More

    ಮುಂಬೈನಲ್ಲಿ ಸಿಗದ ‘RRR’ ಟಿಕೆಟ್ ಅನ್ನು ಅರಸಿ ಬೆಂಗಳೂರಿಗೆ ಬಂದ ನಟಿ ಶ್ರಿಯಾ ಶರಣ್!

    ಬೆಂಗಳೂರು: ತಾವೇ ನಟಿಸಿದ ಸಿನಿಮಾಗೆ ಓಮ್ಮೊಮ್ಮೆ ಆ ನಟರಿಗೆನೇ ಟಿಕೆಟ್ ಸಿಗುವುದಿಲ್ಲ. ಇನ್ನು, ಹಾಗೆ ಟಿಕೆಟ್ ಸಿಗದಿದ್ದಾಗ ಹೇಗೆ ಅನಿಸುತ್ತೆ ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತೆ. ಇದೀಗ, ಈ ಕುತೂಹಲಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ‘RRR’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ ಶ್ರಿಯಾ ಶರಣ್ ಅವರು ಉತ್ತರ ಕೊಟ್ಟಿದ್ದಾರೆ. ಅಂದಹಾಗೆ, ತಾವೇ ನಟಿಸಿರುವ ಸಿನಿಮಾ ನೋಡಲು ತಮಗೆ ಟಿಕೆಟ್ ಸಿಗದಿದ್ದಾಗ ಬೇಸರದ ಜತೆಗೆ ಸಂತೋಷ ಆಗುತ್ತಂತೆ. ಈ ಸಂತೋಷದ ಅನುಭವದ ಬಗ್ಗೆ ನಟಿ ಶ್ರಿಯಾ ಶರನ್ ಅವರು, ”ಸಿನಿಮಾ ಬಿಡುಗಡೆ ಆದಾಗ ನಾನು ಮುಂಬೈನಲ್ಲಿದ್ದೆ. ಅಲ್ಲಿ ಸಿನಿಮಾ ನೋಡಲು ಯತ್ನಿಸಿದೆ. ಆದರೆ, ನನಗೆ ಟಿಕೆಟ್ ದೊರಕಲಿಲ್ಲ. ಅದು ಬಹಳ ಖುಷಿಕೊಟ್ಟಿತು. ಈಗ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲೂ ಚಿತ್ರಮಂದಿರಗಳು ಫುಲ್ ಆಗಿವೆ... ಆದರೆ, ಈ ವಾರಾಂತ್ಯದಲ್ಲಿ ಇಲ್ಲಿಯೇ ಸಿನಿಮಾ ನೋಡುವ ವಿಶ್ವಾಸದಲ್ಲಿದ್ದೇನೆ”, ಎಂದು ತಮ್ಮ ಖುಷಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
    ಹೌದು, ‘RRR’ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನಟಿ ಶ್ರಿಯಾ ಶರಣ್ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಅವರ ಹಾಂಗೆಯೇ ನಟಿ ಶ್ರಿಯಾ ಕೂಡಾ ತೆರೆ ಮೇಲೆ ಕಾಣಿಸಿಕೊಳ್ಳುವುದು ಕೇವಲ ಕೆಲ ಹೊತ್ತೇ ಆದರೂ ಅವರದ್ದು ತಕ್ಕ ಮಟ್ಟಿಗೆ ಪ್ರಮುಖ ಪಾತ್ರವೇ ಎನ್ನಲಾಗಿದೆ. ಬಾಲಿವುಡ್ ನಟ ಅಜಯ್ ದೇವಗನ್ ಅವರ ಪತ್ನಿಯಾಗಿ ಹಾಗೂ ನಟ ರಾಮ್ ಚರಣ್ ತೇಜ್ ಅವರ ತಾಯಿಯ ಪಾತ್ರದಲ್ಲಿ ತೆರೆಯ ಮೇಲೆ ಶ್ರಿಯಾ ಸಿಕ್ಕಾಪಟ್ಟೆ ಮಿಂಚಿದ್ದಾರೆ. ಇನ್ನು, ನಟಿ ಶ್ರಿಯಾ ಶರನ್ ಅವರಿಗೆ ‘RRR’ ಸಿನಿಮಾಗೆ ಸಹಿ ಮಾಡಿದಾಗ ತಮ್ಮ ಪಾತ್ರದ ಬಗ್ಗೆ ಅವರಿಗೆ ಅಷ್ಟಾಗಿ ಗೊತ್ತಿರಲಿಲ್ಲವಂತೆ. ಜತೆಗೆ, ‘RRR’ ಕೇವಲ ರಾಜಮೌಳಿ ಅವರ ಸಿನಿಮಾ ಎಂಬ ಕಾರಣಕ್ಕೆ ಕಥೆ, ಪಾತ್ರವರ್ಗ ಇತರೆ ವಿಚಾರಗಳನ್ನು ಗಮನಿಸಿದೆ ಸಹಿ ಹಾಕಿದ್ದರಂತೆ ಶ್ರಿಯಾ.
    ಈ ಬಗ್ಗೆ ಮಾತಾಡಿದ ನಟಿ, ”ರಾಜಮೌಳಿ ಸಿನಿಮಾಗಳಲ್ಲಿ ಯಾವ ಪಾತ್ರವೂ ಕಳಪೆ ಆಗಿರುವುದಿಲ್ಲ. ಸಣ್ಣ ಪಾತ್ರವಾದರೂ ಕತೆಯ ಮೇಲೆ ಪ್ರಭಾವ ಬೀರುವ ಪಾತ್ರವೇ ಆಗಿರುತ್ತದೆ. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಸಿನಿಮಾ ಒಪ್ಪಿಕೊಂಡೆ. ರಮಾ ರಾಜಮೌಳಿಯವರ ವಸ್ತ್ರವಿನ್ಯಾಸ ಮಹೇಂದರ್ ಅವರ ಮೇಕಪ್ ಎಲ್ಲವೂ ಒಟ್ಟಾಗಿ ಅದ್ಭುತವಾಗಿ ತೆರೆಯ ಮೇಲೆ ಪ್ರೆಸೆಂಟ್ ಅಗುವಂತೆ ಮಾಡಲಾಗಿದೆ. ಕೆಲವು ಸಮಯದಲ್ಲಿ ನಾವು ಕ್ಷಣಿಕವಷ್ಟೆ ಮಾಡಿರುತ್ತೇವೆ ಆದರೆ ಪರದೆಯ ಮೇಲೆ ಅದು ಅದ್ಭುತವಾಗಿ ಕಂಡು ಬರುತ್ತದೆ”, ಎಂದಿದ್ದಾರೆ ಶ್ರಿಯಾ ಶರನ್. ನಟಿ ಶ್ರಿಯಾ ಶರಣ್ ಅವರು ಎಸ್.ಎಸ್.ರಾಜಮೌಳಿ ಅವರ ಜತೆಗೆ ಕೆಲಸ ಮಾಡುತ್ತಿರುವುದು ಇದೇನು ಮೊದಲ ಬಾರಿ ಅಲ್ಲ. ಈ ಹಿಂದೆ ನಟ ಡಾರ್ಲಿಂಗ್ ಪ್ರಬಾಸ್ ಅವರ ಛತ್ರಪತಿ‘ ಸೂಪರ್ ಹಿಟ್ ಸಿನಿಮಾದಲ್ಲಿ ರಾಜಮೌಳಿ ಅವರ ಜೊತೆ ಕೆಲಸ ಮಾಡಿದ್ದಾರೆ.
    ಇದೀಗ, ‘RRR’ ಸಿನಿಮಾ ಮೂಲಕ ಅವರ ಜತೆಗೆ ಎರಡನೇ ಬಾರಿ ಕೆಲಸ ಮಾಡಿದ್ದಾರೆ. ಮುಂದೆಯೂ ಎಸ್.ಎಸ್.ರಾಜಮೌಳಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕರೆ ಕೈಬಿಡುವುದಿಲವಂತೆ ಶ್ರಿಯಾ. ನಟ ಅಜಯ್ ದೇವಗನ್, ಜೂ.ಎನ್​ಟಿಆರ್ ಜತೆಗೂ ನಟಿ ಶ್ರಿಯಾ ಶರಣ್ ಅವರು ಇದು ಎರಡನೇ ಬಾರಿ ಕೆಲಸ ಮಾಡುತ್ತಿರುವುದು. ಇನ್ನು, ನಟಿ ಶ್ರಿಯಾ ಶರಣ್ ಅವರು ಬೆಂಗಳೂರಿಗೆ ಬರಲು ಮತ್ತೊಂದು ಕಾರಣ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ನಟಿಸುತ್ತಿರುವುದು. ನಟ ಉಪೇಂದ್ರ ಅವರ ಕಬ್ಜಸಿನಿಮಾದಲ್ಲಿ ನಟಿ ಶ್ರಿಯಾ ಶರನ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಕಬ್ಜ‘ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

    6000 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ‘ಕೆಜಿಎಫ್ 2’ ಸೆನ್ಸಾರ್ ಪ್ರಮಾಣ ಪತ್ರ ವೈರಲ್!

    ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!

    ನಿಮ್ಮಿಂದ ಲೈಂಗಿಕ ಕಿರುಕುಳ ಅನುಭವಿಸಿದ ಎಲ್ಲರೂ… ಸಲ್ಮಾನ್​ಗೆ ಮಾಜಿ ಪ್ರೇಯಸಿ ವಾರ್ನಿಂಗ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts