More

    ಬೆಳ್ಳಿ ತೆರೆಯ ಮೇಲೆ ಮತ್ತೆ ವಿಷ್ಣುದಾದ! 150 ಚಿತ್ರಮಂದಿರಗಳಲ್ಲಿ ಕೃಷ್ಣನ ಅವತಾರ…

    ಬೆಂಗಳೂರು: ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ನಟ ವಿಷ್ಣುವರ್ಧನ್ ಅವರು ಬರೋಬ್ಬರಿ 225 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸಿನಿಪ್ರೇಕ್ಷಕರನ್ನು ಸಿಕ್ಕಾಪಟ್ಟೆ ರಂಜಿಸಿದರು. ಇನ್ನು, ಹೆಚ್ಚು ಕಡಿಮೆ 5 ಭಾಷೆಗಳು ಅಂದರೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಿಲ್ಲಿ ಬಣ್ಣ ಹಚ್ಚಿ ಸಖತ್ ಹೆಸರು ಮಾಡಿದರು. ವಿಷ್ಣುದಾದ ಅವರಿಗೆ ಪ್ರಪಂಚದಾದ್ಯಂತ ಇರುವ ಅಭಿಮಾನಿಗಳ ಸಂಖ್ಯೆಯ ಬಗ್ಗೆಯೂ ಹೆಚ್ಚು ಹೇಳಬೇಕಿಲ್ಲ. ಸಂಪತ್ ಕುಮಾರ್ ಆಗಿದ್ದವರು ಸಿನಿರಂಗಕ್ಕೆ ಕಾಲಿಟ್ಟ ಕೂಡಲೇ ಹೊಯ್ಸಳ ದೊರೆ ವಿಷ್ಣುವರ್ಧನನ ಹೆಸರನ್ನಿಟ್ಟುಕೊಂಡು, ಆ ವಿಷ್ಣುವರ್ಧನನಂತೆಯೇ ಸ್ಯಾಂಡಲ್​ವುಡ್ ಹಾಗೂ ಆಗಿನ ಕರುನಾಡ ಹೆಣ್ಣುಮಕ್ಕಳ ಎದೆಯನ್ನು ತಮ್ಮ ಸುಂದರ ನೋಟದಿಂದ ಆಳಿದರು. ಹೌದು, 1972 ರಲ್ಲಿ ರಿಲೀಸ್ ಆದ ವಂಶವೃಕ್ಷಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣುದಾದ ಸಾಹಸ ಸಿಂಹನಾಗಿ ಮಿಂಚಿದರು.
    ಅವರ ಸೌಂದರ್ಯಕ್ಕೆ ಮನಸೋಲದ ಹೆಂಗಸರೇ ಇರಲಿಲ್ಲ. ಅಂತಹ ಮೇರು ನಟನನ್ನು ಇದೀಗ ಮತ್ತೆ ತೆರೆ ಮೇಲೆ ನೋಡಲು ನೀವು ರೆಡಿಯಾಗಿದ್ದೀರಾ….? ಹಾಗಾದರೆ, ಶೀಘ್ರದಲ್ಲೇ ವಿಷ್ಣುದಾದ ಅವರು ನಿಮ್ಮ ಮುಂದೆ ಬರಲಿದ್ದಾರೆ. ಅದು ಹೇಗೆ ಅಂತೀರಾ…? ಹೌದು, ತಮ್ಮ ಸುಂದರ ನೋಟದಿಂದ ಹಾಗೂ ನಟನೆಯಿಂದ 1986 ರಲ್ಲಿ ರಿಲೀಸ್ ಆದ ಕೃಷ್ಣ ನೀ ಬೇಗನೆ ಬಾರೋಸಿನಿಮಾದ ಮೂಲಕ ಬಹುತೇಕ ಎಲ್ಲಾ ಕರುನಾಡ ಸಿನಿಪ್ರೇಕ್ಷಕರ ಗಮನ ಸೆಳೆದರು ನಟ ವಿಷ್ಣುವರ್ಧನ್. ಇದೀಗ, ಅದೇ ಚಿತ್ರ ರೀರಿಲೀಸ್ ಅಗಲಿದ್ದು, ವಿಷ್ಣುವರ್ಧನ್ ಮತ್ತೆ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದ್ದ ಕೃಷ್ಣ ನೀ ಬೇಗನೆ ಬಾರೋಸಿನಿಮಾ ಮರುಬಿಡುಗಡೆಯಾಗುತ್ತಿದೆ. ಈ ಸಿನಿಮಾ 1983 ರಲ್ಲಿ ಹಿಂದಿಯಲ್ಲಿ ತೆರೆಕಂಡಿದ್ದ ಸಿನಿಮಾ ಸೌತೇನ್‘ನ ರಿಮೇಕ್ ಆಗಿದ್ದು, ಭಾರ್ಗವ ಅವರು ಚಿತ್ರವನ್ನು ನಿರ್ದೇಶಿಸಿದ್ದರು. ‘ಕೃಷ್ಣ ನೀ ಬೇಗನೆ ಬಾರೋಸಿನಿಮಾವನ್ನು ಮುನಿರಾಜು ಎಂಬ ವಿತರಕರು ರೀರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಸ ರೂಪ ಸಹ ನೀಡುತ್ತಿದ್ದಾರೆ.
    ಅಂದರೆ, “70 ಲಕ್ಷ ಖರ್ಚು ಮಾಡಿ, ಕೃಷ್ಣ ನೀ ಬೇಗನೆ ಬಾರೋ ಸಿನಿಮಾವನ್ನು ನಾನು ಸಿನಿಮಾಸ್ಕೋಪ್, 7.1 ಸೌಂಡ್ ಎಫೆಕ್ಟ್, ಡಿ ಐ, ಕಲರಿಂಗ್ ಎಲ್ಲಾ ಮಾಡಿಸಿ, ಹೊಚ್ಚ ಹೊಸ ಸಿನಿಮಾದ ಹಾಗೆ 150 ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡುತ್ತೇನೆ. ಆಗ, ಈ ಸಿನಿಮಾ ಈಸ್ಟ್‌ಮನ್ ಕಲರ್ ಇತ್ತು. ಈಗಿನ ಟ್ರೆಂಡ್ ಇದೆಯಲ್ಲಾ ಹಾಗೇ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಏಪ್ರಿಲ್ ಮೊದಲ ವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ರೀರಿಲೀಸ್ ಮಾಡುತ್ತಿದ್ದೇನೆ.” ಎಂದು ತಿಳಿಸಿದರು ಮುನಿರಾಜು. ಅಂದಹಾಗೆ, “ನಾನು ಅಣ್ಣಾವ್ರ ಸಿನಿಮಾಗಳನ್ನು ರೀರಿಲೀಸ್ ಮಾಡುತ್ತಿದ್ದೆ. ವಿಷ್ಣುವರ್ಧನ್ ಸಿನಿಮಾಗಳನ್ನು ರೀರಿಲೀಸ್ ಮಾಡಬೇಕು ಅಂತ ಅಭಿಮಾನಿಗಳು ಕೇಳಿಕೊಂಡಿದ್ದರು. ಅವರಿಗಾಗಿ, ಈ ಸಿನಿಮಾಗೆ ಡಿಜಿಟಲ್ ಟಚ್ ಕೊಟ್ಟು ರಿಲೀಸ್ ಮಾಡುತ್ತಿದ್ದೇನೆ. ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇನೆ“, ಎಂದು ಮುನಿರಾಜು ಹೇಳಿದ್ದಾರೆ

    ಬೆಳ್ಳಿ ತೆರೆಯ ಮೇಲೆ ಮತ್ತೆ ವಿಷ್ಣುದಾದ! 150 ಚಿತ್ರಮಂದಿರಗಳಲ್ಲಿ ಕೃಷ್ಣನ ಅವತಾರ... ಬೆಳ್ಳಿ ತೆರೆಯ ಮೇಲೆ ಮತ್ತೆ ವಿಷ್ಣುದಾದ! 150 ಚಿತ್ರಮಂದಿರಗಳಲ್ಲಿ ಕೃಷ್ಣನ ಅವತಾರ... ಬೆಳ್ಳಿ ತೆರೆಯ ಮೇಲೆ ಮತ್ತೆ ವಿಷ್ಣುದಾದ! 150 ಚಿತ್ರಮಂದಿರಗಳಲ್ಲಿ ಕೃಷ್ಣನ ಅವತಾರ...

    ಡಾರ್ಲಿಂಗ್ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ! ‘ರಾಧೆ-ಶ್ಯಾಮ್’ ವಿಮರ್ಶೆ ಓದಿ ಖಿನ್ನತೆ…

    ಹಿಂದಿ ಚಿತ್ರಕ್ಕೆ ತೆರಿಗೆ ವಿನಾಯತಿ ನೀಡಿದ್ದೀರಿ, ‘ಜೇಮ್ಸ್’ಗೂ ನೀಡಿ: ಸಿಎಂಗೆ ಅಪ್ಪು ಅಭಿಮಾನಿಗಳ ಒತ್ತಾಯ

    The Kashmir Filesಗೆ ತೆರಿಗೆ ವಿನಾಯತಿ ನೀಡಿದ ಸಿಎಂ, ಸ್ಪೀಕರ್ ವತಿಯಿಂದ ಸಚಿವರು-ಶಾಸಕರಿಗೆ ಸ್ಪೆಷಲ್ ಶೋ!

    ನಾನು ತುಂಬ ಲಕ್ಕಿ, ವಿಚ್ಛೇದನವಾದರೂ ಈಗಲೂ ಇಬ್ಬರು ಪತ್ನಿಯರೂ ನನ್ನ ಜತೆಗಿದ್ದಾರೆ: ಅಮಿರ್ ಖಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts