More

    ನಾಯಕಿಯಾದ ಗೀತಾ ಭಟ್; ಪಾತ್ರಕ್ಕಾಗಿ ತೂಕ ಇಳಿಕೆ..

    ಬೆಂಗಳೂರು: ಕಿರುತೆರೆ ನಟಿ ಗೀತಾ ಭಾರತಿ ಭಟ್​ಗೆ ಹಿರಿತೆರೆ ಹೊಸದಲ್ಲ. ಈಗಾಗಲೇ ಅವರು ‘ಲವ್ ಮಾಕ್ಟೇಲ್’ ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಮೊದಲ ಬಾರಿಗೆ ನಾಯಕಿಯಾಗುವುದಕ್ಕೆ ಹೊರಟಿದ್ದಾರೆ. ಅಷ್ಟೇ ಅಲ್ಲ, ಪಾತ್ರಕ್ಕಾಗಿ ಸಾಕಷ್ಟು ತೂಕವನ್ನೂ ಕಳೆದುಕೊಂಡಿದ್ದಾರೆ.

    ಈ ಹಿಂದೆ ‘ಹೋಮ್ ಸ್ಟೇ’ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಕೊಡಂಕೇರಿ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಾಯಕಿ. ಇನ್ನೂ ಹೆಸರಿಡದ ಚಿತ್ರಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮುಹೂರ್ತವಾಗಿದೆ. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

    ದಕ್ಷಿಣ ಕನ್ನಡದ ಪುಟ್ಟ ಊರೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ನಿರ್ದೇಶಕರ ಪತ್ನಿ ಪಾವನಾ ಈ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ. ಹಳ್ಳಿಹುಡುಗಿಯೊಬ್ಬಳಿಗೆ ಎನ್​ಆರ್​ಐ ಹುಡುಗನ ಜತೆಗೆ ಮದುವೆ ಗೊತ್ತಾಗುತ್ತದೆ. ಆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ತಮಾಷೆಯಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಾಗುತ್ತಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ನಿರ್ವಣವಾಗುತ್ತಿದ್ದು, ಗೀತಾ ಭಾರತಿ ಭಟ್ ಜತೆಗೆ ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ ಮುಂತಾದವರು ನಟಿಸುತ್ತಿದ್ದಾರೆ. ಮುರಳೀಧರ್ ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತವಿರುವ ಈ ಚಿತ್ರವು ದಕ್ಷಿಣ ಕನ್ನಡದ ಸೊಗಡು ಮತ್ತು ಸಂಸ್ಕೃತಿ ಹೊಂದಿದ್ದು, ಸುಳ್ಯ, ಸಂಪಾಜೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

    ನಟ ಧ್ರುವ ಸರ್ಜಾ ಪತ್ನಿಗೆ ಅದ್ಧೂರಿ ಸೀಮಂತ; ಕುಟುಂಬಸ್ಥರು, ಆಪ್ತರು ಭಾಗಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts