More

    ಜಿಮ್​ನವರ ಪರ ರಾಕಿಂಗ್ ಸ್ಟಾರ್ ಯಶ್​ ಕಸರತ್ತು: ಫಿಟ್​ನೆಸ್​ನವರ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ?

    ಬೆಂಗಳೂರು: ಚಿತ್ರಮಂದಿರಗಳ ಮಾಲೀಕರು, ಸಿನಿಮಾ ಇಂಡಸ್ಟ್ರಿಯವರಿಗೆ ನಿನ್ನೆಯಷ್ಟೇ ಸಿಕ್ಕಿದ್ದ ಸ್ವಲ್ಪ ನಿರಾಳತೆ ಜಿಮ್​ ಮಾಲೀಕರಿಗೂ ಸಿಗುತ್ತಾ ಎಂಬ ಪ್ರಶ್ನೆಯೊಂದು ಈಗ ಮೂಡಿದೆ. ಏಕೆಂದರೆ ಸಿನಿಮಾದವರ ಪರವಾಗಿ ನಿನ್ನೆ ಎದ್ದಿದ್ದಂಥದ್ದೇ ದನಿಯೊಂದು ಈಗ ಜಿಮ್​ ಮಾಲೀಕರ ಪರವಾಗಿಯೂ ಎದ್ದಿದ್ದು, ಗಮನ ಸೆಳೆಯಲಾರಂಭಿಸಿದ್ದಷ್ಟೇ ಅಲ್ಲದೆ, ಉತ್ತಮ ಸ್ಪಂದನೆಯನ್ನೂ ಪಡೆಯಲಾರಂಭಿಸಿದೆ.

    ಚಿತ್ರಮಂದಿರಗಳಲ್ಲಿ ಶೇ. 50 ಆಸನಗಳಿಗಿಂತ ಹೆಚ್ಚಿನ ಜನರಿಗೆ ಅವಕಾಶ ಕೊಡುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿದ್ದರಿಂದ ಚಿತ್ರರಂಗ ಆತಂಕಕ್ಕೆ ಒಳಗಾಗಿತ್ತು. ಅದರಲ್ಲೂ ಈ ವಾರವಷ್ಟೇ ಬಿಡುಗಡೆ ಆಗಿದ್ದ ಯುವರತ್ನ ಸಿನಿಮಾಗೆ ಇದು ದೊಡ್ಡ ಹೊಡೆತ. ಕೂಡಲೇ ನಿರ್ಬಂಧ ಸಡಿಲಿಸಿ ಎಂದು ಚಿತ್ರರಂಗದ ಅನೇಕರು ದನಿ ಎತ್ತಿದ್ದರು. ಖ್ಯಾತ ನಟರಾದ ಶಿವರಾಜ್​ಕುಮಾರ್, ಸುದೀಪ್, ಯಶ್​, ಜಗ್ಗೇಶ್​, ಧನಂಜಯ, ವಸಿಷ್ಠ ಸಿಂಹ, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ, ಸಂತೋಷ್​ ಆನಂದ್​ರಾಮ್​, ನಿರ್ಮಾಪಕರಾದ ವಿಜಯ್ ಕಿರಗಂದೂರು, ಕೆ.ಪಿ. ಶ್ರೀಕಾಂತ್ ಮುಂತಾದವರು ಟ್ವಿಟರ್​ನಲ್ಲಿ ಒಂದು ಅಭಿಯಾನವನ್ನೇ ಹಮ್ಮಿಕೊಂಡಿದ್ದರು. ಇದು ನಿನ್ನೆಯ ಮಟ್ಟಿಗೆ ಇಂಡಿಯಾ ಟ್ರೆಂಡಿಂಗ್ ಕೂಡ ಆಗಿತ್ತು. ನಂತರ ಸಂಜೆ ಬಳಿಕ ಯುವರತ್ನ ಚಿತ್ರದ ನಾಯಕ ಪುನೀತ್ ರಾಜ್​ಕುಮಾರ್, ನಿರ್ದೇಶಕ ಸಂತೋಷ್​ ಆನಂದ್​ರಾಮ್​, ನಿರ್ಮಾಪಕ ವಿಜಯ್​ ಕಿರಗಂದೂರು ಮುಂತಾದವರು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ನಿರ್ಬಂಧ ಸಡಿಲಿಸುವಂತೆ ಕೋರಿದ್ದರು. ಮಾತ್ರವಲ್ಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಚಿತ್ರಮಂದಿರ ಭರ್ತಿಗೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದ ಸರ್ಕಾರ, ಈ ಸಂಬಂಧ ಏ. 7ರ ಮಧ್ಯರಾತ್ರಿ ವರೆಗೆ ವಿನಾಯಿತಿ ನೀಡಿದೆ. ಮಾತ್ರವಲ್ಲ, ಆ ಬಳಿಕ ಹೊಸ ಸೂಚನೆ ಹೊರಡಿಸುವುದಾಗಿ ತಿಳಿಸಿತ್ತು.

    ಇದನ್ನೂ ಓದಿ: ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ? 

    ಹೀಗೆ ನಿನ್ನೆ ‘ಯುವರತ್ನ’ ಪರವಹಿಸಿದ್ದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ರಾಕಿಂಗ್​ ಸ್ಟಾರ್ ಯಶ್​ ಇಂದು ಜಿಮ್​ ಮಾಲೀಕರ ಪರವಾಗಿ ಕಸರತ್ತು ಆರಂಭಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಜಿಮ್​ಗಳನ್ನು ಮುಚ್ಚಬೇಕು ಎಂದು ನಿರ್ಬಂಧ ಹೊರಡಿಸಿದ್ದಕ್ಕೆ ಆಕ್ಷೇಪಿಸಿ ಅವರು ಟ್ವೀಟ್​ ಮಾಡಿದ್ದಾರೆ. ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸುವುದು ಸರಿಯೇ? ಕಟ್ಟುನಿಟ್ಟಿನ ಸಂಚಾರಕ್ರಮ ಸಾಕಲ್ಲವೇ? ಜಿಮ್ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು, ಜಿಮ್​ ಮಾಲೀಕರೂ ಬದುಕಿಕೊಳ್ಳುತ್ತಾರಲ್ಲವೇ? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವೆಗೆ ಪರಿಹಾರ ಗೊತ್ತಿದೆಯಲ್ಲ! ಎಂಬ ತಮ್ಮ ಅನಿಸಿಕೆಯನ್ನು ಅವರು ಟ್ವೀಟ್ ಮಾಡಿದ್ದಾರೆ. #savefitnessindustry ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಯಶ್ ಮಾಡಿರುವ ಈ ಟ್ವೀಟ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವರು ಅದೇ ಹ್ಯಾಷ್​ಟ್ಯಾಗ್​ನೊಂದಿಗೆ ಅವರ ಟ್ವೀಟ್​ ರಿಟ್ವೀಟ್​ ಮಾಡಿಕೊಂಡು ಬೆಂಬಲ ವ್ಯಕ್ತಪಡಿಸಲಾರಂಭಿಸಿದ್ದಾರೆ.

    ಮತ್ತೊಂದೆಡೆ ಜಿಮ್​ಗೆ ವಿಧಿಸಿರು ನಿರ್ಬಂಧ ತೆರವಿಗೆ ಆಗ್ರಹಿಸಿ ಬಿಬಿಎಂಪಿ ಆಯುಕ್ತ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುವ ಸಲುವಾಗಿ ನಾಳೆ ಬೆಳಗ್ಗೆ 10ಕ್ಕೆ ಜಿಮ್​ ಮಾಲೀಕರೆಲ್ಲ ಬೆಂಗಳೂರಿನ ಪುರಭವನದ ಎದುರು ಜಮಾಯಿಸಲು ನಿರ್ಧರಿಸಿ, ಕರೆ ನೀಡಿದ್ದಾರೆ. . #savefitnessindustry #savegym ಹ್ಯಾಷ್​ಟ್ಯಾಗ್ ಮೂಲಕ ಕರೆ ನೀಡಿರುವ ಅವರು, ಕೋವಿಡ್​ಗೆ ಹೆದರುವುದು ಬೇಡ, ಅದರ ವಿರುದ್ಧ ಹೋರಾಡೋಣ ಎಂದಿದ್ದಾರೆ. ಚಿತ್ರಮಂದಿರಗಳ ವಿಷಯದಲ್ಲಿ ಮಣಿದ ಸರ್ಕಾರ ಈಗ ಜಿಮ್ ಮಾಲೀಕರ ಒತ್ತಡಕ್ಕೂ ಮಣಿಯುತ್ತದಾ ಎಂಬ ಕುತೂಹಲ ಈಗ ಮೂಡಿದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಜಿಮ್​ನವರ ಪರ ರಾಕಿಂಗ್ ಸ್ಟಾರ್ ಯಶ್​ ಕಸರತ್ತು: ಫಿಟ್​ನೆಸ್​ನವರ ಒತ್ತಡಕ್ಕೆ ಮಣಿಯುತ್ತಾ ಸರ್ಕಾರ?

    ‘ಯುವರತ್ನ’ ಪರವಹಿಸಿದ ಕಿಚ್ಚ ಸುದೀಪ್​, ಯಶ್​; ಚಿತ್ರಮಂದಿರಗಳಿಗೆ ಶೇ. 50 ಆಸನ ಭರ್ತಿ ನಿರ್ಬಂಧ ವಿರುದ್ಧ ದನಿಗೂಡಿಸುತ್ತಿರುವ ಸ್ಯಾಂಡಲ್​ವುಡ್​

    ಸಿನಿಮಾ ಥಿಯೇಟರ್​ ಹೌಸ್​ಫುಲ್​ಗೆ ಬ್ರೇಕ್​; ಸಿಎಂ ಭೇಟಿ ಮಾಡಿ, ಆದೇಶ ಹಿಂಪಡೆಯಲು ಮನವಿ ಮಾಡಿದ ಪುನೀತ್​

    ಸ್ವಲ್ಪ ಉಸಿರು ಬಿಡುವಂತಾದ ಯುವರತ್ನ; ನಿರ್ಮಾಪಕರು, ಚಿತ್ರಮಂದಿರ ಮಾಲೀಕರಿಗೆ 4 ದಿನ ಕೊಂಚ ನಿರಾಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts