More

    PHOTOS; ಲಾಕ್​ಡೌನ್​ ಮುಗಿದರೂ ಇನ್ನೂ ನಿಂತಿಲ್ಲ ಪ್ರಣೀತಾ ಸೇವೆ; ಹಳ್ಳಿಗರಿಗೆ ದಿನಸಿ ವಿತರಣೆ

    ಬೆಂಗಳೂರು: ಲಾಕ್​ಡೌನ್ ಶುರುವಾಗಿ ತೆರವಾದ ಮೇಲೂ ಅದೆಷ್ಟೋ ಹೀರೋಯಿನ್​ಗಳು ಸುದ್ದಿಯಲ್ಲೇ ಇಲ್ಲ. ಆದರೆ, ಪ್ರಣೀತಾ ಸುಭಾಷ್ ಮಾತ್ರ ಕೊಂಚ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲಾಕ್​ಡೌನ್ ಶುರುವಾದ ಮೊದಲದಿನದಿಂದ ಇಲ್ಲಿಯವರೆಗೂ ರಸ್ತೆಗಿಳಿದು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ ನೀಡುವುದರೊಂದಿಗೆ ಶುರುವಾಗಿದ್ದ ಅವರ ಕೆಲಸ ಇದೀಗ, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದೆ.

    ಇದನ್ನೂ ಓದಿ: ತ್ರಿವಿಕ್ರಮ ಟೀಸರ್ ರಿಲೀಸ್; ಮಾಸ್ ಅವತಾರದಲ್ಲಿ ಜೂ. ರವಿಚಂದ್ರನ್​ ಎಂಟ್ರಿ..

    ರಂಭದಲ್ಲಿ ಪ್ರಣೀತಾ ಫೌಂಡೇಷನ್ ವತಿಯಿಂದ ಸಿನಿಮಾ ಕಾರ್ವಿುಕರಿಗೆ ಒಂದು ಲಕ್ಷ ದೇಣಿಗೆ ನೀಡಿದ್ದ ಪ್ರಣೀತಾ, ಬಳಿಕ ಮತ್ತಷ್ಟು ಹಣ ಸಂಗ್ರಹಣೆಗೆ ಕ್ರೌಡ್ ಫಂಡಿಂಗ್​ಗೆ ಮನವಿ ಮಾಡಿದ್ದರು. ಆಸಕ್ತ ದಾನಿಗಳು ಕೈಲಾದಷ್ಟು ಹಣದ ನೆರವು ನೀಡಿದ್ದರು. ಕೆಲವೇ ದಿನಗಳಲ್ಲಿ 10 ಲಕ್ಷ ಸಂಗ್ರಹ ಮಾಡಿ ಆರ್ಥಿಕ ಸ್ಥಿತಿಗತಿ ವಿಚಾರಿಸಿ, ಅಗತ್ಯತೆಯ ಆಧಾರದ ಮೇಲೆ 500 ಕುಟುಂಬಗಳಿಗೆ ತಲಾ 2000 ಕೊಟ್ಟಿದ್ದರು.

    ಇದನ್ನೂ ಓದಿ: ರೀಲ್ ಧೋನಿ ಮತ್ತು ರಿಯಲ್​ ಧೋನಿಯನ್ನು ಅಭಿಮಾನಿಗಳು ಹೇಗೆಲ್ಲ ನೆನಪಿಸಿಕೊಳ್ಳುತ್ತಿದ್ದಾರೆ ನೋಡಿ…

    ಇದೀಗ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ, ಹಳ್ಳಿಗರಿಗೆ ಉಚಿತ ರೇಷನ್​ ಮತ್ತು ಸ್ಯಾನಿಟರ್ ಪ್ಯಾಡ್​ಗಳನ್ನು ವಿತರಣೆ ಮಾಡಿದ್ದಾರೆ. ದೇವನಹಳ್ಳಿ, ದೊಡ್ಡ ಬಳ್ಳಾಪುರಕ್ಕೆ ಪ್ರಣೀತಾ ಫೌಂಡೇಷನ್​ ಮೂಲಕ ತೆರಳಿ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ಪ್ರಣೀತಾ ಅವರ ಈ ಕಾರ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಅಭಿಮಾನಿಗಳು ಈ ಕೆಲಸಕ್ಕೆ ಸಲಾಂ ಎನ್ನುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts