More

    ಗುರುವಾದ ಶರಣ್; ಮೇ 28ಕ್ಕೆ ಅವತಾರ ಪುರುಷ

    ಬೆಂಗಳೂರು: ನಿರೀಕ್ಷಿತ ಚಿತ್ರಗಳ ಬಿಡುಗಡೆ ದಿನಾಂಕಗಳೆಲ್ಲ ಘೋಷಣೆಯಾಗಿವೆ. ಆದರೆ, ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರದ ಬಿಡುಗಡೆಯ ಬಗ್ಗೆ ಸುದ್ದಿಯೇ ಇರಲಿಲ್ಲ. ಈಗ ಚಿತ್ರತಂಡದವರು ಕೊನೆಗೂ ಚಿತ್ರವನ್ನು ಮೇ 28ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಗೆ ಕಾರಣ ಶರಣ್ ಹುಟ್ಟುಹಬ್ಬ; ಶನಿವಾರ ಶರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ಶುಭಕೋರಿದ್ದು, ಇದೇ ಸಂದರ್ಭದಲ್ಲಿ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದ್ದಾರೆ.

    ಮೇ 28ಕ್ಕೆ ‘ಅವತಾರ ಪುರುಷ – ಅಷ್ಟದಿಗ್ಬಂಧನ ಮಂಡಲಕ’ ಚಿತ್ರ ಬಿಡುಗಡೆಯಾಗಲಿದ್ದು, ಅದಾಗಿ ಎರಡು ತಿಂಗಳಿಗೆ ‘ಅವತಾರ ಪುರುಷ – ತ್ರಿಶಂಕು’ ಚಿತ್ರ ಬಿಡುಗಡೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರಗಳನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ವಿುಸಿದ್ದಾರೆ. ಶರಣ್ ಹುಟ್ಟುಹಬ್ಬಕ್ಕೆ ‘ಗುರು ಶಿಷ್ಯರು’ ಚಿತ್ರತಂಡದವರು ಮೋಷನ್ ಪೋಸ್ಟರ್ ಗಿಫ್ಟ್ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಶರಣ್ ಈ ಚಿತ್ರಕ್ಕಾಗಿ ಮೀಸೆ ಬಿಟ್ಟಿದ್ದು, ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಡೇಶ್ ಹಂಪಿ ಈ ಚಿತ್ರವನ್ನು ನಿರ್ದೇಶಿಸಿದರೆ, ಶರಣ್ ಮತ್ತು ತರುಣ್ ಸುಧೀರ್ ನಿರ್ಮಾಪಕರಾಗಿದ್ದಾರೆ.

    VIDEO| ಪಿಟ್ಟ ಕಥಲು ಟ್ರೈಲರ್ ಬಿಡುಗಡೆ: ಮತ್ತೆ ವೈರಲ್​ ಆಯ್ತು ಶ್ರುತಿ ಹಾಸನ್​-ಸಂಜಿತ್ ಹೆಗ್ಡೆ ಬೋಲ್ಡ್​ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts