More

    ಮತ್ತೆ ಬಿಜೆಪಿ ಸೇರೋದಕ್ಕೆ ರೆಡಿಯಾದ್ರು ವಿಜಯಶಾಂತಿ

    ಹೈದರಾಬಾದ್​: ದಕ್ಷಿಣ ಭಾರತದ ಪ್ರಸಿದ್ಧ ನಟಿ ವಿಜಯಶಾಂತಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸೋಮವಾರ ನವದೆಹಲಿಯಲ್ಲಿ ಅಮಿತ್ ಷಾ ಅವರನ್ನು ಭೇಟಿಯಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಲಿದ್ದಾರೆ.

    ಮಾಧ್ಯಮ ವರದಿಗಳ ಪ್ರಕಾರ, ವಿಜಯಶಾಂತಿ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿದ್ದಾರೆ. ಖುಷ್ಬೂ ಸುಂದರ್ ಬಿಜೆಪಿ ಸೇರಿದಾಗಲೇ ವಿಜಯಶಾಂತಿ ಕೂಡ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಕೇಳಿಬಂದಿತ್ತು. ಅದು ಈಗ ನಿಜವಾಗುತ್ತಿದೆ. ವಿಜಯಶಾಂತಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ ಕೂಡ ಹೈದರಾಬಾದ್​ನಿಂದ ದೆಹಲಿಗೆ ತೆರಳಿದ್ದಾರೆ.

    ಇದನ್ನೂ ಓದಿ:  ಪರಮಾಧಿಕಾರ ಬಳಸೋದಕ್ಕೆ ಅವಕಾಶ ಕೊಡಬೇಡಿ : ದೀದಿ ಸರ್ಕಾರಕ್ಕೆ ಗರ್ವನರ್ ವಾರ್ನಿಂಗ್​

    ವಿಜಯಶಾಂತಿ ಅವರ ರಾಜಕೀಯ ಬದುಕನ್ನು ಗಮನಿಸಿದಾಗ 1998ರಲ್ಲೇ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು. ಕೂಡಲೇ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ಅದೇ ವರ್ಷ ನೆಲ್ಲೂರಿನಲ್ಲಿ ಸಾರ್ವಜನಿಕ ಜಾಥಾದಲ್ಲೂ ಅವರು ಭಾಗಿಯಾಗಿ ಸಂಚಲನ ಮೂಡಿಸಿದ್ದರು. 199ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಕಡಪ್ಪಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆಯಾದಾಗ ವಿಜಯಶಾಂತಿ ಹೆಸರನ್ನು ಬಿಜೆಪಿ ಪ್ರಕಟಿಸಿತ್ತು. ಬಳಿಕ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಆದ್ದರಿಂದ ವಿಜಯಶಾಂತಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. 1996ರ ತಮಿಳುನಾಡು ಚುನಾವಣೆಯಲ್ಲಿ ಜಯಲಲಿತಾ ಪರ ತಾರಾ ಪ್ರಚಾರಕರಾಗಿ ಭಾಗವಹಿಸಿದ್ದರು. ಲೋಕಸಭೆ ಚುನಾವಣೆಯಲ್ಲೂ ಅವರು ತಾರಾ ಪ್ರಚಾರಕರಾಗಿ ತಮಿಳುನಾಡಿನಲ್ಲಿ ಪ್ರಚಾರ ಮಾಡಿದ್ದರು.

    ಇದನ್ನೂ ಓದಿ:  ಡಿ.8ಕ್ಕೆ ಮತ್ತೊಮ್ಮೆ ಕರ್ನಾಟಕವೂ ಬಂದ್​! ರೈತ ಸಂಘಟನೆಗಳಿಂದ ಕರೆ

    ಬಳಿಕ ಬಿಜೆಪಿ ಬಿಟ್ಟ ಅವರು 2009ರಲ್ಲಿ ತಲ್ಲಿ ತೆಲಂಗಾಣ ಎಂಬ ರಾಜಕೀಯ ಪಕ್ಷ ಹುಟ್ಟುಹಾಕಿದರು. ಇದನ್ನು ಬಳಿಕ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​)ಯಲ್ಲಿ ವಿಲೀನಗೊಳಿಸಿದರು. 2009ರ ಲೋಕಸಭೆ ಚುನಾವಣೆಯಲ್ಲಿ ಟಿಆರ್​ಎಸ್​ ಟಿಕೆಟ್​ನಲ್ಲಿ ಮೇಡಕ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2011ರಲ್ಲಿ ತೆಲಂಗಾಣ ಹೋರಾಟದ ವೇಳೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರಿಯಾದ ಕ್ರಮದಲ್ಲಿಲ್ಲ ಎಂದು ಇದು ತಿರಸ್ಕೃತವಾಗಿತ್ತು. 2014ರಲ್ಲಿ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಜತೆಗೆ ಭಿನ್ನಮತ ಮೂಡಿ ಕಾಂಗ್ರೆಸ್ ಸೇರಿ ಮೇಡಕ್​ನಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. (ಏಜೆನ್ಸೀಸ್)

    ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್​ರೇಪ್​: ನಿರ್ಭಯಾ, ಅರುಣಾ ಶಾನುಭಾಗ್​ ಪ್ರಕರಣ ಹೋಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts