ಕನ್ನಡದ ‘ಹೆಬ್ಬುಲಿ’ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿರುವ ಖ್ಯಾತಿ ನಟಿ ಅಮಲಾ ಪೌಲ್‌ಗೆ ಸಲ್ಲುತ್ತದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2019ರಲ್ಲಿ ಚೆನ್ನೈ ಮೂಲದ ವೈದ್ಯೆ ಡಾ. ಐಶ್ವರ್ಯಾರನ್ನು ವರಿಸಿದ ವಿಜಯ್, ಹೊಸ ಜೀವನ ಪ್ರಾರಂಭಿಸಿದರು. ಈಗ ಈ ಜೋಡಿಗೆ ಮೂರು ವರ್ಷದ ಮುದ್ದಾದ ಗಂಡು ಮಗುವಿದೆ.
ಇದನ್ನೂ ಓದಿ : ಓಂಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರ ‘ಫೀನಿಕ್ಸ್’ನಲ್ಲಿ ಇಬ್ಬರು ನಾಯಕಿಯರು

ಆದರೆ, ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾಗಳಲ್ಲಿ ಬಿಜಿಯಾದ ಅಮಲಾ, ಇದೀಗ ಮತ್ತೊಮ್ಮೆ ಪ್ರೀತಿಯಲ್ಲಿದ್ದಾರೆ. ಗುರುವಾರ (ಅ. 26) 32ನೇ ವಸಂತಕ್ಕೆ ಕಾಲಿಟ್ಟ ಅಮಲಾ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆಗ ಬಾಯ್‌ಫ್ರೆಂಡ್ ಜಗತ್ ದೇಸಾಯಿ ಅಮಲಾ ಮುಂದೆ ಮಂಡಿಯೂರಿ ಕುಳಿತು, ಕೈಯಲ್ಲಿ ಉಂಗುರ ಹಿಡಿದು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಖುಷಿಯಿಂದ ಒಪ್ಪಿರುವ ಅಮಲಾ ಕೈ ಬೆರಳಿಗೆ ಜಗತ್ ದೇಸಾಯಿ ಉಂಗುರ ತೊಡಿಸಿ, ಇಬ್ಬರೂ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಭಯಾನಕ ಲುಕ್ನಲ್ಲಿ ನಟಿ ಹನ್ಸಿಕಾ; ‘ಗಾರ್ಡಿಯನ್’ಗೆ ಫ್ಯಾನ್ಸ್ ಕಾತರ!

ಈ ಪ್ರೇಮ ನಿವೇದನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಅಮಲಾ ಸದ್ಯ ‘ಆಡು ಜೀವಿತಮ್’ ಹಾಗೂ ‘ದ್ವಿಜ’ ಎಂಬ ಎರಡು ಮಲಯಾಳಂ ಚಿತ್ರಗಳಲ್ಲಿ ಬಿಜಿಯಿದ್ದಾರೆ.
-ಏಜೆನ್ಸೀಸ್
