More

    ಲಾಕ್​ಡೌನ್​ ಪಾಸು ದುರುಪಯೋಗ: ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ದೂರು ದಾಖಲಿಸುವಂತೆ ಕೋರಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

    ಬೆಂಗಳೂರು :ಲಾಕ್​ಡೌನ್​ ಹಿನ್ನೆಲೆಯಲ್ಲಿ ಪೊಲೀಸರು ನೀಡಿದ ಪಾಸ್​ ದುರ್ಬಳಕೆ ಮಾಡಿ ನಡುರಾತ್ರಿಯಲ್ಲಿ ಜಾಲಿ ರೈಡ್​ ನಡೆಸಿ ಅಪಘಾತಕ್ಕೆ ಕಾರಣವಾದ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಜತೆ ಇದ್ದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ವಕೀಲರೊಬ್ಬರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

    ಮಹಿಳಾ ವಕೀಲರಾದ ಗೀತಾ ಮಿಶ್ರಾ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣ ಗಂಭೀರವಾಗಿದ್ದು ತನಿಖೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಶುಕ್ರವಾರ ಮಧ್ಯ ರಾತ್ರಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಲೋಕೇಶ್​ ಎಂಬುವವರು ಪಾರ್ಟಿ ಮುಗಿಸಿ ತೆರಳುತ್ತಿದ್ದಾಗ ವಸಂತ ನಗರದಲ್ಲಿ ಅಪಘಾತ ಸಂಭವಿಸಿತ್ತು. ಕಾರಿನ ಗಾಜಿನ ಮೇಲೆ ಪೊಲೀಸರು ನೀಡಿದ್ದ ಕೋವಿಡ್​-19 ಪಾಸ್​ ಅಂಟಿಸಲಾಗಿತ್ತು. ನಟಿ ಜತೆ ಇದ್ದ ಲೋಕೇಶ್​ ಎಂಬುವವರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರಿಂದ ಪಾಸ್​ ದೊರೆತಿರಬಹುದು. ಪೊಲೀಸರು ನೀಡಿರುವ ಪಾಸ್​ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

    ಈ ಕಾಯ್ದೆಯಡಿ ದೂರು ದಾಖಲಾದರೆ ತಪ್ಪಿತಸ್ಥರನ್ನು ಎರಡು ವರ್ಷ ಜಾಮೀನು ರಹಿತವಾಗಿ ಜೈಲಿನಲ್ಲಿಡಲು ಅವಕಾಶ ಇದೆ.

    ಏ. 9ರ ಶಬ್​ ಇ ಬರಾತ್​ ಪ್ರಾರ್ಥನೆ ರದ್ದುಗೊಳಿಸಿದ ವಕ್ಫ್​ಬೋರ್ಡ್: ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts