More

    ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!

    ಬೆಂಗಳೂರು: ಪ್ರಿಯಕರ ಮಾಡಿದ ವಂಚನೆಯಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್‌ವುಡ್ ನಟಿ ಚಂದನಾ, ಆತನ ಹೆಸರನ್ನು ವಾಟ್ಸ್‌ಆ್ಯಪ್‌ನಲ್ಲಿ ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದಳು!

    ಪ್ರಿಯಕರ ದಿನೇಶ್‌ಗೆ ಐದು ಲಕ್ಷ ರೂ. ಕೊಟ್ಟಿದ್ದ ಚಂದನಾ, ಆತ ಮದುವೆಯಾಗುವುದಿಲ್ಲ ಎಂಬುದು ಖಚಿತವಾದ ಬಳಿಕ ಆ ಹಣವನ್ನು ವಾಪಸ್ ಕೇಳಿದ್ದು, ಆತ ‘ಆಗ ಕೊಡುತ್ತೇನೆ, ಈಗ ಕೊಡುತ್ತೇನೆ’ ಎಂದು ಸತಾಯಿಸಿದ್ದು ಎಲ್ಲವೂ ಅವರಿಬ್ಬರ ವಾಟ್ಸ್‌ಆ್ಯಪ್ ಮೆಸೇಜ್‌ಗಳಿಂದ ದೃಢಪಟ್ಟಿದೆ. ಆ ಸಂಭಾಷಣೆಯ ಪೂರ್ಣ ರೂಪ ಇಲ್ಲಿದೆ.

    ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಹಾಸಿಗೆಗೆ ಕರೆದವನ ನಂಬಿ ದುರಂತ ಅಂತ್ಯ ಕಂಡ ನಟಿ ಚಂದನಾ; ದಿನೇಶ್​ಗೆ ಶುರುವಾಗಿತ್ತು ಅನುಮಾನ !

    (ಒಂದು ಸ್ಕ್ರೀನ್‌ಶಾಟ್)
    ದಿನೇಶ್: ಈಗಾಗಲೇ 25 ಸಾವಿರ ನಿಮ್ಮ ಹತ್ರಾನೆ ಇದೇಪಾ
    ಚಂದನಾ: ಎಷ್ಟು ಬೇಕು
    ದಿನೇಶ್: ಐದು ಲಕ್ಷ ಬೇಕು
    ಚಂದನಾ: ತಮಾಷೆ ಮಾಡ್ತಿದೀರಾ 5 ಲಕ್ಷ
    ದಿನೇಶ್: ಅದರಲ್ಲಿ 3 ಲಕ್ಷ ರಿಟರ್ನ್ ಬರುತ್ತೆ; ನಮ್ ಮದ್ವೆ ಟೈಮ್‌ಗೆ
    ಚಂದನಾ: ಮನೇಲಿ ನಿಮಗೆ ಬೈದ್ರಾ ಹೇಳಿ; 2 ಲಕ್ಷ ಕೊಡ್ತೀನಿ
    ದಿನೇಶ್: ನಿನ್ ವಿಷಯದ ಬಗ್ಗೆ ಏನೂ ಕೇಳಿಲ್ಲ ಇನ್ನೂ
    ಚಂದನಾ: ಸೀರಿಯಸ್‌ಲಿ?
    ದಿನೇಶ್: ಹ್ಞೂ
    ಚಂದನಾ: ಕೇಳಿದರೆ ಏನ್ ಹೇಳ್ತೀರಾ?
    ದಿನೇಶ್: ಏನ್ ಹೇಳ್ತಾರೆ ನೋಡೋಣ ತಡಿ

    (ಇನ್ನೊಂದು ಸ್ಕ್ರೀನ್‌ಶಾಟ್)
    ಚಂದನಾ: ಊರಲ್ಲಿ ನೆಟ್‌ವರ್ಕ್ ಸಿಗ್ತಿದೆಯಾ?
    ದಿನೇಶ್: ಸ್ವಲ್ಪಸ್ವಲ್ಪ
    ಚಂದನಾ: ಏನಾದ್ರೂ ಬೈದ್ರಾ (ಮನೇಲಿ)?
    ದಿನೇಶ್: ನನ್ ಮೇಲೆ ಪ್ರೀತಿ ಇದ್ರೆ… ನಾನು ನಿನಗೆ ಏನೋ ಹೇಳ್ತೀನಿ…
    ಚಂದನಾ: ಹೇಳಿ
    ದಿನೇಶ್: ಪ್ರಾಮಿಸ್ ಮಾಡು
    ಚಂದನಾ: ನಿಮ್ಮುನ್ನ ಬಿಡು ಅಂತ ಅನ್ನೋದು ಬಿಟ್ಟು ಬೇರೆ ಏನು ಬೇಕಾದರೂ ಹೇಳಿ ಮಾಡ್ತೀನಿ. ಪ್ರಾಮಿಸ್.
    ದಿನೇಶ್: ನನ್ನ ಬರ್ತ್‌ಡೇಗೆ ಏನೂ ಗಿಫ್ಟ್ ಬೇಡ. ಅದೇ ಹಣವನ್ನು ನನಗೆ ಕೊಡು ಪ್ಲೀಸ್
    ಚಂದನಾ: ಯಾಕೆ?
    ದಿನೇಶ್: ಬೇಕು.
    ಚಂದನಾ: ಯಾಕೆ ಅಂತ ಹೇಳಿ
    ದಿನೇಶ್: ಮನೆ ರೆಡಿ ಮಾಡಿಸಬೇಕು, ಮತ್ತೆ ಅಣ್ಣನ ಮದುವೆಗೆ ದುಡ್ಡು ಬೇಕು.
    ಚಂದನಾ: ಐಫೋನ್ ಬೇಡ್ವಾ?
    ದಿನೇಶ್: ಐಫೋನ್, ಚೈನ್, ಸೂಟ್ ಏನೂ ಬೇಡ…

    ಇದನ್ನೂ ಓದಿ:VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts