More

    ದಿ ಕಾಶ್ಮೀರ್ ಫೈಲ್ಸ್​ ಚಿತ್ರಕ್ಕೆ ತೆರಿಗೆ ವಿನಾಯಿತಿ; ನಟ ಅನಂತ್​ ನಾಗ್ ಏನೆಂದರು?

    ಬೆಂಗಳೂರು: ಈ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಜತೆ ಅತ್ಯುತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ದಿ ಕಾಶ್ಮೀರ್​ ಫೈಲ್ಸ್ ಚಿತ್ರವನ್ನು ರಾಜ್ಯದ ಶಾಸಕರು-ಸಚಿವರು ಕೂಡ ವೀಕ್ಷಿಸಲು ಮುಂದಾಗಿದ್ದಾರೆ. ಇದಕ್ಕೂ ಮೊದಲು ರಾಜ್ಯ ಸರ್ಕಾರ ಆ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದೆ. ಈ ಕುರಿತು ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ ಕೆಲವರಿಂದ ಅಪಸ್ವರ ಕೂಡ ಕೇಳಿಬಂದಿದೆ.

    ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಿನಿಮಾ ಭಾರಿ ಸುದ್ದಿಯಲ್ಲಿದೆ. ಈ ಸಿನಿಮಾ ಕುರಿತು ಕನ್ನಡದ ಹಿರಿಯ ಹಾಗೂ ಖ್ಯಾತ ನಟ ಅನಂತ್​ ನಾಗ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್​; ಇಬ್ಬರ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ..

    ಒಳ್ಳೆಯ ಸಿನಿಮಾ ಮಾಡಿದ್ದಾರೆ, 1990ರ ಜನವರಿ 19 ಹಾಗೂ 20ರಂದು ಯಾವ ರೀತಿ ರಕ್ತಪಾತ ಆಯ್ತು ಎನ್ನುವುದನ್ನು ತೋರಿಸಿದ್ದಾರೆ. ಆರು ಲಕ್ಷ ಕಾಶ್ಮೀರಿ ಪಂಡಿತರನ್ನ ಓಡಿಸಲಾಗಿತ್ತು. 32 ವರ್ಷ ಹುದುಗಿದ್ದ ಸತ್ಯ ಈ ಚಿತ್ರದಿಂದ ಆಚೆ ಬಂದಿದ್ದು, ಸಿನಿಮಾ ಜಾಗೃತಿ ಮೂಡಿಸುತ್ತಿದೆ. ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದ್ದ ಸತ್ಯ ಸಿನಿಮಾ ಮೂಲಕ ಹೊರಗೆಡಹಿದ್ದಾರೆನ ಎಂದು ಅನಂತ್​ನಾಗ್ ಹೇಳಿದ್ದಾರೆ.

    ಇದನ್ನೂ ಓದಿ: ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

    ಇನ್ನು ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ಕುರಿತು ಕೂಡ ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಮೊನ್ನೆ ನಾಲ್ಕು ರಾಜ್ಯಗಳಲ್ಲಿ ಗೆದ್ದಿದ್ದು ಅಭಿವೃದ್ಧಿ ಆಧಾರದ ಮೇಲೆ. ಅಲ್ಲಿ ಯಾವ ಜಾತಿ-ಧರ್ಮದ ಆಧಾರದ ಮೇಲೆ ಗೆದ್ದಿದ್ದಲ್ಲ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ. ಇನ್ನು ತೆರಿಗೆ ವಿನಾಯಿತಿ ಕೊಡಲಿಕ್ಕೆ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ಹಕ್ಕು ಇರುತ್ತದೆ. ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಪ್ರಶ್ನೆ ಮಾಡುವುದಿದ್ದರೆ ಮುಂದಿನ ಚುನಾವಣೆ ಸಂದರ್ಭದಲ್ಲಿ ಮಾಡಲಿ ಎಂದಿರುವ ಅನಂತ್​ನಾಗ್, ಜನರಲ್ಲಿ ಜಾಗೃತಿ ಮೂಡಿಸುವಂತಹ ಸಿನಿಮಾ ಬಂದಾಗ ಪ್ರಶಂಸೆ ನೀಡಬೇಕು ಮತ್ತು ಬೆಂಬಲಿಸಬೇಕು, ಅದನ್ನ ಮೋದಿಯವರು ಮಾಡಿದ್ದಾರೆ ಎಂದು ಹೇಳಿದರು.

    ಭೀಕರ ಅಪಘಾತ: ತಾಯಿ-ಮಗಳ ಸಾವು, ತಂದೆಯ ಪರಿಸ್ಥಿತಿ ಗಂಭೀರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts