More

    VIDEO| ಟೀ ಬ್ರೇಕ್​ನಲ್ಲಿ ನಟ ಸತೀಶ್​ ನೀನಾಸಂ ಮಾಡೋ ಕೆಲಸ ಒಂದೊಂದಲ್ಲ ಬಿಡಿ…

    ಬೆಂಗಳೂರು: ನಟ ನೀನಾಸಂ ಸತೀಶ್ ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೊನೇ ಹಂತದ ಶೂಟಿಂಗ್​ ಮುಕ್ತಾಯವಾಗಿ ಕುಂಬಳಕಾಯಿ ಒಡೆಯಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆ ಚಿತ್ರದ ಚಿತ್ರೀಕರಣದ ಗ್ಯಾಪ್​ನಲ್ಲೇ ನಟ ಸತೀಶ್ ಟೀ ಅಂಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ.

    ಇದನ್ನೂ ಓದಿ: ರಾಖಿ ಋಣವನ್ನು ಈ ಜನ್ಮದಲ್ಲಿ ತೀರಿಸೋಕೆ ಸಾಧ್ಯವಿಲ್ಲ: ರಿತೇಶ್​

    ಹೌದು, ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಸದ್ಯ ಮೈಸೂರಿನ ಹಲವೆಡೆ ಶೂಟಿಂಗ್​ ಮಾಡಿಕೊಳ್ಳುತ್ತಿದೆ. ಈ ಶೂಟಿಂಗ್​ನ ಬಿಡುವಿನಲ್ಲಿ ಸೆಟ್​ ಬಳಿಯ ಟೀ ಶಾಪ್​ನಲ್ಲಿ ಸತೀಶ್​ ಪ್ರತ್ಯಕ್ಷರಾಗಿ ಬಿಸಿ ಬಿಸಿ ಟೀ ಸವಿದು ಬಂದಿದ್ದಾರೆ. ಅಷ್ಟೇ ಅಲ್ಲ, ಖಡಕ್ ಟೀ ಮಿಕ್ಸಿಂಗ್​ ಮಾಡುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ತಾಜ್​ ಮಹಲ್​ ಎದುರು ಏನು ಮಾಡ್ತಿದ್ದಾರೆ ಅಕ್ಷಯ್​?

    ಇತ್ತೀಚೆಗಷ್ಟೇ ಇದೇ ಶೂಟಿಂಗ್​ ಸೆಟ್​ಗೆ ನಿರ್ದೇಶಕ ಎಸ್​. ವಿ. ರಾಜೇಂದ್ರ ಸಿಂಗ್ ಬಾಬು ಭೇಟಿ ನೀಡಿದ್ದರು. ಇನ್ನೇನು ಜನವರಿ 4ಕ್ಕೆ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳಲಿದ್ದು, 5ರಂದು ತಮಿಳು ಸಿನಿಮಾ ನಿಮಿತ್ತ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

    ನಟನಾಗಿದ್ದ ಆಯುಷ್ಮಾನ್​ ಖುರಾನಾ ಇದೀಗ ‘ಡಾಕ್ಟರ್’ ಆಗೋಕೆ ಹೊರಟಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts