಉಮಾಶ್ರೀ ಅವರು ನಟಿಸುತ್ತಿರುವ ಹೊಸ ಸೀರಿಯಲ್​ನ ಹೆಸರು ಪುಟ್ಟಕ್ಕನ ಮಕ್ಕಳು‘. ಈ ಧಾರಾವಾಹಿನಿಯಲ್ಲೂ ಉಮಾಶ್ರೀ ಮೂರು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಪುಟ್ಟಕ್ಕನ ಮಕ್ಕಳುಸೀರಿಯಲ್ ಕರ್ನಾಟಕದ ನಂ.1 ಮನರಂಜನೆ ಚಾನೆಲ್ ಆದ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

    ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿದ 'ಉಮಾಶ್ರೀ'! ಕಿರುತೆರೆಗೆ ಮರಳಿದ ನಟಿ, ಮಾಜಿ ಸಚಿವೆ? ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿದ 'ಉಮಾಶ್ರೀ'! ಕಿರುತೆರೆಗೆ ಮರಳಿದ ನಟಿ, ಮಾಜಿ ಸಚಿವೆ?

    ಈ ಸೀರಿಯಲ್ ಡಿ.13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7:30 ಕ್ಕೆ ಪ್ರಸಾರವಾಗಲಿದೆ. ಒಂದು ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆಯಿದಾಗಿದ್ದು, ಟೈಟಲ್​ ನಲ್ಲಿರುವ ಪುಟ್ಟಕ್ಕ‘ ಪಾತ್ರದಲ್ಲಿ ನಟಿ ಉಮಾಶ್ರೀ ಸಣ್ಣ ಮೆಸ್ ನಡೆಸುತ್ತಾ ತನ್ನ ಮೂರು ಹೆಣ್ಣು ಮಕ್ಕಳನ್ನು ಸಾಕುತ್ತಾ ಜೊತೆಗೆ ಓದಿಸುತ್ತಾರೆ. ಇವರ ಬದುಕಿಗೆ ಬಡ್ಡಿ ಬಂಗಾರಮ್ಮಎಂಬ ಪಾತ್ರ ಬಂದಾಗ ಆಗುವ ಬದಲಾವಣೆಗಳೆ ಈ ಸೀರಿಯಲ್​ನ ಹೈಲೈಟ್ ಆಗಿರಲಿದೆ. ಅಂದಹಾಗೆ, ‘ಜೊತೆ ಜೊತೆಯಲಿಸೀರಿಯಲ್ ಖ್ಯಾತಿಯ ಆರೂರು ಜಗದೀಶ್ ಈ ಸೀರಿಯಲ್ ನಿರ್ದೇಶಕರಾಗಿದ್ದಾರೆ. ಸದ್ಯ, ‘ಪುಟ್ಟಕ್ಕನ ಮಕ್ಕಳುಪೋಸ್ಟರ್ ಒಂದರಲ್ಲಿ ಉಮಾಶ್ರೀ ತಮ್ಮ ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿರುವುದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

    ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹೊಸ ಅಭಿಯಾನ! 100 ದಿನಗಳ ಮುಂಚೆಯೇ ಪೋಸ್ಟರ್!

    ಒಂದೇ ವೇದಿಕೆಯಲ್ಲಿ 4 ಸೂಪರ್ ಸ್ಟಾರ್​ಗಳು ಸೇರಲಿದ್ದಾರೆ! ಎಲ್ಲಿ? ಯಾವುದು ಆ ಸಿನಿಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts